ಕುಂಬ್ರದಲ್ಲಿ ಮಿಲಾದ್ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಾವು ಧರ್ಮವಲ್ಲ , ಧರ್ಮದೊಳಗೆ ನಾವಿರುವುದು: ಕೆ ಪಿ ಅಹ್ಮದ್ ಹಾಜಿ

ಪುತ್ತೂರು; ನಾವು ಪ್ರತೀಯೊಬ್ಬರೂ ಧರ್ಮಗಳ ಬಗ್ಗೆ ತಿಳಿದುಕೊಳ್ಳಬೇಕು, ಧರ್ಮಗಳ ಬಗ್ಗೆ ತಿಳುವಳಿಕೆ ಉಳ್ಳವನೇ ಬುದ್ದಿಜೀವಿ ಅಥವಾ ಬುದ್ದಿವಂತ ಎನ್ನಲು ಸಾಧ್ಯ, ನಾವು ಯಾರೂ ಧರ್ಮವಲ್ಲ, ಧರ್ಮದೊಳಗೆ ನಾವಿರುವುದು ಎಂಬ ಭಾವನೆ ಮೂಡಿದರೆ ಎಲ್ಲಾ ಕಡೆಯೂ ಸೌಹಾರ್ಧತೆ ನೆಲಗೆಗೊಳ್ಳಲು ಸಾಧ್ಯವಾಗುತ್ತದೆ ಎಂದು ಕುಂಬ್ರ ಬದ್ರಿಯಾ ನಗರ ಬದ್ರಿಯಾ ಜಮಾತ್ ಕಮಿಟಿ ಅಧ್ಯಕ್ಷ ಕೆ ಪಿ ಅಹ್ಮದ್ ಹಾಜಿ ಹೇಳಿದರು.

ಅವರು ಕುಂಬ್ರ ಬದ್ರಿಯಾನಗರ ಬದ್ರಿಯಾ ಮದ್ರಸ ಸಭಾಂಗಣದಲ್ಲಿ ನಡೆದ ಈದ್‌ಮಿಲಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರವಾದಿ ಚರ್ಯೆ ಏನೆಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು ಆ ಬಳಿಕ ಅದನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ನಾವು ನೈಜ ಪ್ರವಾದಿ ಅನುಯಾಯಿಯಾಗಲು ಸಾಧ್ಯವಾಗುತ್ತದೆ. ಪರಸ್ಪರ ಸೌಹಾರ್ಧತೆಯ , ಐಕ್ಯತೆಯ ಸಂದೇಶವನ್ನು ಸಾರಿದ ಪ್ರವಾದಿಯವರು ಜಗತ್ತಿಗೆ ನಾಯಕರಾದವರು. ಪ್ರವಾದಿ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ನಾಯಕರಲ್ಲ ಅವರು ವಿಸ್ವ ಮಾನವ ಕುಲದ ನಾಯಕರಾಗಿ ಅಲ್ಲಾಹನು ನೇಮಿಸಿದ ಮಹಾನುಭಾವರಾಗಿದ್ದಾರೆ. ಈದ್ ಮಿಲಾದ್ ಆಚರಣೆ ಮಾಡಿದ ಮಾತ್ರಕ್ಕೆ ನಾವು ಅವರನ್ನು ಪ್ರೀತಿಸಿದೆವು ಎನ್ನಲು ಸಾಧ್ಯವಿಲ್ಲ. ನಮ್ಮ ದೇಹಕ್ಕಿಂತಲೂ ಹೆಚ್ಚಾಗಿ ನಾವು ನಮ್ಮ ಪ್ರವಾದಿಯವರನ್ನು ಪ್ರೀತಿಸುವ ಸಹೃದಯಿ ಮಾನವರಾಗಬೇಕು ಎಂದು ಹೇಳಿದರು.

ಜಮಾತ್ ಉಪಾಧ್ಯಕ್ಷರಾದ ಹಮೀದ್ ದರ್ಬಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಯೂಸುಫ್ ಕಡ್ತಿಮರ್, ಉಸ್ಮಾನ್ ಮುಸ್ಲಿಯಾರ್ ಶಾಂತಿನಡಿ, ಕೆ ಬಿ ಮಹಮ್ಮದ್ ಬದ್ರಿಯಾನಗರ, ಜಮಾತ್‌ಪ್ರ. ಕಾರ್ಯದರ್ಶಿ ಇಸ್ಮಾಯಿಲ್ ಕೋಳಿಗದ್ದೆ, ಕಾರ್ಯದರ್ಶಿ ಬಶೀರ್ ಕಡ್ತಿಮಾರ್, ಕೋಶಾಧಿಕಾರಿ ಅಬ್ಬಾಸ್ ಬ್ರೆಂಚ್ , ಅರಬಿಕುಂಞಿ ಮಗಿರೆ, ಅರಬಿ ಹಾಜಿ ಡಿಂಬ್ರಿ, ಅದ್ರಮಾ ಕೊಯಿಲ, ಮದ್ರಸ ಉಸ್ತುವಾರಿ ಪಳ್ಳಿಕುಂಞಿ ಕಡ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.

ಖತೀಬರಾದ ಅಝೀಜ್ ಸಅದಿ ದುವಾ ನೆರವೇರಿಸಿದರು. ಜಾಬಿರ್ ಜೌಹರಿ, ಸವಾದ್ ಬದ್ರಿಯಾ ನಗರ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.