ಏಳ್ಮುಡಿಯಲ್ಲಿ ಅಪೋಲೋ ಫಾರ್ಮಸಿಯ ಪುತ್ತೂರಿನ 3ನೇ ಶಾಖೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಔಷಧಿಗಳ ಮಾರಾಟ ಕ್ಷೇತ್ರದಲ್ಲಿ ಪ್ರಸಿದ್ಧಿ ಗಳಿಸಿರುವ ಅಪೋಲೋ ಫಾರ್ಮಸಿಯ ಪುತ್ತೂರಿನ ಮೂರನೇ ಶಾಖೆಯು ಏಳ್ಮುಡಿ ರಸ್ತೆಯಲ್ಲಿರುವ ಎಂ.ಜಿ. ಕಾಂಪ್ಲೆಕ್ಸ್ನಲ್ಲಿ ಅ.18ರಂದು ಶುಭಾರಂಭಗೊಂಡಿತು . ಚೇತನಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ| ಜೆ.ಸಿ. ಅಡಿಗ ಅವರು ರಿಬ್ಬನ್ ಕತ್ತರಿಸಿದರು. ಬಳಿಕ ನೂತನ ಶಾಖೆಯನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು, ಕೋವಿಡ್ ಬಳಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವ ಈ ಸಂದರ್ಭದಲ್ಲಿ ಅಪೋಲೋ ಫಾರ್ಮಸಿಯ ಪುತ್ತೂರಿನ ಮೂರನೇ ಶಾಖೆಯು ಶುಭಾರಂಭಗೊಂಡಿದೆ. ಪುತ್ತೂರು ಮುಂದಿನ ದಿನಗಳಲ್ಲಿ ಗ್ರಾಮಾಂತರ ಜಿಲ್ಲೆಯಾಗಬೇಕು ಎನ್ನುವುದು ನಮ್ಮ ಅಪೇಕ್ಷೆ. ಅದಕ್ಕೆ ಪೂರಕವಾಗಿ ಇಲ್ಲಿ ಅನೇಕ ನರ್ಸಿಂಗ್ ಹೋಮ್‌ಗಳಿವೆ. ನಾಲ್ಕು ತಾಲೂಕುಗಳಿಗೆ ಪ್ರಮುಖ ಕೇಂದ್ರವಾಗಿರುವ ಪುತ್ತೂರಿಗೆ ಆಸ್ಪತ್ರೆಗಳು, ಫಾರ್ಮಸಿಗಳು ಬಂದಾಗ ಜನರು ಹೆಚ್ಚು ಆರೋಗ್ಯವಂತರಾಗಿ ಜೀವನ ನಡೆಸಲು ಸಾಧ್ಯ. ಉತ್ತಮವಾಗಿ ಜನತೆಗೆ ಸೇವೆಯನ್ನು ನೀಡಿ ಎಂದು ಶುಭಹಾರೈಸಿದರು.


ಚೇತನಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ| ಜೆ.ಸಿ. ಅಡಿಗರವರು ಮಾತನಾಡಿ, ಬೆಳೆಯುತ್ತಿರುವ ಪುತ್ತೂರು ನಗರಕ್ಕೆ ಔಷಧ ಅಂಗಡಿಗಳ ಅಗತ್ಯ ನಿಜಕ್ಕೂ ಇದೆ. ಈ ನಿಟ್ಟಿನಲ್ಲಿ ಅಪೋಲೋ ಫಾರ್ಮಸಿಯ ಮೂರನೇ ಶಾಖೆಯನ್ನು ನಗರದ ಮುಖ್ಯಭಾಗದಲ್ಲಿ ಆರಂಭಿಸಲಾಗಿದೆ. ಇಲ್ಲಿ ಹೆಚ್ಚಿನ ಔಷಧಗಳು ಕಡಿಮೆ ದರದಲ್ಲಿ ಲಭ್ಯವಿದೆ. ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಪುತ್ತೂರು ಸಿಟಿ ಗೋಲ್ಡ್ನ ಮಾಲಕರಾದ ಆದಂ ಕುಂಞ0, ಎಂ.ಜಿ. ಕಾಂಪ್ಲೆಕ್ಸ್ ಮಾಲಕರಾದ ಅಬ್ದುಲ್ ರಝಾಕ್, ಅಪೋಲೋ ಫಾರ್ಮಸೀಸ್ ಲಿಮಿಟೆಡ್ ಕರ್ನಾಟಕದ ಮ್ಯಾನೇಜರ್ ಜೆ.ಸೆಂಥಿಲ್ ಕುಮಾರ್, ಎಕ್ಸಿಕ್ಯೂಟಿವ್ ಪ್ರಭು ಸೇರಿದಂತೆ ಶಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪುತ್ತೂರಿನ ಏಳ್ಮುಡಿಯಲ್ಲಿ ಅಪೋಲೋ ಸಂಸ್ಥೆಯ ಮತ್ತೊಂದು ಶಾಖೆ ಆರಂಭಗೊಂಡಿದೆ . ಅತ್ಯುತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ದರದಲ್ಲಿ ಲಭ್ಯವಿದ್ದು, ಮನೆಗೆ ತಲುಪಿಸುವ ಹೋಮ್ ಡೆಲಿವರಿ ವ್ಯವಸ್ಥೆಯೂ ಇದೆ. ಫೋನ್ ಮೂಲಕವೂ ಔಷಧಗಳನ್ನು ಮನೆಗೆ ತರಿಸಿಕೊಳ್ಳಬಹುದು. ಪ್ರತೀ ತಿಂಗಳೂ ಸಂಸ್ಥೆಯು ಗ್ರಾಹಕರಿಗೆ ಕೊಡುಗೆಗಳನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿ ಡಿಸ್ಕೌಂಟ್ ಕೂಡ ಲಭ್ಯವಿದೆ. ಜನತೆ ಇದರ ಸದುಪಯೋಗವವನ್ನು ಪಡೆಯಬಹುದು.
ಭರತ್ ಭೂಷಣ್, ಕ್ಲಸ್ಟರ್ ಮ್ಯಾನೇಜರ್, ಅಪೋಲೋ ಫಾರ್ಮಸೀಸ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.