ಸರ್ವ ಧರ್ಮೀಯರ ಜೊತೆ ಸೌಹಾರ್ಧತೆಯನ್ನು ಕಾಪಾಡಿಕೊಂಡಿದ್ದ ಪೈಗಂಬರ್ ಸ. ಅ: ಎಸ್ ಬಿ ದಾರಿಮಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಜಗತ್ತಿನ ಜನತೆಗೆ ಶಾಂತಿದೂತರಾಗಿ ಆಗಮಿಸಿದ್ದ ಪ್ರವಾದಿ ಸ ಅ ರವರು ಇಹಲೋಕಕ್ಕೆ ವಿದಾಯ ಹೇಳುವ ಸಂಧರ್ಭದಲ್ಲಿ ತನ್ನ ಬೆಲೆಬಾಳುವ ವಸ್ತ್ರವೊಂದು ಒಬ್ಬ ಯಹೂದಿಯ ಬಳಿ ಅಡವಿಡಲಾಗಿತ್ತು. ಇದು ಅವರು ತನ್ನ ಕೊನೆಯುಸಿರಿನ ತನಕ ಸರ್ವ ಧರ್ಮೀಯರೊಂದಿಗೂ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬಂದಿದ್ದರು ಎಂಬದಕ್ಕೆ ಸಾಕ್ಷಿಯಾಗಿದೆ ಎಂದು ಮುಲ್ಕಿ ಶಾಫಿ ಜಾಮಿಯಾ ಮಸೀದಿಯ ಖತೀಬ್ ಯಸ್ ಬಿ ದಾರಿಮಿ ಮೀಲಾದ್ ಸಂದೇಶ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಜಗತ್ತಿನ ಸರ್ವ ಸೃಷ್ಟಿ ಜಾಲಗಳು ದೇವನ ಕುಟುಂಬವೆಂದೂ ಅವನ ಕುಟುಂಬಕ್ಕೆ ಒಳಿತು ಮಾಡ ಬೇಕೆಂದೂ ಕಲಿಸಿದ ಪ್ರವಾದಿಗಳು ಜನರನ್ನು ಅಮಾನವೀಯವಾದ ಎಲ್ಲಾ ರೀತಿಯ ಕಂದಾಚಾರಗಳಿಂದ ಮುಕ್ತ ಗೊಳಿಸಿದರು.ಜಾತಿ ವ್ಯವಸ್ಥೆಯಿಂದ ಮತ್ತು ಉನ್ನತ ಕುಲ ಗೋತ್ರದವರ ದಬ್ಬಾಳಿಕೆಯಿಂದ ರೋಸಿ ಹೋಗಿದ್ದ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇಸ್ಲಾಂ ಧರ್ಮಕ್ಕೆ ಮಾರು ಹೋದರೇ ಹೊರತು ಕೆಲವರು ಅಂದು ಕೊಂಡಂತೆ ಇಸ್ಲಾಂ ಧರ್ಮವನ್ನು ಜಗತ್ತಲ್ಲಿ ಬಲಾತ್ಕಾರದಿಂದ ಹರಡಲಾಗಿಲ್ಲ ಎಂದರು.

ಸಣ್ಣ ಪುಟ್ಟ ಕ್ಷುಲ್ಲಕ ವಿಚಾರಗಳಿಗೆ ವರ್ಷಘಟ್ಟಲೆ ಯುದ್ದ ಮಾಡುತ್ತಿದ್ದ ಜನರನ್ನ ಪರಿವರ್ತಿಸಿ ಪರಸ್ಪರ ಸಹಾಯ ಸಹಕಾರ ನೀಡುವ ಮತ್ತು ಎಲ್ಲಾ ಜಾತಿ ಜನಾಂಗದವರ ನೋವಿಗೆ ಸ್ಪಂದಿಸುವ ಜನತೆಯನ್ನಾಗಿ ಮಾರ್ಪಡಿಸಿದರು. ಶೂದ್ರನಾದವ ದೇವಳ ಪ್ರವೇಶಿದರೆ ದಂಡ ಕಟ್ಟಬೇಕಾದ ದುಸ್ಥಿತಿ ಇಂದಿಗೂ ಮುಂದುವರೆದಿದ್ದರೆ ಅಂದು ಇದರಿಂದ ಬೇಸತ್ತು ಹೊರನಡೆದ ಅದೇ ಜನ ಇಂದು ಜಾತಿ ಬೇದವಿಲ್ಲದೇ ಜೊತೆಯಾಗಿ ಮೈಕೈ ತಾಗಿಸಿ ನಮಾಜಿಗೆ ಸಾಲು ನಿಲ್ಲುವಂತಾಗಿದೆ. ಈ ತೆರನಾದ ಪರಿವರ್ತನೆಗೆ ಜನರನ್ನು ಸಜ್ಜುಗೊಳಿಸಿದರ ಹಿಂದಿನ ಪ್ರೇರಕ ಶಕ್ತಿಯ ಶ್ರೇಯಸ್ಸು ಆ ಪ್ರವಾದಿಗೆ ಸಲ್ಲಬೇಕು ಎಂದರು.

ಏಕದೇವನನ್ನು ಪರಿಚಯಿಸಿದ ಪ್ರವಾದಿಗಳು ಜನರಿಗೆ ಒಂದುತ್ತಮವಾದ ಧಾರ್ಮಿಕ ಹಾದಿ ತೋರಿಸಿಕೊಟ್ಟು ಜಗತ್ತಿನ ಕೋಟ್ಯಾಂತರ ಜನರನ್ನು ಒಂದೇ ದಾರದಲ್ಲಿ ಪೋಣಿಸುವ ಮೂಲಕ ಐಕ್ಯತೆಯ ನಿದರ್ಶನವನ್ನು ಅನಾವರಣ ಗೊಳಿಸಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟರು. ಕಾರ್ನಾಡ್ ಖತೀಬ್ ಇಸ್ಮಾಯಿಲ್ ದಾರಿಮಿ ಮಾತನಾಡಿ ಮೀಲಾದ್ ಆಚರಣೆ ಎಂದರೆ ಪ್ರವಾದಿ ಯವರ ಮೇಲೆ ದರೂದ್ ಸಲಾತ್ ಹೆಚ್ಚಿಸುವುದೇ ಹೊರತು ಬೇರೇನೂ ಅಲ್ಲ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.