ಸರ್ವೆ ಮೇಗಿನಗುತ್ತು ಕುಟುಂಬದ ಯಾಜಮಾನ ಶ್ರೀಧರ ಶೆಟ್ಟಿ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ನಿವಾಸಿ, ಸರ್ವೆ ಮೇಗಿನಗುತ್ತು ಕುಟುಂಬದ ಯಾಜಮಾನ ಶ್ರೀಧರ ಶೆಟ್ಟಿ( 79)ರವರು ಅಲ್ಪಕಾಲದ ಅಸೌಖ್ಯದಿಂದ ಅ. 19 ರಂದು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು. ಶ್ರೀಧರ ಶೆಟ್ಟಿಯವರು ಬೆಳ್ತಂಗಡಿಯಲ್ಲಿ ಸುಮಾರು 25 ವರ್ಷಗಳ ಕಾಲ ಹೆಸರಾಂತ ಅಟೊಮೊಬೈಲ್ ಉದ್ಯಮಿಯಾಗಿದ್ದು, ಪ್ರಸ್ತುತ ಚೆಲ್ಯಡ್ಕದಲ್ಲಿ ಪ್ರಗತಿಪರ ಕೃಷಿಕರಾಗಿದ್ದು, ಪತ್ನಿ ನೇತ್ರಾವತಿ ಶೆಟ್ಟಿ, ಪುತ್ರರಾದ ಕೃಷಿಕ ಶಿವಪ್ರಸಾದ್ ಶೆಟ್ಟಿ, ಬೆಂಗಳೂರಿನ ಎಚ್‌ಎಎಲ್ ಕಂಪೆನಿಯ ಇಂಜಿನಿಯರ್ ಜಯಪ್ರಕಾಶ್ ಶೆಟ್ಟಿ, ಪುತ್ರಿ ಪವಿತ್ರ ಅಶೋಕ್ ರೈ, ಅಳಿಯ ಪುತ್ತೂರು ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಅಶೋಕ್ ರೈ, ಸೊಸೆಯಂದಿರಾದ ಸೀತಾಲತಾ, ಪದ್ಮಶ್ರೀ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಸೃಗೃಹದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ವಸಂತ ಬಂಗೇರ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿಗಳಾದ ಬಳ್ಳಮಜಲುಗುತ್ತು ಶಿವರಾಮ ಆಳ್ವ, ಅರುಣ್ ಕುಮಾರ್ ರೈ ಅನಾಜೆ, ಜಿ.ಪಂ, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ಪುತ್ತೂರು ರೋಟರಿ ಕ್ಲಬ್ (ಪೂರ್ವ) ಅಧ್ಯಕ್ಷ ಪುರಂದರ ರೈ ಮಿತ್ರಂಪಾಡಿ, ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ.ಬಿ,ವಿಶ್ವನಾಥ್ ರೈ, ಮೇಗಿನಗುತ್ತು, ನಿವೃತ್ತ ಶಿಕ್ಷಕರಾದ ಸುರೇಶ್ ಶೆಟ್ಟಿ, ರಘನಾಥ ರೈ ನುಳಿಯಾಲು, ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಸಾಮಾಜಿಕ ಮುಂದಾಳು ನಾರಾಯಣ ರೈ ಪರ್ಪುಂಜ ಬಾರಿಕೆ ಹಾಗೂ ಮೇಗಿನಗುತ್ತು ಮತ್ತು ನುಳಿಯಾಲು ಕುಟುಂಬಸ್ಥರು, ಊರ-ಪರವೂರ ಹಿತೈಷಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.