ಪುತ್ತೂರು, ಬನ್ನೂರು, ಮರೀಲ್ ಚರ್ಚ್‌ನಲ್ಲಿ ವಾಹನಗಳ ಮೇಲೆ ಆಶೀರ್ವಚನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರದ ಮಾಯಿದೆ ದೇವುಸ್ ಚರ್ಚ್, ಬನ್ನೂರು ಸಂತ ಅಂತೋನಿ ಚರ್ಚ್ ಹಾಗೂ ನಗರದ ಹೊರ ವಲಯದಲ್ಲಿರುವ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ವಾಹನಗಳ ಮೇಲೆ ಆಶೀರ್ವಚನಗೈಯುವ ಕಾರ್ಯಕ್ರಮ ಅ.17ರಂದು ಜರಗಿತು.

                                                           ಬನ್ನೂರು ಚರ್ಚ್

ಮಾಯಿದೆ ದೇವುಸ್ ಚರ್ಚ್‌ನಲ್ಲಿ ಕ್ರಿಸ್ಟೋಫರ್ ಅಸೋಸಿಯೇಶನ್‌ರವರ ನೇತೃತ್ವದಲ್ಲಿ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಧರ್ಮಗುರುಗಳಾದ ವಂ|ಸ್ಟ್ಯಾನಿ ಪಿಂಟೋ, ವಂ|ವಿಜಯ್ ಲೋಬೋ, ವಂ|ಅಶೋಕ್ ರಾಯನ್ ಕ್ರಾಸ್ತಾರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಕ್ರಿಸ್ಟೋಫರ್ ಅಸೋಸಿಯೇಶನ್ ಅಧ್ಯಕ್ಷ ರೋಶನ್ ಡಾಯಸ್, ಕೋಶಾಧಿಕಾರಿ ಮನೋಜ್ ಡಾಯಸ್‌ರವರು ಸಹಕರಿಸಿದರು. ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್‌ರವರು, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್‌ರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಮರೀಲು ಸೆಕ್ರೇಡ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಸಿರಿಲ್ ರೊಡ್ರಿಗಸ್, ಕಾರ್ಯದರ್ಶಿ ನ್ಯಾನ್ಸಿ ಮಾಡ್ತಾ, ಬನ್ನೂರು ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಸಿರಿಲ್ ವಾಸ್, ಪಾಲನಾ ಸಮಿತಿಯ ಸದಸ್ಯರು, ಧರ್ಮಭಗಿನಿಯರು, ವಾಳೆಯ ಗುರಿಕಾರರು ಹಾಗೂ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮರೀಲ್ ಚರ್ಚ್

 

ಮಾಯಿದೆ ದೇವುಸ್ ಚರ್ಚ್
                                              ಮಾಯಿದೆ ದೇವುಸ್ ಚರ್ಚ್

ವಾಹನಗಳು ಮಾನವನ ನಿತ್ಯ ಅಗತ್ಯಗಳಲ್ಲೊಂದು. ಒಂದು ಕಡೆಯಿಂದ ಮತ್ತೊಂದು ಕಡೆಗೆ ನಾವು ಇಚ್ಛಿಸಿದ ಸ್ಥಳಕ್ಕೆ ಹೋಗಬೇಕಾದರೆ ವಾಹನಗಳನ್ನು ಅವಲಂಭಿಸಲೇ ಬೇಕಾಗುತ್ತದೆ. ವಾಹನಗಳನ್ನು ನಾವು ಯಾವಾಗಲೂ ಸುಸ್ಥಿತಿಯಲ್ಲಿಡಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ ಜೊತೆಗೆ ವಾಹನಗಳನ್ನು ನಾವು ಚಾಲನೆ ಮಾಡುವಾಗ ಯಾವುದೇ ಅನಾಹುತವಾಗದಂತೆ ಹಾಗೂ ಸೂಕ್ತವಾದ ದಾಖಲೆಗಳನ್ನು ಹೊಂದುವ ಮೂಲಕ ವಾಹನಗಳನ್ನು ಚಲಾಯಿಸಬೇಕಾಗುತ್ತದೆ. ಆದ್ದರಿಂದ ತಮ್ಮ ತಮ್ಮ ವಾಹನಗಳನ್ನು ಪೂಜನೀಯ ಭಾವನೆಯಲ್ಲಿ ಗೌರವಿಸಬೇಕು ವಂ|ವಲೇರಿಯನ್ ಫ್ರ್ಯಾಂಕ್, ಧರ್ಮಗುರು, ಸೆಕ್ರೇಡ್ ಹಾರ್ಟ್ ಚರ್ಚ್, ಮರೀಲು

ಘನ ಹಾಗೂ ಲಘು ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಆಯಾ ಚರ್ಚ್‌ಗಳಲ್ಲಿ ಶನಿವಾರ ಸಂಜೆ ಹಾಗೂ ಆದಿತ್ಯವಾರ ಬೆಳಗ್ಗಿನ ಪೂಜಾ ಅವಧಿಗಳಲ್ಲಿ ಜರಗುವ ದಿವ್ಯ ಬಲಿಪೂಜೆ ಸಂದರ್ಭದಲ್ಲಿ ವಾಹನಗಳಿಗೆ ಪವಿತ್ರ ಜಲವನ್ನು ಸಿಂಪಡಿಸಿ ಆಶೀರ್ವಚನಗೈಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.