ನೇಮಕಾತಿ ನಿಯಮದಲ್ಲಿ ಅನ್ಯಾಯಾ ಆರೋಪ – ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 1 ವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
  • ಸ್ಪಂದಿಸದಿದ್ದರೆ ಅಸಹಾಕಾರ ಚಳುವಳಿ
  • ಅನಿರ್ವಾರ್ಯವಾದರೆ ತರಗತಿ ಬಹಿಷ್ಕಾರ

 


ಪುತ್ತೂರು: 2017ರಲ್ಲಿ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯದ ಕುರಿತು ಅನೇಕ ರೀತಿಯಲ್ಲಿ ಶಿಕ್ಷಕರೆಲ್ಲಾ ಹಕ್ಕೋತ್ತಾಯ ಮತ್ತು ಹೋರಾಟದ ಬಳಿಕ ಇದೀಗ ಅ.21 ರಿಂದ 26 ರ ತನಕ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವ ತೀರ್ಮಾನದಂತೆ ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಮನವಿ ಸ್ವೀಕರಿಸಿದರು. ಮಕ್ಕಳಿಗೆ, ಪೋಷಕರಿಗೆ ಯಾವುದೇ ತೊಂದರೆ ಆಗದಂತೆ ನಮ್ಮ ಹೋರಾಟ ನಡೆಸುತ್ತೇವೆ ಎಂದು ಪುತ್ತೂರು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ  ಲಕ್ಷ್ಮಣ ನಾಯ್ಕ್ ತಿಳಿಸಿದರು.

ಮುಂದಿನ ಹೋರಾಟ:
ಹೋರಾಟಕ್ಕೆ ಯಾವುದೇ ಸ್ಪಂದನೆ ದೊರೆಯದಿದ್ದರೆ ಮುಂದೆ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ನಿರ್ಣಯದಂತೆ ಬಿಸಿ ಊಟದ ಮಾಹಿತಿ ಅಪ್‌ಡೇಟ್ ಮಾಡದಿರುವುದು, ಮಕ್ಕಳ ದಾಖಲಾತಿ ಮಾಹೊತಿ (ಎಸ್‌ಎಟಿಎಸ್) ಅಪ್‌ಡೇಟ್ ಮಾಡದಿರುವುದು, ರಾಜ್ಯ ಮಟ್ಟದ ರ್‍ಯಾಲಿ, ಧರಣಿ ಸತ್ಯಾಗ್ರಹ ಹೀಗೆ ಹಲವು ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವಿಮಲ್, ಸರಕಾರಿ ಶಿಕ್ಷಕರ ಶಿಕ್ಷಣ ಪ್ರತಿನಿಧಿ ತನುಜ, ಅಶ್ರಫ್, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಪುತ್ತೂರು ತಾಲೂಕು ಕಾರ್ಯದರ್ಶಿ ವೇದಾವತಿ, ಲಕ್ಷ್ಮಣ್ ನಾಯ್ಕ್. ಕೆ, ಜಿಲ್ಲಾ ಸಂಘಟನ ಕಾರ್ಯದರ್ಶಿ ಗಂಗಾವತಿ, ಉಪಾಧ್ಯಕ್ಷ ರಾಮಣ್ಣ ರೈ, ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಹೇಮಲತಾ ಪ್ರದೀಪ್, ಜಿಲ್ಲಾ ಸಂಘದ ಉಪಾಧ್ಯಕ್ಷ ಲಿಂಗರಾಜ್, ಖಜಾಂಜಿ ಶಾಂತಿಮೋರಸ್ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.