ಕೃಷಿ ಯಂತ್ರೋಪಕರಣ, ಬಿಡಿಭಾಗಗಳ ಖರೀದಿ ನೆಲ್ಯಾಡಿ ಪ್ರಾ.ಕೃ.ಪ.ಸಹಕಾರಿ ಸಂಘಕ್ಕೆ ದ್ವಿತೀಯ ಸ್ಥಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: 2020-21ನೇ ಸಾಲಿನಲ್ಲಿ ಪುತ್ತೂರು ತಾಲೂಕು ಮಟ್ಟದಲ್ಲಿ ಅತ್ಯಧಿಕ ಮೌಲ್ಯದ ಕೃಷಿ ಯಂತ್ರೋಪಕರಣ ಹಾಗೂ ಬಿಡಿಭಾಗಗಳ ಖರೀದಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಮಂಗಳೂರಿನಲ್ಲಿ ಅ.20ರಂದು ನಡೆದ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಮಹಾಸಭೆಯಲ್ಲಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಎಂ.,ರವರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ, ಶಾಲು ಹಾಕಿ ಗೌರವಿಸಲಾಯಿತು. ಸಂಘದ ನಿರ್ದೇಶಕ ಬಾಲಕೃಷ್ಣ ಬಾಣಜಾಲು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಕೆ.ರವೀಂದ್ರ ಕಂಬಳಿ, ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನಿರ್ದೇಶಕರುಗಳಾದ ಎಸ್.ರಾಜ ಪೂಜಾರಿ, ಮೋನಪ್ಪ ಶೆಟ್ಟಿ ಎಕ್ಕಾರು, ಯನ್.ಎ.ರವಿಬಸಪ್ಪ, ಸೀತಾರಾಮ ರೈ, ಭಾಸ್ಕರ ಎಸ್.ಕೊಟ್ಯಾನ್, ಎಸ್.ಬಿ.ಜಯರಾಮ ರೈ, ಜಯರಾಮ ಪಿ.ಸಿ., ಕರುಣಾಕರ ಶೆಟ್ಟಿ ಬಿ., ಕೃಷ್ಣಯ್ಯ ಮೂಲೆತೋಟ, ಎನ್.ರಾಜಶೇಖರ ಜೈನ್, ಜಯಶಂಕರ ಬಾಸ್ರಿತ್ತಾಯ, ಜಿ.ತಿಮ್ಮಪ್ಪ ಪೂಜಾರಿ, ಗಣೇಶ್ ಎ., ಪೂವಪ್ಪ ಎ., ಕೆ.ನೀಲಪ್ಪ ನಾಯ್ಕ್, ಹೇಮಾವತಿ, ಶಾರದ ಭಾಗವತ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರು ಗೌರವಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.