ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರೂ.2.38ಲಕ್ಷ ಲಾಭ, ಶೇ.20ಡಿವಿಡೆಂಡ್, ಪ್ರತಿ ಲೀ ಹಾಲಿಗೆ 0.58ಪೈಸೆ ಬೋನಸ್

 

ಪುತ್ತೂರು:ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘವು 2020-21 ನೇ ಸಾಲಿನಲ್ಲಿ ರೂ.2,38,663.49ಲಾಭಗಳಿಸಿ ಸದಸ್ಯರಿಗೆ ಶೇ.೨೦ ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ಹಾಲಿಗೆ ೫೮ ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಬಿ.ಶುಭಕರ ರೈಯವರು ತಿಳಿಸಿದರು.
ಸಭೆಯು ಅ.21ರಂದು ಸಂಘದ ವಠಾರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆವರು, ವರ್ಷಾಂತ್ಯಕ್ಕೆ ಸಂಘದಲ್ಲಿ ೨೨ರ ಮಂದಿ ಸದಸ್ಯರಿದ್ದು ರೂ.46,880 ಪಾಲು ಬಂಡವಾಳವಿದೆ. ಹಾಲು ಉತ್ಪಾದಕರಿಂದ 1,96,379ಲೀಟರ್ ಹಾಲು ಖರೀದಿಸಿದೆ. ಒಕ್ಕೂಟಕ್ಕೆ ನೀಡಿದ ಹಾಲಿನಿಂದ ಸಂಘದಕ್ಕೆ ರೂ.58,89,105ದಾಯ ಬಂದಿರುತ್ತದೆ. ಹಾಲು ವ್ಯಾಪಾರದಿಂದ ಸಂಘವು ರೂ.೪,೯೫,೬೮೪, ಪಶು ಆಹಾರ ಹಾಗೂ ಲವಣಾಂಶ ವ್ಯಾಪಾರದಿಂದ ರೂ.20,423ಲಾಭ ಬಂದಿರುತ್ತದೆ.

ಸಂಘವು ಗಳಿಸಿದ ಲಾಭಾಂಶವನ್ನು ಇಲಾಖೆಯ ನಿಯಮದಂತೆ ವಿಂಗಡಣೆ ಮಾಡಲಾಗಿದ್ದು, ಶೇ.೨೫ರಂತೆ ಕ್ಷೇಮ ನಿಧಿಗೆ ರೂ.೫೯,೬೬೬, ಶೇ.೨ರಂತೆ ಶಿಕ್ಷಣ ನಿಧಿಗೆ ರೂ.೩೫,೮೦, ಶೇ.೬೫ರಂತೆ ಹಾಲು ಉತ್ಪಾದಕರಿಗೆ ಬೋನಸ್ ರೂ.೧,೧೪,೦೨೧, ಶೇ.೧೦ರಂತೆ ಕಟ್ಟಡ ನಿಧಿಗೆ ೧೭,೫೪೧, ರಾಸು ಅಭಿವೃದ್ಧಿ ನಿಧಿಗೆ ರೂ.೧೨೩೯, ದಾನ ಧರ್ಮ ನಿಧಿ ರೂ.೧೨೪೦, ಸಿಬಂದಿ ಬೋನಸ್ ೩೨,೦೦೦, ಶೇ.೨೦ರಂತೆ ಪಾಲು ಮುನಾಫೆ ರೂ.೯,೩೭೬ರಂತೆ ವಿಂಗಡಿಸಲಾಗಿದೆ ಎಂದರು.

ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ರಾಮಣ್ಣ ಪೂಜಾರಿ ಇರ್ದೆ(ಪ್ರ), ಅಜಿತಾ ಶಂಕರಿ(ದ್ವಿ) ಹಾಗೂ ದಿನೇಶ ಕುಮಾರ್ ರೈ(ತೃ) ಹಾಗೂ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.

ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಎಂ. ಮಾತನಾಡಿ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸುಬ್ರಹ್ಮಣ್ಯ ಭಟ್ ದೇವಕಾನ ಮುಖ್ಯ ಅತಿಥಿಯಾಗಿದ್ದರು. ನಿರ್ದೇಶಕರಾದ ಚಂದ್ರಶೇಖರ ರೈ ಬಿ., ಅಜಿತಾಶಂಕರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಶುಭಕರ ರೈ ಸ್ವಾಗತಿಸಿದರು. ಉಪಾಧ್ಯಕ್ಷ ದಿನೇಶ ಕುಮಾರ್ ರೈ ವಂದಿಸಿದರು. ಕಾರ್ಯದರ್ಶಿ ಜೆ.ರಾಜಾರಾಮ ಭಟ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸಹಾಯಕ ಯನ್ ಹಮೀದ್ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.