ಉಪತಹಶೀಲ್ದಾರ್ ಬದಲು ತಹಸೀಲ್ದಾರ್ ಬರಬೇಕು – ಪರಿಶಿಷ್ಟ ಜಾತಿ, ಪಂಗಡದ ಹಿತರಕ್ಷಣೆ ಕುಂದುಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ಸದಸ್ಯರ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಮ್ಮ ಕುಂದು ಕೊರತೆ ಸಭೆಯಲ್ಲಿ ಸಮಸ್ಯೆ ಪರಿಹಾರ ಆಗಬೇಕಾದರೆತಹಸೀಲ್ದಾರ್ ಅಗತ್ಯವಾಗಿ ಬೇಕು. ಉಪತಹಸೀಲ್ದಾರ್ ಬೇಡ ಎಂದು‌ ಪಟ್ಟು ಹಿಡಿದ ಘಟನೆ ಪುತ್ತೂರು ತಾಲೂಕು ಮಟ್ಟದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹಿತರಕ್ಷಣೆ ಮತ್ತು ಕುಂದುಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ನಡೆದಿದೆ. ಅ.22 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪುತ್ತೂರು ಉಪತಹಶೀಲ್ದಾರ್‌ರವರ ಅಧ್ಯಕ್ಷತೆಯಲ್ಲಿ ನಡೆದ ಆರಂಭದಲ್ಲಿ ಉಪತಹಸೀಲ್ದಾರ್ ಬಿ.ಕೆ.ಲೋಕೇಶ್ ಅವರು ಅಧ್ಯಕ್ಷತೆ ವಹಿಸಿ ಸಭೆ ಆರಂಭಿಸಿದಾಗ ದಲಿತ ಮುಖಂಡರು ಮಾತನಾಡಿ ನಮ್ಮ ಸಮಸ್ಯೆಗೆ ನೀವು ಪರಿಹಾರ ನೀಡುವುದಾರೆ ಸಭೆ ಮಾಡುವ‌. ನೀವು ನಮ್ಮ ಸಮಸ್ಯೆಗಳಿಗೆ ನಿಮ್ಮಿಂದ ಪರಿಶೀಲನೆ ಉತ್ತರ ಬರುವುದಾದರೆ ಸಭೆ ಬೇಡ ಎಂದು ತಿಳಿಸಿದರು. ಇದರ ಜೊತೆಗೆ ತಹಸೀಲ್ದಾರ್ ಇಲ್ಲ ಎಂದು‌ ಹಲವು ಪ್ರಮುಖ ಇಲಾಖೆಯ ಅಧಿಕಾರಿಗಳ ಸಭೆಗೆ ಗೈರಾಗಿದ್ದಾರೆ ಎಂದು ಪ್ರಸ್ತಾಪ ಮಾಡಿ ಸಭೆಯಿಂದ ಹೊರಗೆ ಹೋಗಲು ಚಿಂತನೆ ನಡೆಸಿದರು. ಉಪತಹಸೀಲ್ದಾರ್ ಅವರು ಮಾತನಾಡಿ ನಿಮ್ಮ ಸಮಸ್ಯೆ ಎನೆಂದು ಹೇಳಿ ನಾವು  ಸಮಸ್ಯೆಗಳಿಗೆ ಪರಿಹಾರಕ್ಕಾಗಿಯೇ ಸಭೆ ಮಾಡುವುದು ಎಂದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ , ಡಿವೈಎಸ್ಪಿ ಡಾ.ಗಾನ ಪಿ ಕುಮಾರ್, ಪೌರಾಯುಕ್ತ ಮಧು ಎಸ್ ಮನೋಹರ್, ದಲಿತ ಮುಖಂಡರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.