ಬಡಕ್ಕೋಡಿ ಮಸೀದಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೋತ್ಸವ-ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಡಕ್ಕೋಡಿ ಬದ್ರಿಯಾ ಜುಮಾ ಮಸೀದಿ ಇದರ ಆಶ್ರಯದಲ್ಲಿ ಪ್ರವಾದಿ ಜನ್ಮ ದಿನದ ಪ್ರಯುಕ್ತ ದಾರುಸ್ಸಲಾಂ ಮದರಸದ ವಿದ್ಯಾರ್ಥಿಗಳ ಪ್ರತಿಭೋತ್ಸವ ಮತ್ತು ಅಲ್ ಮಿಸ್‌ಬಾಹ್ ಮುಸ್ಲಿಂ ವೆಲ್‌ಫೇರ್ ಫೆಡರೇಶನ್ ವತಿಯಿಂದ ಜಮಾಅತ್‌ನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಹಾಜಿ ಆರ್ತಿಕೆರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಖತೀಬ್ ಅಬ್ದುಲ್ ಗಫೂರ್ ಅಶ್ಶಾಫಿ ದುವಾ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಅಭಿನಂದನಾ ಕಾರ್ಯಕ್ರಮ:
ಸಂಶೋಧನೆಯಲ್ಲಿ ಸಾಧನೆ ಮಾಡಿದ ಕೆ.ಎಂ.ಉಮ್ಮರ್ ಮತ್ತು ನೂರುನ್ನಿಶಾ ದಂಪತಿಗಳ ಪುತ್ರ ಮಹಮ್ಮದ್ ಝಹ್ರಾನ್, ಮದರಸದ ೫ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಕೂರ್ನಡ್ಕ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ರಫೀಕ್ ಆರ್ತಿಕೆರೆ ಮತ್ತು ನಜೀಮುನ್ನಿಶಾ ದಂಪತಿಗಳ ಪುತ್ರಿ ಆಯಿಷ ರಿಫಾ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ಮಹಮ್ಮದ್ ಖಲಂದರ್ ಶಾಫಿ, ಮಹಮ್ಮದ್ ಮಿಕ್‌ದಾದ್, ಮಹಮ್ಮದ್ ಶಮ್ಮಾಸ್, ಆಯಿಷತ್ ಶಾಕಿರ, ಆಯಿಷತ್ ಸಮೀರ, ಫಾತಿಮತ್ ತಸ್ರೀಫ, ಸಫೀದ ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಜಮಾತ್ ಉಪಾಧ್ಯಕ್ಷ ಹಸೈನಾರ್ ಸಾಗರ್, ಕೋಶಾಧಿಕಾರಿ ಇಬ್ರಾಹಿಂ ಹಾಜಿ ಸಾಗರ್, ಹಿರಿಯರಾದ ವೈ.ಮಹಮ್ಮದ್ ಹಾಜಿ ಸರ್ವೆ, ಫಾರೂಕ್ ಮದನಿ, ಸದರ್ ಉಸ್ತಾದ್ ಅಬ್ದುಲ್ಲಾ ಮುಸ್ಲಿಯಾರ್ ಉಪಸ್ಥಿತರಿದ್ದರು.

ಸಭೆಯಲ್ಲಿ ಜಮಾಅತ್ ಸದಸ್ಯರು, ಅಲ್ ಮಿಸ್‌ಬಾಹ್‌ನ ಸದಸ್ಯರು, ಮದರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಮಾಹತ್ ಪ್ರ ಕಾರ್ಯದರ್ಶಿ ಬಾತಿಷ ಬಡಕೋಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಲ್ ಮಿಸ್‌ಬಾಹ್ ಮುಸ್ಲಿಂ ವೆಲ್‌ಫೇರ್ ಫೆಡರೇಶನ್‌ನ ಅಧ್ಯಕ್ಷ ಎಸ್ ಎಂ ಶರೀಫ್ ಸರ್ವೆ ವಿದ್ಯಾರ್ಥಿಗಳ ಅಭಿನಂದನಾ ಪತ್ರ ವಾಚಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.