ಪಾಣಾಜೆ ಗ್ರಾಮ ಪಂಚಾಯತ್ ಸಾಮಾನ್ಯಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹಂಟ್ಯಾರ್- ಪಾಣಾಜೆ- ಪೆರ್ಲ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಶಾಸಕರು, ಸಂಸದರಿಗೆ ಮನವಿ ಸಲ್ಲಿಸಲು ನಿರ್ಣಯ
 ನಿಡ್ಪಳ್ಳಿ: ಕರ್ನಾಟಕ ಹಾಗೂ ಕೇರಳ ಗಡಿ ಭಾಗದ ರಸ್ತೆಯಾದ ಹಂಟ್ಯಾರ್- ಬೆಟ್ಟಂಪಾಡಿ -ಪಾಣಾಜೆ ಸ್ವರ್ಗ- ಪೆರ್ಲ ರಸ್ತೆಯು ಅಂತಾರಾಜ್ಯ ಸಂಪರ್ಕ ರಸ್ತೆಯಾಗಿದೆ.  ಇದನ್ನು ಕೇಂದ್ರ ಮತ್ತು ರಾಜ್ಯ ಸರಕಾರದ ವಿಶೇಷ ಯೋಜನೆಯಡಿಯಲ್ಲಿ ಮೇಲ್ದರ್ಜೆಗೆ ಏರಿಸಲು ಮಾನ್ಯ ಶಾಸಕರು ಹಾಗೂ ಸಂಸದರಿಗೆ ಮನವಿ ನೀಡುವ ಬಗ್ಗೆ ಮಹತ್ವದ ನಿರ್ಣಯವನ್ನು ಪಾಣಾಜೆ ಸಾಮಾನ್ಯ ಸಭೆಯಲ್ಲಿ ಮಾಡಲಾಯಿತು.
ಸಾಮಾನ್ಯ ಸಭೆ ಅಧ್ಯಕ್ಷೆ ಭಾರತಿ ಭಟ್ ಅಧ್ಯಕ್ಷತೆಯಲ್ಲಿ ಅ.21 ರಂದು ನಡೆಯಿತು. ಮೇಲಿನ ನಿರ್ಣಯದ ವಿಷಯವನ್ನು  ಅಧ್ಯಕ್ಷೆ  ಭಾರತಿ ಭಟ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.ಅದರ ಬಗ್ಗೆ ಚರ್ಚಿಸಿ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿದರೆ ಈ ಭಾಗದ ಅಭಿವೃದ್ಧಿಯಾಗುತ್ತದೆ. ಮತ್ತು ಜನರಿಗೆ ಬಹಳ ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ  ಅಭಿಪ್ರಾಯ ಪಡಲಾಯಿತು. ಅಲ್ಲದೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಕಲ್ಲಡ್ಕ- ವಿಟ್ಲ -ಚೆರ್ಕಳ ರಸ್ತೆಗೆ ಹತ್ತಿರದ ಸಂಪರ್ಕ ರಸ್ತೆಯಾಗಿ ಉಪಯೋಗಿಸಲು ಹಂಟ್ಯಾರ್ – ಪೆರ್ಲ ರಸ್ತೆಯು ಅನುಕೂಲಕರವಾಗಿರುವುದರಿಂದ ಇದನ್ನು ಮೇಲ್ದರ್ಜೆಗೆ ಏರಿಸಲು ಮನವಿ ನೀಡುವುದು ಉತ್ತಮ ಎಂದು ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದಾಗ ಸರಕಾರಕ್ಕೆ ಮನವಿ ನೀಡಲು ನಿರ್ಣಯಿಸಲಾಯಿತು.
ಪಾಣಾಜೆ ಗ್ರಾಮದ ಹೃದಯ ಭಾಗವಾದ ಆರ್ಲಪದವು ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ,ಸಂತೆ ಮಾರುಕಟ್ಟೆ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ರಸ್ತೆ ಬದಿ ಸ್ಥಳಾವಕಾಶ ನೀಡಲು  ಲೋಕೋಪಯೋಗಿ ಇಲಾಖೆಗೆ ಮನವಿ ನೀಡುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಯಿತು. ಇಲಾಖೆಯ ಸುತ್ತೋಲೆ ಹಾಗೂ  ಸಾರ್ವಜನಿಕ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು.ಪಂಚಾಯತ್ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಹಾಗೂ ಸ್ವಚ್ಛತೆ, ನರೇಗಾ ಯೋಜನೆಯಡಿಯಲ್ಲಿ ಎರೆಹುಳು ತೊಟ್ಟಿ, ಪೌಷ್ಠಿಕ ಕೈ ತೋಟ, ಕಾಲೋನಿಗಳಲ್ಲಿ ಸೋಕ್ ಪಿಟ್ ರಚನೆ ಹಾಗೂ ರುದ್ರಭೂಮಿ ನಿರ್ಮಾಣ ಮುಂತಾದವುಗಳ ಪ್ರಗತಿ ಕುರಿತು ಚರ್ಚೆ ನಡೆಸಲಾಯಿತು. 
ಉಪಾಧ್ಯಕ್ಷ ಅಬೂಬಕ್ಕರ್ ಕೆ, ಸದಸ್ಯರಾದ ಸುಭಾಸ್ ರೈ ಚಂಬರಕಟ್ಟ, ಮೋಹನ್ ನಾಯ್ಕ, ಜಯಶ್ರೀ ದೇವಸ್ಯ, ಸುಲೋಚನಾ,ವಿಮಲಾ, ನಾರಾಯಣ ನಾಯಕ್,  ಕೃಷ್ಣಪ್ಪ ಪೂಜಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಮತಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ವಿಶ್ವನಾಥ, ಅರುಣ ಕುಮಾರ್ ಸಹಕರಿಸಿದರು.  ಮಧ್ಯಾಹ್ನ ನಂತರ ಕುಡಿಯುವ ನೀರಿಗೆ ಸಂಬಂಧಿಸಿದ ಹಳೇ ಸಾಮಗ್ರಿಗಳಾದ ಪಂಪ್ ,ಪೈಪ್ ಹಾಗೂ ಇತರ ಹಳೇ ಸಾಮಗ್ರಿಗಳನ್ನು ಮತ್ತು ಆರ್ಲಪದವು ಕೆಳಗಿನ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಪಂಚಾಯತ್ ಅಧೀನದ ಅಂಗಡಿ ಕೊಠಡಿಯ ಏಲಂ ಪ್ರಕ್ರಿಯೆ ನಡೆಯಿತು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.