ಕೂಟ ಮಹಾಜಗತ್ತು ಪುತ್ತೂರು ಅಂಗಸಂಸ್ಥೆಯ ಸಮಾವೇಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • `ಸಂಸ್ಕೃತಿ ಭೂಯಿಷ್ಠ ಸಮಾಜ ಕಟ್ಟಲು ಉತ್ತಮ ನಾಯಕತ್ವ ಬೇಕು’ – ಡಾ.ಕೆ.ಎಸ್.ಕಾರಂತ

ಪುತ್ತೂರು: “ಕೊರೊನಾ ಮಹಾಮಾರಿಯು ತಂದಿತ್ತ ಕಠಿಣ ಪರಿಸ್ಥಿತಿಯಲ್ಲಿ ಕೂಟಮಹಾಜಗತ್ತು ಸಂಸ್ಥೆಯು ಜನರ ಆರೋಗ್ಯ ಮತ್ತು ಬದುಕಿನ ಕುರಿತು ಕಾಳಜಿ ವಹಿಸಿ ಗುರುತರವಾದ ಸೇವೆ ಮಾಡಿದೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಹೇಳಿದರು.

ಕೊಂಬೆಟ್ಟು ದ್ರಾವಿಡ ಬ್ರಾಹ್ಮಣ ವಿದ್ಯಾರ್ಥಿ ಭವನದಲ್ಲಿ ಜರುಗಿದ ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಪುತ್ತೂರು ಅಂಗಸಂಸ್ಥೆಯ ವಾರ್ಷಿಕ ಸಮಾವೇಶ ಹಾಗೂ ಮಹಾಸಭೆಯಲ್ಲಿ ಅವರು ಮಾತನಾಡಿದರು. ಪುತ್ತೂರಿನಲ್ಲಿ ಕೂಟ ಮಹಾ ಜಗತ್ತು ಸಂಘಟನೆಯನ್ನು ಬಲಪಡಿಸಲು ಉತ್ತಮ ನಾಯಕರಿದ್ದು, ನಾಯಕತ್ವ ಬಲವಾಗಿದೆ. ಉತ್ತಮ ನಾಯಕತ್ವ ಇದ್ದಲ್ಲಿ ಸಂಸ್ಕೃತಿ ಭೂಯಿಷ್ಠ ಸಮಾಜ ನಿರ್ಮಾಣವಾಗುತ್ತದೆ. ಪ್ರಸ್ತುತ ಅದನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ಚೆನ್ನಾಗಿ ನಡೆಯುತ್ತಿರುವುದು ಅಭಿನಂದನೀಯ. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತ ಸಮಿತಿಯ ಸದಸ್ಯ ಸದಾಶಿವ ಐತಾಳ ಕಾಟಿಪಳ್ಳ ಅವರು ಮಾತನಾಡಿ ದಕ್ಷಿಣ ಕನ್ನಡ ವಿಭಾಗದ ಪ್ರತಿನಿಧಿಯಾಗಿ ತನ್ನನ್ನು ಆಯ್ಕೆ ಮಾಡಿದುದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಸಮಾವೇಶದ ಅಧ್ಯಕ್ಷತೆಯನ್ನು ಪುತ್ತೂರು ಅಂಗಸಂಸ್ಥೆಯ ಅಧ್ಯಕ್ಷ ನಾಗೇಶ್ ರಾವ್ ಕೊಂಬೆಟ್ಟು ವಹಿಸಿ, `ಅಂಗಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು’ ವಿನಂತಿಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ರೇಖಾ ನಾರಾಯಣ ಹೇರಳೆ ಉಪಸ್ಥಿತರಿದ್ದು ಮಹಿಳಾ ವೇದಿಕೆಯ ಮುಂದಿನ ಚಟುವಟಕೆಗಳತ್ತ ಗಮನ ಸಳೆದರು. ಅಂಗಸಂಸ್ಥೆಯ ಕಾರ್ಯದರ್ಶಿ ವೆಂಕಟರಮಣ ರಾವ್ ಗತವರುಷಗಳ ಕಾರ್ಯಕ್ರಮಗಳ ಸೂಕ್ಷ್ಮ ನೋಟ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ಪಿ.ಎಚ್.ಡಿ.ಪದವಿ ಪಡೆದ ಕೂಟಬಂಧುಗಳಾದ ಡಾ.ರಮೇಶ್ ಹಾಗೂ ಡಾ.ಸವಿತಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹದಿನೆಂಟು ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಆರಂಭದಲ್ಲಿ ಮಹಿಳಾ ವೇದಿಕೆಯ ಸುಶೀಲಾ ಉಪಾಧ್ಯಾಯ ಮತ್ತು ಆರತಿ ಪ್ರಾರ್ಥಿಸಿದರು. ಪುತ್ತೂರು ಅಂಗಸಂಸ್ಥೆಯ ಉಪಕಾರ್ಯದರ್ಶಿ ಸೂರ್ಯನಾರಾಯಣ ಮಯ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಸದಾಶಿವ ಹೊಳ್ಳ ವಂದಿಸಿದರು. ಕೋಶಾಧಿಕಾರಿ ಕೃಷ್ಣ ಕಾರಂತ ನಿರ್ವಹಿಸಿದರು. ಐಕ್ಯ ಮಂತ್ರದೊಂದಿಗೆ ವಾರ್ಷಿಕ ಸಮಾವೇಶವು ಸಂಪನ್ನಗೊಂಡಿತು.

ಮುಂಜಾನೆ ವೇ.ಮೂ.ಕುಂಜಾರು ನರಸಿಂಹ ಮಯ್ಯರ ಹಿರಿತನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತ್ತು. ಮಹಿಳಾ ವೇದಿಕೆಯ ಸದಸ್ಯೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.