ಪುತ್ತೂರಿನ ಮಣ್ಣಿನಲ್ಲಿ ಘಮಘಮಿಸಲಿದೆ ‘ಸ್ವದೇಶಿ ಸಂಭ್ರಮ’

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮೂರು ದಿನಗಳ ಸ್ವದೇಶಿ ಮೇಳ, ಮೂವತ್ತಕ್ಕೂ    ಅಧಿಕ ಮಳಿಗೆಗಳು

ಪುತ್ತೂರು:ವಿದೇಶಿ ಶೈಲಿಯ ಪ್ರವಾಹದ ಮಧ್ಯೆ ಸ್ವದೇಶಿ ವಿಚಾರಗಳಿಗೆ ಒತ್ತು ನೀಡಿ ಅವುಗಳನ್ನು ಉಳಿಸಿಕೊಳ್ಳುವ ದೃಷ್ಠಿಯಿಂದ ಗಾಯತ್ರಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಹಯೋಗದೊಂದಿಗೆ ಅ.30 ರಿಂದ ನ.1ರವರೆಗೆ ಮಹಾಲಿಂಗೇಶ್ವರ ಸಭಾಭವನದಲ್ಲಿ ‘ಸ್ವದೇಶಿ ಸಂಭ್ರಮ’ ಮೇಳ ನಡೆಯಲಿದೆ ಎಂದು ಗಾಯತ್ರಿ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಅಧ್ಯಕ್ಷರಾದ ವಿಷ್ಣು ಭಟ್ ಅಡ್ಯೇಯಿ ಹೇಳಿದರು.

ಅವರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವದೇಶಿ ಸಂಭ್ರಮ ಕಾರ್ಯಕ್ರಮದ ಕುರಿತಾಗಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.ನ.೧ರ ಕನ್ನಡ ರಾಜ್ಯೋತ್ಸವದಂದು ಗಾಯತ್ರಿ ಕೋ ಓಪರೇಟಿವ್ ಸೊಸೈಟಿಯು ವಿಶಿಷ್ಠವಾದ ಯೋಜನೆಯೊಂದನ್ನು ಸಾಕಾರಗೊಳಿಸುವಲ್ಲಿ ಅಣಿಯಾಗುತ್ತಿದ್ದು ಪುತ್ತೂರಿನಲ್ಲಿ ಕೈ ಮಗ್ಗದ ಉಡುಪುಗಳು,ಕರಕುಶಲ ವಸ್ತುಗಳು ಹಾಗೂ ಸ್ವದೇಶಿ ಉತ್ಪನ್ನಗಳ ಮಾರಾಟ ಮಳಿಗೆ ‘ಗಾಯತ್ರಿ ಸ್ವದೇಶಿ ಮಳಿಗೆ’ಯನ್ನು ಪುತ್ತೂರಿನ ಗಾಯತ್ರಿ ಕೋ ಓಪರೇಟಿವ್ ಸೊಸೈಟಿ ಕಟ್ಟಡದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಈ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.ಈ ಪ್ರಯುಕ್ತ ಪುತ್ತೂರಿನ ಜನರ ಸ್ವದೇಶಿ ಪ್ರೇಮವನ್ನು ಮನಗಂಡು ವೋಕಲ್ ಫಾರ್ ಲೋಕಲ್ ಮತ್ತು ಆತ್ಮನಿರ್ಭರ ಭಾರತ ಕಲ್ಪನೆಯಡಿ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಸ್ವದೇಶಿ ಸಂಭ್ರಮ ಎಂಬ ಮೂರು ದಿನಗಳ ವಿನೂತನ ಕಲ್ಪನೆಯ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕೈಮಗ್ಗ, ಕರಕುಶಲ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಸ್ವದೇಶಿ ಸಂಭ್ರಮವು ಮೂರು ದಿನಗಳ ಕಾಳ ನಡೆಯಲಿದ್ದು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ ೮ರವರೆಗೆ ಮೇಳ ನಡೆಯಲಿದೆ.ಪ್ರದರ್ಶನದ ಜೊತೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ವಿವೇಕಾನಂದ ಪದವಿ ಕಾಲೇಜಿನ ಆಯೋಜನೆಯಲ್ಲಿ ಭಕ್ತಿಗೀತೆಗಳು,ದೇಶಭಕ್ತಿಗೀತೆಗಳ ರಸಮಂಜರಿ,ಆದರ್ಶ ಗೋಖಲೆ ಮತ್ತು ತಂಡದಿಂದ ಪುಣ್ಯ ಭೂಮಿ ಭಾರತ, ‘ನರಕಾಸುರ ಮೋಕ್ಷ’ ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳದ ಮೆರುಗು ಹೆಚ್ಚಿಸಲಿದೆ.ಇದರೊಂದಿಗೆ ಗಾಯತ್ರಿ ಮಳಿಗೆಯಲ್ಲಿ ಮುಂದಿನ ದಿನಗಳಲ್ಲಿ ರಿಯಾಯತಿ ದರದಲ್ಲಿ ಖರೀದಿಸಲು ಮಾರಾಟ ಪಾಲುದಾರರಾಗಿ ನೋಂದಾಯಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಒಟ್ಟು 35 ಸ್ಟಾಲ್ಗಳು ಈಗಾಗಲೇ ನೋಂದಾವಣೆಗೊಂಡಿದ್ದು ಇನ್ನಷ್ಟು ಮಳಿಗೆಗಳು ಈ ಮೇಳದಲ್ಲಿ ಭಾಗವಹಿಸಲು ಕಾತುರರಾಗಿವೆ ಪ್ರತಿನಿತ್ಯ ಸುಮಾರು 5000 ದಷ್ಟು ಜನ ಮೇಳದಲ್ಲಿ ಭಾಗವಹಿಸಬಹುದು ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷರಾದ ಪ್ರಸನ್ನ.ಎನ್ ಭಟ್ ಮಾತನಾಡಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಕಳೆದ ಒಂದೂವರೆ ವರ್ಷದಿಂದ ಆತ್ಮನಿರ್ಭರ ಭಾರತ ತರಬೇತಿ ಕಾರ್ಯಾಗಾರಗಳ ಮೂಲಕ 4500ಕ್ಕಿಂತ ಹೆಚ್ಚು ಮಂದಿಗೆ ಸ್ವಾವಲಂಬನೆಯ ಹಾದಿಯನ್ನು ತೋರಿಸಿದೆ.ಇದರಲ್ಲಿ ಸುಮಾರು 1500ರಷ್ಟು ಜನ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಫಲಾನುಭವಿಗಳಿಗೆ ಹಾಗೂ ಇನ್ನಷ್ಟು ಮಂದಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಸ್ವದೇಶಿ ಸಂಭ್ರಮ ಕಾರ್ಯಕ್ರಮದಲ್ಲಿ ಸಂಸ್ಥೆಯು ಸಹಯೋಗವನ್ನು ನೀಡುತ್ತಿದೆ ಎಂದು ಹೇಳಿದರು.

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕರಾದ ಮಹಾದೇವ ಶಾಸ್ತಿç ಮಾತನಾಡಿ ನಮ್ಮ ಕಾಲೇಜು ಅನೇಕರಿಗೆ ಸ್ವ ಉದ್ಯೋಗದ ಪರಿಕಲ್ಪಣೆಯಡಿ ಬದುಕು ಕಟ್ಟಿಕೊಟ್ಟಿದೆ.ನಮ್ಮ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಉದ್ಯೋಗ ನೈಪುಣ್ಯತಾ ಶಿಬಿರಗಳನ್ನು ನಡೆಸಿ ಕಾಲೇಜು ಮುಗಿಸಿದ ಮೇಲೆ ಸ್ವ-ಉದ್ಯೋಗ ಮಾಡುವ ಅವಕಾಶಗಳಾಗುವಂತೆ ಕಾಲೇಜು ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತವಾಗಲಿದೆ ಇದಕ್ಕೆ ಪೂರಕವಾಗಿ ಸ್ವದೇಶಿ ಸಂಭ್ರಮ ಕಾರ್ಯಕ್ರಮದಲ್ಲಿ ನಾವು ಕೈ ಜೋಡಿಸುತ್ತಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಗೋಪಿನಾಥ್ ಶೆಟ್ಟಿ,ನಿರ್ದೇಶಕರಾದ ಶರಾವತಿ ರವಿನಾರಾಯಣ,ಗಣಪತಿ ಸೋಮಾಯಾಜಿ, ರಾಜಾರಾಮ ಐತಾಳ್, ನಾಗರಾಜ್ ಭಟ್, ಜಯಶಂಕರ್, ಶರತ್ ಚಂದ್ರ, ನಗರಸಭಾ ಉಪಾಧ್ಯಕ್ಷರಾದ ವಿದ್ಯಾ ಗೌರಿ,ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ್ ರಾವ್, ಚಂದ್ರಶೇಖರ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.

ಮಳಿಗೆಗಳೇ ಪ್ರಮುಖ ಆಕರ್ಷಣೆ
ಸ್ವದೇಶಿ ಸಂಭ್ರಮ’ ಕಾರ್ಯಕ್ರಮದಲ್ಲಿ ಮಳಿಗೆಗಳು ಪ್ರಮುಖ ಆಕರ್ಷಣೆಯಾಗಿರಲಿದೆ.ಇಲ್ಲಿ ಹಲವು ರಾಜ್ಯಗಳ,ಪ್ರದೇಶಗಳ ವಿಶಿಷ್ಟ ವಿನ್ಯಾಸದ ಉಡುಗೆಗಳು, ಇಳಕಲ್,ಮರಾಠಿ, ಪೈಠಾನೀ, ಮಗ್ಗದ ಸೀರೆ, ಹತ್ತಿ ನೂಲಿನ ಸೀರೆ, ಆಕರ್ಷಕ ಕರಕುಶಲ ವಸ್ತುಗಳು,ಆತ್ಮನಿರ್ಭರ ಕಲ್ಪನೆಯಡಿ ತಯಾರಾದ ಅತ್ಯುತ್ತಮ ಗುಣಮಟ್ಟದ ಗೃಹೋತ್ಪನ್ನಗಳು,ಆಟಿಕೆಗಳು,ಉತ್ಕೃಷ್ಠ ದೇಶೀ ಉತ್ಪನ್ನಗಳು,ಆಹಾರ ಪದಾರ್ಥಗಳು, ಬೆಣ್ಣೆ ದೋಸೆ, ಹಾಟ್ ಚಿಪ್ಸ್, ಚಾಟ್ಸ್, ಐಸ್ಕೀ ಕ್ರೀಮ್  ಮುಂತಾದ ಸಾಮಾಗ್ರಿಗಳನ್ನೊಳಗೊಂಡ 35 ಕ್ಕೂ ಹೆಚ್ಚಿನ ಮಳಿಗೆಗಳು ಮೇಳದಲ್ಲಿ ಭಾಗವಹಿಸಲಿವೆ.ಮಳಿಗೆಯಲ್ಲಿ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.