ಲ್ಯಾಂಪ್ಸ್ ಸಹಕಾರಿ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪ್ರಧಾನ ಮಂತ್ರಿ ವನ-ಧನ ಯೋಜನೆಯನ್ನು ಕೈಬಿಡುವಂತೆ ಹಕ್ಕೋತ್ತಾಯ

ಪುತ್ತೂರು:ಲ್ಯಾಂಪ್ಸ್ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಸಂಘದ ಮುಖಾಂತರವೇ ಕಿರು ಕಾಡುತ್ಪತ್ತಿ ಸಂಗ್ರಹಿಸಲು ಅವಕಾಶ ನೀಡಬೇಕು. ಪ್ರಧಾನ ಮಂತ್ರಿ ವನ-ಧನ ಯೋಜನೆಯನ್ನು ಕೈಬಿಡುವಂತೆ ಲ್ಯಾಂಪ್ಸ್ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಹಕ್ಕೋತ್ತಾಯ ಮಾಡಿದರು.

 

ಸಭೆಯು ಅ.23ರಂದು ಸಂಘದ ಅಧ್ಯಕ್ಷ ಪೂವಪ್ಪ ಎಸ್.ರವರ ಅಧ್ಯಕ್ಷತೆಯಲ್ಲಿ ಕೊಂಬೆಟ್ಟು ಮರಾಠಿ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ಪೂವಪ್ಪ ನಾಯ್ಕರವರು ಮಾತನಾಡಿ, ಲ್ಯಾಂಪ್ಸ್ ಸಹಕಾರಿ ಸಂಘವಿರುವಲ್ಲಿ ಸಹಕಾರಿ ಸಂಘದ ಮುಖಾಂತರವೇ ಕಿರು ಕಾಡುತ್ಪತ್ತಿ ಸಂಗ್ರಹಿಸಲು ಅವಕಾಶ ನೀಡಬೇಕು ಎಂದು ಕಳೆದ ಮಹಾಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲಾಗಿತ್ತು. ಪ್ರಧಾನ ಮಂತ್ರಿ ವನ-ಧನ ಯೋಜನೆಯನ್ನು ಕೈಬಿಟ್ಟು ಈ ಹಿಂದಿನಂತೆಯೇ ಸಂಘದ ವಾಪ್ತಿಯ ಪೂರ್ತಿ ಅರಣ್ಯ ಪ್ರದೇಶದಿಂದ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಲ್ಯಾಂಪ್ಸ್ ಸಹಕಾರಿ ಸಂಘಕ್ಕೆ ಅವಕಾಶ ನೀಡಬೇಕೆಂದು ಈ ಮಹಾಸಭೆಯಲ್ಲಿ ಮತ್ತೆ ತೀರ್ಮಾವನ್ನು ಕೈಗೊಂಡು ಸರಕಾರಕ್ಕೆ ಹಕ್ಕೊತ್ತಾಯ ಮಾಡುವುದಾಗಿ ತಿಳಿಸಿದ್ದು ಮಹಾಸಭೆಯು ಇದಕ್ಕೆ ಒಪ್ಪಿಗೆ ಸೂಚಿಸಿತು.

 

ನಮ್ಮ ಹೋರಾಟ ನಿರಂತರ:
ಸಂಘದ ನಿರ್ದೇಶಕರು, ರಾಜ್ಯ ಲ್ಯಾಂಪ್ಸ್ ಮಹಾಮಂಡಲದ ಉಪಾಧ್ಯಕ್ಷರಾಗಿರುವ ಮಂಜುನಾಥ ಎಸ್.ಎಸ್ ಮಾತನಾಡಿ, ರಾಜ್ಯದಲ್ಲಿ ಒಟ್ಟು 21 ಲ್ಯಾಂಪ್ಸ್ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಕಿರು ಕಾಡುತ್ಪತ್ತಿ ಸಂಗ್ರಹಿಸಲು ಲ್ಯಾಂಪ್ಸ್‌ಗೆ ಅವಕಾಶ ನೀಡುವಂತೆ ಎಲ್ಲಾ ಸಂಘಗಳ ಮೂಲಕ ಹಾಗೂ ಫೆಡರಶನ್ ಮುಖಾಂತರ ಸರಕಾರಕ್ಕೆ ಮನವಿ ಮಾಡಲಾಗಿದೆ. ಅಲ್ಲದೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಬೇಡಿಕೆ ಸಲ್ಲಿಸಲಾಗಿದೆ. ಫೆಡರೇಶನ್‌ನಲ್ಲಿಯೂ ನಿರ್ಣಯ ಕೈಗೊಂಡು ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು ನಮ್ಮ ಹೋರಾಟ ನಿರಂತರ ಇದೆ ಎಂದರು.

16.32ಲಕ್ಷ ಲಾಭ, 98.67 ಸಾಲ ವಸೂಲಾತಿ:
ಸಂಘವು ವರದಿ ವರ್ಷದಲ್ಲಿ ರೂ.16.32,854.70 ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ವಿತರಿಸಲಾಗಿರುವ ಸಾಲದಲ್ಲಿ ರೂ.೫,೪೭,೮೬೯ ಸುಸ್ತಿಯಾಗಿದ್ದು ವಸೂಲಾತಿಯಲ್ಲಿ ಶೇ.೯೮.೬೭ ಸಾಲ ವಸೂಲಾತಿಯಾಗಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು `ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಗಳಿಸಿದ ಲಾಭಾಂಶವನ್ನು ನಿಯಮದಂತೆ ವಿಂಗಡನೆ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಆಧ್ಯತೆಯಲ್ಲಿ ಕಡಬದಲ್ಲಿ ಶಾಖೆ ಪ್ರಾರಂಭ:
ಸಹಕಾರಿ ಸಂಘದ ಮುಖಾಂತರ ವ್ಯವಹರಿಸಲು ದೂರದ ಕಡಬ ಭಾಗದವರಿಗೆ ಅಸಾಧ್ಯವಾಗುತ್ತಿದೆ. ಹೀಗಾಗಿ ಕಡಬದಲ್ಲಿ ಶಾಖೆ ಪ್ರಾರಂಭಿಸುವಂತೆ ಸದಸ್ಯ ಮಹಾಲಿಂಗ ನಾಯ್ಕರವರು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ಕುರಿತು ಕಡಬ, ನೆಲ್ಯಾಡಿಯಲ್ಲಿ ಶಾಖೆ ತೆರೆಯುವಂತೆ ಈಗಾಗಲೇ ಬೇಡಿಕೆಗಳು ಬಂದಿದೆ. ಆದರೆ ಕಡಬ ತಾಲೂಕನ್ನು ಕೇಂದ್ರೀಕರಿಸಿಕೊಂಡು ಅಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಶಾಖೆಯನ್ನು ಪ್ರಾರಂಭಿಸಲಾಗುವುದು. ಈಗಾಗಲೇ ಉಪ್ಪಿನಂಗಡಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದೆ. ಅಲ್ಲಿ ಬ್ಯಾಂಕಿಂಗ್ ವ್ಯವಹಾರ, ಸಭಾಭವನ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಬಡಗನ್ನೂರಿನಲ್ಲಿ ಗೋದಾಮು ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಆಧ್ಯತೆಯ ನೆಲೆಯಲ್ಲಿ ಕಡಬದಲ್ಲಿ ಶಾಖೆ ಪ್ರಾರಂಭಿಸುವುದಾಗಿ ಅಧ್ಯಕ್ಷ ಪೂವಪ್ಪ ನಾಯ್ಕ ಭರವಸೆ ನೀಡಿದರು.

ಮತದಾನಕ್ಕೆ ವಿನಾಯಿತಿ ನೀಡಬೇಕು:
ಲ್ಯಾಂಪ್ಯ್ ಸಹಕಾರಿ ಸಂಘಕ್ಕೆ ಗ್ರಾಮಾಂತರ ಪ್ರದೇಶದಲ್ಲಿ ಶಾಖೆಗಳಿಲ್ಲ. ಹೀಗಾಗಿ ಸಂಘದ ಜತೆ ವ್ಯವಹರಿಸಲು ಅಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಚುನಾವಣೆಯಲ್ಲಿ ಮತದಾನಕ್ಕಿರುವ ನಿಯಮದಲ್ಲಿ ವಿನಾಯಿತಿ ನೀಡುವಂತೆ ಸದಸ್ಯ ಮಹಾಲಿಂಗ ನಾಯ್ಕ ಆಗ್ರಹಿಸಿದರು. ಸಹಕಾರಿ ಕಾಯಿದೆಯಂತೆ ಐದು ವರ್ಷ ಅವಧಿಯಲ್ಲಿ ಸದಸ್ಯರು ಮೂರು ಮಹಾಸಭೆಯಲ್ಲಿ ಹಾಜರಾಗುವುದು ಹಾಗೂ ಬೈಲಾ ನಿಯಮದಂತೆ ಸಂಘದಲ್ಲಿ ಕನಿಷ್ಠ ವ್ಯವಹಾರ ಮಾಡಬೇಕು ಎಂಬ ನಿಯಮವಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಕೆಲವರು ಕೋರ್ಟ್‌ಗೆ ಹೋಗಿ ಅವಕಾಶ ಪಡೆದುಕೊಂಡಿದ್ದರೂ ಹೈಕೋರ್ಟ್ ಈಗ ಸಹಕಾರಿ ಕಾಯಿದೆ ಸರಿಯಿದೆ ತೀರ್ಪು ನೀಡಿದೆ ಎಂದು ಅಧ್ಯಕ್ಷ ಪೂವಪ್ಪ ನಾಯ್ಕ ತಿಳಿಸಿದರು. ಹಾಗಿದ್ದರೂ ಚುನಾವನೆಗೆ ಕಾಯಿದೆಯಲ್ಲಿ ವಿನಾಯಿತಿ ನೀಡುವಂತೆ ಅವಕಾಶ ನೀಡುವಂತೆ ಮಹಾಸಭೆಯಲ್ಲಿ ನಿರ್ಣಯಕೈಗೊಂಡು ಸರಕಾರಕ್ಕೆ ಮನವಿ ಮಾಡಬೇಕು ಎಂದು ಮಹಾಲಿಂಗ ನಾಯ್ಕ ಆಗ್ರಹಿಸಿದರು.
ಪರಿಶಿಷ್ಠ ವರ್ಗದ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟಲು ಆರ್ಥಿಕ ನೆರವು ನೀಡಬೇಕು. ಸಹಕಾರಿ ಸಂಘದಲ್ಲಿ ಸಿಬಂದಿ ಕೊರತೆ ನೀಗಿಸಲು ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ಸದಸ್ಯರಾದ ಯು.ಕೆ ನಾಯ್ಕ, ಕರುಣಾಕರ ಆಲೆಟ್ಟಿ, ಅಣ್ಣಿ ನಾಯ್ಕ, ಜನಾರ್ದನ ಪೆರಾಜೆ, ಉಮೇಶ್ ದಾಸರಮೂಲೆ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

ಸದಸ್ಯರು ಸ್ಪಂಧನೆ ನೀಡಿ:
ನಮ್ಮ ಸಂಘದಲ್ಲಿ ಸುಮಾರು ೪೫೦೦ ಮಂದಿ ಸದಸ್ಯರಿದ್ದಾರೆ. ಸದಸ್ಯರು ಸಂಘದಲ್ಲಿ ಹಣಕಾಸು, ಸಾಲ ಸೌಲಭ್ಯಗಳಿಗೆ ಮಾತ್ರ ಸಂಘದ ಮೂಲಕ ವ್ಯವಹರಿಸುತ್ತಾರೆ. ವಾರ್ಷಿಕ ಮಹಾಸಭೆಗೆ ಹಾಜರಾಗುವ ಸದಸ್ಯರಿಗೆ ರೂ.೫೦ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹಾಗಿದ್ದರೂ ಸದಸ್ಯರಿಂದ ಸೂಕ್ತ ಸ್ಪಂಧನೆ ದೊರೆಯತ್ತಿಲ್ಲ. ಸದಸ್ಯರು ಸಂಘದಲ್ಲಿ ಪಾಲು ಬಂಡವಾಳವನ್ನು ತೊಡಗಿಸಿಕೊಂಡು ಸಂಘದಲ್ಲಿಯೇ ವ್ಯವಹರಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಮಹಾಸಭೆಗೆ ಹಾಜರಾಗುವ ಸದಸ್ಯರ ಪ್ರೋತ್ಸಾಹಧನವನ್ನು ರೂ.೫೦ರಿಂದ ರೂ.100ಕ್ಕೆ ಏರಿಕೆ ಮಾಡಲಾಗುವುದು ಎಂದು ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ತಿಳಿಸಿದರು. ಉಪಾಧ್ಯಕ್ಷ ಧರ್ಣಪ್ಪ ನಾಯ್ಕ ಉಪ್ಪಿನಂಗಡಿ, ನಿರ್ದೇಶಕರಾದ ಅಪ್ಪಯ್ಯ ನಾಯ್ಕ ತಳೆಂಜಿ, ಕೃಷ್ಣ ನಾಯ್ಕ ಪಿ.ಎಂ ಕೃಷ್ಣನಗರ, ನೇತ್ರಾಕ್ಷ ಏಣಿತ್ತಡ್ಕ, ಶೇಷಪ್ಪ ನಾಯ್ಕ ದೊಡ್ಡಡ್ಕ, ಅಶ್ವಿನಿ ಬಿ.ಕೆ ಮುಂಡೂರು, ಭವ್ಯ ಚಿಕ್ಕಮುಡ್ನೂರು, ರೇವತಿ ನಿಡ್ಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿಶ್ಮಿತಾ ಪ್ರಾರ್ಥಿಸಿದರು. ಅಧ್ಯಕ್ಷ ಪೂವಪ್ಪ ನಾಯ್ಕ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಎಚ್. ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಪೂವಪ್ಪ ನಾಯ್ಕ ಕೆ ಕುಂಞಕುಮೇರು ವಂದಿಸಿದರು. ಸಿಬಂದಿಗಳಾದ ಹೊನ್ನಪ್ಪ ನಾಯ್ಕ, ಸೇಸಪ್ಪ ನಾಯ್ಕ, ಬಾಬು ನಾಯ್ಕ ಎಚ್., ನಾಣ್ಯಪ್ಪ ಪಿ., ಪೂವಪ್ಪ ನಾಯ್ಕ, ರವಿಕಲಾ, ಕೃಷ್ಣ ನಾಯ್ಕ, ಪಿಗ್ಮಿ ಸಂಗ್ರಾಹಕರಾದ ರಾಮಣ್ಣ ನಾಯ್ಕ ಹಾಗೂ ಶೇಖರ ನಾಯ್ಕ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.