ಪರ್ಲಡ್ಕ ಶಾಲಾ ಕಟ್ಟಡ ನವೀಕರಣ ಕಾಮಗಾರಿಗೆ ಕರ್ಣಾಟಕ ಬ್ಯಾಂಕ್ ಸಿಎಸ್‌ಆರ್ ನಿಧಿಯಿಂದ ರೂ. 1ಲಕ್ಷ ದೇಣಿಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪರ್ಲಡ್ಕ ದ.ಕ.ಜಿ.ಪಂ ಹಿ.ಪ್ರಾ.ಶಾಲಾ ಕಟ್ಟಡದ ನವೀಕರಣದ ಕಾಮಗಾರಿ ನಡೆಯುತ್ತಿದ್ದು, ಶಾಲಾ ಕಟ್ಟಡದ ನವೀಕರಣ ಕಾಮಗಾರಿಯನ್ನು ಗಮನಿಸಿದ ಕರ್ಣಾಟಕ ಬ್ಯಾಂಕ್ ತನ್ನ ಸಿಎಸ್‌ಆರ್ ನಿಧಿಯಿಂದ ರೂ. 1ಲಕ್ಷ ದೇಣಿಗೆ ನೀಡಿದ್ದಾರೆ.

ಕರ್ಣಾಟಕ ಬ್ಯಾಂಕ್ ಮಂಗಳೂರು ಇದರ ಜನರಲ್ ಮ್ಯಾನೇಜರ್ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವ ನಿರ್ಮಲ್ ಕುಮಾರ್ ಜೈನ್ ಅವರು ರೂ.1 ಲಕ್ಷದ ದೇಣಿಗೆ ಚೆಕ್‌ಅನ್ನು ಶಾಲಾ ಕಟ್ಟಡ ಸಮಿತಿ ಅಧ್ಯಕ್ಷರಾಗಿರುವ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರಿಗೆ ಹಸ್ತಾಂತರಿಸಿ ಮಾತನಾಡಿ ತಾನು ಕಲಿತ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಪುತ್ತೂರು ಶಾಖೆಯ ಶಾಖಾ ಪ್ರಬಂಧಕ ಶೈಲೇಶ್, ಶ್ರೀಮತಿ ಸುಷ್ಮಾ ವಿ. ಕೆ .ಜೈನ್ ಇವರು ಆಗಮಿಸಿದ್ದರು. ಪರ್ಲಡ್ಕ ಶಾಲಾ ಕಟ್ಟಡ ಕಾಮಗಾರಿ ಸಮಿತಿಯ ಕಾರ್ಯದರ್ಶಿ ವಿಕ್ರಂ ಪರ್ಲಡ್ಕ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಸುಚಿತ್ರಾ ಕುಮಾರಿ, ಕಟ್ಟಡ ಕಾಮಗಾರಿ ಸಮಿತಿಯ ಗೌರವ ಸಲಹೆಗಾರ ಪ್ರೋ. ವಿಜಯಕುಮಾರ್ ಮೊಳೆಯಾರ್, ಉಪಾಧ್ಯಕ್ಷ ಜೈನುದ್ದಿನ್, ಶ್ರೀಮತಿ ವೀಣಾ ಮಸ್ಕರೇನಸ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕವೃಂದ ಹಾಗೂ ಅಡುಗೆ ಸಿಬ್ಬಂದಿ ಯವರು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯಗುರಉ ವತ್ಸಲಾ.ಬಿ ಸ್ವಾಗತಿಸಿ, ವಿಜಯಕುಮಾರ್ ಮೊಳೆಯರ್ ವಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಶ್ರೀಮತಿ ಉದಯ ಕುಮಾರಿ ಇವರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.