ಅಡಿಕೆ ಒಣಗಿಸಲು ನೋಟರಿ ವಕೀಲ ರವಿಕಿರಣ್ ರವರು ಚಕ್ರ ಚಾಲಿತ ಸೋಲಾರ್ ಪ್ಲಾಸ್ಟಿಕ್ ಗೂಡು ನಿರ್ಮಾಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ರಾಮಕುಂಜ ಗ್ರಾಮದ ಕುಂಡಾಜೆಯಲ್ಲಿ ವಾಸವಾಗಿರುವ ನೋಟರಿ ವಕೀಲರಾದ ರವಿಕಿರಣ್ ರವರು ಅವಧಿ ಪೂರ್ವ ಅಡಿಕೆ ಹಣ್ಣಾಗುವಿಕೆ,ಮಳೆಯಿಂದ ಉದುರುವಿಕೆಯ ಅಡಿಕೆ ಒಣಗಿಸುವಿಕೆ ಸಮಸ್ಯೆ ಮತ್ತು ಕೆಲವು ಕೃಷಿ ಕರ ಅಂಗಳದಲ್ಲಿ ಬಿಸಿಲು ಸರಿಯಾಗಿ ಬೀಳದೆ ಸಮಸ್ಯೆ ಇರುವುದರಿಂದ ಅಡಿಕೆ ಒಣಗಿಸಲು ಚಕ್ರ ಅಳವಡಿಸಿದ ಸೋಲಾರ್ ಗೂಡು/ಟ್ರಾಲಿಯನ್ನು ಮಾಡಿ ಬಿಸಿಲು ಬರುವ ಕಡೆಯಲ್ಲಿ ಅಡಿಕೆಯನ್ನು ಒಣಗಿಸಲು ಅನುಕೂಲವಾಗುವಂತೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕೃಷಿ ಕರೊರ್ವರು ಚಕ್ರ ಅಳವಡಿಸಿದ ಸೋಲಾರ್ ಗೂಡನ್ನು ನಿರ್ಮಿಸಿದ್ದಾರೆ. 3 ಇಂಚು ಮತ್ತು 1.5ಇಂಚಿನ ಉದ್ದ ಅಗಲ ಮತ್ತು 1.5 ಉದ್ದ_1.5ಇಂಚಿನ ಅಗಲದ ಜಿ.ಐ.ಕ್ಯೂಬ್ ನಿಂದ ತಳ ನಿರ್ಮಿಸಿ ಅದಕ್ಕೆ ಪೈಬರ್ ಚಕ್ರ ಅಳವಡಿಸಿ ಕೊಂಡು,ಬೈಸನ್ ಶೀಟನ್ನು ಹಾಸಿ ಈ ಸೋಲಾರ್ ಗೂಡು ನಿರ್ಮಿಸಿದ್ದಾರೆ.,ಅಂಗಳದಲ್ಲಿ ಬಿಸಿಲು ಬರುವ ಕಡೆ ಅಥಾವ ಯಾವ ಜಾಗದಲ್ಲಿ ಬೇಕಾದರೂ ಕೈಯಲ್ಲಿ ಯೇ ಈ ಸೋಲಾರ್ ಗೂಡನ್ನು ಚಲಿಸಿಕೊಂಡು ಇಡುವಂತೆ ಪುತ್ತೂರಿನ ಕಲ್ಲೇಗದಲ್ಲಿರುವ ಮನೋಜ ಇಂಜಿನಿಯರಿಂಗ್ ವರ್ಕ್ಸ ನ ಮನೋಜ್ ಹಾಗು ಅವರ ಸಿಬ್ಬಂದಿ ಗಳು ಕೃಷಿಕರಾದ ರಾಮಕುಂಜ ಗ್ರಾಮದ ರವಿಕಿರಣ್ ಕೊಯಿಲ ರವರ‌ ಮನೆಯಲ್ಲಿ ನಿರ್ಮಿಸಿದ್ದಾರೆ.20 ಅಡಿ ಉದ್ದ ಹಾಗು 12ಅಗಲ ವಿರುವ ಈ ಸೋಲಾರ್ ಪ್ಲಾಸ್ಟಿಕ್ ಗೂಡು ರೈತರಿಗೆ ಮುಂದಿನ ದಿವಸಗಳಲ್ಲಿ ಅವರವರ ಅನುಕೂಲಕ್ಕೆ ವರದಾನ ವಾಗಬಹುದೆಂದು ಅಂದಾಜಿಸಲಾಗಿದೆ. ಇದಕ್ಕೆ ಅಂದಾಜು ಒಟ್ಟು .75,000/- ಖರ್ಚು ತಗಲಬಹುದೆಂದು ರವಿಕಿರಣ್ ಕೊಯಿಲ ರವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.