ರೈ ಎಸ್ಟೇಟ್ ಎಜ್ಯುಕೇಶನ್&ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರ್.ಟಿ.ಸಿ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕಳೆದ ಹಲವು ವರ್ಷಗಳಿಂದ ಉಪ್ಪಿನಂಗಡಿ ಗ್ರಾಮದ ಕದಿಕಾರು ಎಂಬಲ್ಲಿ ಧರ್ಮಸ್ಥಳಕ್ಕೆ ಸಂಬಂಧಿಸಿದ ಜಾಗದಲ್ಲಿ ವಾಸವಿದ್ದ ಹದಿನೆಂಟು ಕುಟುಂಬಗಳಿಗೆ ಅಶೋಕ್ ಕುಮಾರ್.ರೈ ನೇತೃತ್ವದ ರೈ ಎಸ್ಟೇಟ್ ಎಜ್ಯುಕೇಶನ್&ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರ್.ಟಿ.ಸಿ ವಿತರಣೆ ಕಾರ್ಯಕ್ರಮ ಅ.23 ರಂದು ದರ್ಬೆಯಲ್ಲಿನ ರೈ ಎಸ್ಟೇಟ್ ಎಜ್ಯುಕೇಶನ್&ಚಾರಿಟೇಬಲ್ ಟ್ರಸ್ಟ್ನ ಆಫೀಸಿನಲ್ಲಿ ನಡೆಯಿತು.

ಆರ್.ಟಿ.ಸಿ ವಿತರಿಸಿ ಮಾತನಾಡಿದ ಅಶೋಕ್ ಕುಮಾರ್.ರೈ’ಸತತ 6-7 ವರ್ಷದ ಪ್ರಯತ್ನದ ಫಲವಾಗಿ ಇಂದು ನಾವು ಅದರ ಪ್ರತಿಫಲವನ್ನು ಪಡೆದುಕೊಂಡಿದ್ದೇವೆ.ಭಜನಾ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿ ಈ 18 ಕುಟುಂಬಗಳು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು.ಸುಮಾರು 45 ವರ್ಷಗಳಿಂದ ಆ ಜಾಗದಲ್ಲಿ ವಾಸಿಸುತ್ತಿದ್ದ ಕುಟುಂಬಗಳ ಕಷ್ಟವನ್ನು ಆಳಿಸಿದ ನಾನು ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಹಾಗೂ ಅವರ ತಮ್ಮ ಹರ್ಷೇಂದ್ರರನ್ನು ಭೇಟಿ ಮಾಡಿ ಅವರಿಗೆ ವಿಚಾರಗಳನ್ನು ಮನದಟ್ಟು ಮಾಡಿ ಅನೇಕ ಪ್ರಯತ್ನಗಳ ಬಳಿಕ ಇಂದು ಈ ಕುಟುಂಬಗಳು ಆರ್.ಟಿ.ಸಿ ಪಡೆದುಕೊಂಡಿರುವುದು ಸಂತಸದ ವಿಚಾರ.ದಾಖಲೆ ಪತ್ರಗಳನ್ನು ಮಾಡಿಸುವಾಗ ಆರ್ಥಿಕವಾಗಿ ಸಹಕರಿಸಿದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಹಾಗೂ ಹರ್ಷೇಂದ್ರರವರಿಗೆ ಹಾಗೂ ವಿವಿಧ ಜನರ ಬೇರೆ-ಬೇರೆ ಅಭಿಪ್ರಾಯಗಳ ನಡುವೆಯೂ ನಮ್ಮ ಮೇಲೆ ನಂಬಿಕೆ ಇರಿಸಿದ ಎಲ್ಲಾ 18 ಕುಟುಂಬಗಳಿಗೂ ಧನ್ಯವಾದ.ಮುಂದಕ್ಕೂ ನಾವು ನಿಮ್ಮ ಜೊತೆಗಿದ್ದೇವೆ ಎಂದು ಅವರು ಹೇಳಿದರು.

 

ಫಲಾನುಭವಿಯಾದ ಮಹಾಲಿಂಗರು ಮಾತನಾಡಿ’ಇದೊಂದು ಪುಣ್ಯದ ಕಾರ್ಯಕ್ರಮ ಅಶೋಕ್ ಕುಮಾರ್.ರೈ ಯವರ 6 ವರ್ಷಗಳ ತಪಸ್ಸಿನ ಫಲವಾಗಿ ಇಂದು ಈ ಯಶಸ್ಸು ಲಭ್ಯವಾಗಿದೆ.ಅನೇಕ ಜನರ ಈ ಕುರಿತು ಪ್ರಯತ್ನಿಸಿದ್ದು ವಿಫಲರಾಗಿದ್ದರು ಆದರೆ ಅಶೋಕ್ ಕುಮಾರ್.ರೈ ಹಿಡಿದ ಕೆಲಸವನ್ನು ಸಂಪೂರ್ಣ ಮಾಡಿದ್ದಾರೆ.ಯಾವುದೇ ರೀತಿಯ ಹಣವನ್ನು ಪಡೆದುಕೊಳ್ಳದೆ ಈ ಕಾರ್ಯ ಮಾಡಿದ ಸಮಾಜಸೇವಕರಾದ ಅಶೋಕ್ ಕುಮಾರ್.ರೈ ಯವರಿಗೆ ನಾವು ಸದಾ ಕೃತಜ್ಞರಾಗಿರುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ 18 ಕುಟುಂಬಗಳಿಗೆ ಒಟ್ಟು 1 ಎಕ್ರೆ 6.75 ಸೆನ್ಸ್ ಜಾಗದ ಆರ್.ಟಿ.ಸಿಯನ್ನು ವಿತರಣೆ ಮಾಡಲಾಯಿತು.ಫಲಾನುಭವಿಗಳು ಅಶೋಕ್ ಕುಮಾರ್.ರೈಯವರನ್ನು ಶಾಲು ಹೊದೆಸಿ ಫಲಪುಷ್ಪ ನೀಡಿ ಗೌರವಿಸಿದರು.ಲಿಂಗಪ್ಪ ನಾಯ್ಕ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.