ಕೋವಿಡ್ ಸೋಂಕು ನಿಯಂತ್ರಣ – 2 ವರ್ಷದ ಬಳಿಕ ಉಚಿತ ದಂತ ಚಿಕಿತ್ಸಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಇನ್ಮುಂದೆ ಶ್ರೀ ಸತ್ಯಸಾಯಿ ಮಂದಿರದಲ್ಲಿ ನಿರಂತರ ಶಿಬಿರ ನಡೆಯಲಿದೆ – ಡಾ. ಸತ್ಯಸುಂದರ ರಾವ್

ಪುತ್ತೂರು: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀ ಸತ್ಯಸಾಯಿ ಮಂದಿರದ ವಠಾರದಲ್ಲಿ ಸ್ಥಗಿತಗೊಂಡಿದ್ದ ಉಚಿತ ದಂತ, ಕಣ್ಣಿನ ಚಿಕಿತ್ಸಾ ಶಿಬಿರಗಳು ಇದೀಗ 2 ವರ್ಷಗಳ ಬಳಿಕ ಆರಂಭಗೊಂಡಿದ್ದು, ಅ.24 ರಂದು ದಂತ ಚಿಕಿತ್ಸಾ ಶಿಬಿರ ನಡೆಯಿತು.

ಇನ್ಮುಂದೆ ಶ್ರೀ ಸತ್ಯಸಾಯಿ ಮಂದಿರದಲ್ಲಿ ನಿಂತರ ಶಿಬಿರ ನಡೆಯಲಿದೆ:
ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು, ಶ್ರೀ ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್, ಕೆ.ವಿ.ಜಿ ದಂತ ಮಹಾವಿದ್ಯಾಲಯ ಸುಳ್ಯ ಇದರ ಸಹಯೋಗದಲ್ಲಿ ನಡೆಯುವ ೨೨ನೇ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಕೆ.ವಿ.ಜಿ ದಂತ ಮಹಾವಿದ್ಯಾಲದಯ ಉಪನ್ಯಾಸಕ ಡಾ. ಶಿವಾನಂದ್ ಅವರು ಶ್ರೀ ಸತ್ಯಸಾಯಿ ಅವರ ಭಾವ ಚಿತ್ರದ ಎದುರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸತ್ಯಸುಂದರ ರಾವ್ ಅವರು ಮಾತನಾಡಿ ಕೋವಿಡ್ ಆರಂಭದ ದಿನಗಳಿಂದ ಇಲ್ಲಿನ ತನಕ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ರಾಜ್ಯ ಅಧ್ಯಕ್ಷರು ಶಿಬಿರ ಮಾಡದಂತೆ ಸೂಚನೆ ನೀಡಿದ್ದರು. ಇದೀಗ ಕೋವಿಡ್ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಶಿಬಿರಗಳನ್ನು ಆರಂಭಿಸಿದ್ದೇವೆ. ಆದರೆ ಕೋವಿಡ್ ಇನ್ನು ಕೂಡಾ ಹೋಗಿಲ್ಲ. ನಾವು ಮುನ್ನೆಚ್ಚರಿಕೆ ಮಾಡಿಕೊಳ್ಳಬೇಕು. ಕಳೆದ 2 ವರ್ಷಗಳಿಂದ ಆಗದ ಶಿಬಿರವನ್ನು ಆರಂಭಿಸಿದ್ದೇವೆ. ಇನ್ಮುಂದೆ ನಿರಂತರ ಶಿಬಿರ ನಡೆಯಲಿದೆ ಎಂದರು. ಭಗವಂತನ ಅನುಗ್ರಹದಂತೆ ವೈಟ್‌ಪೀಲ್ಡ್ ಹಾಗು ಪುಟ್ಟಭರ್ತಿಯಲ್ಲಿರುವ ಭಗವಾನ್ ಅವರ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯಿಂದ ಹಿಡಿದು ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಈ ಉಚಿತ ಸೇವೆ ಮಾಡಲು ವಿದೇಶಗಳಿಂದ ವೈದ್ಯರು ಮುಂದೆ ಬರುತ್ತಿರುವುದು ಭಗವಾನ್ ಅವರ ಆಶೀರ್ವಾದ ಎನ್ನಬಹುದು. ಅದೇ ರೀತಿ ಪುತ್ತೂರಿನಲ್ಲಿ ಕೆ.ವಿ.ಜಿ ದಂತ ಮಹಾವಿದ್ಯಾಲಯದಿಂದ ಉಚಿತ ದಂತ ಚಿಕಿತ್ಸೆ ಶಿಬಿರ ನಡೆಯುತ್ತಿದೆ.

ಶಿಬಿರದ ಸದುಪಯೋಗ ಪಡೆಯಿರಿ:
ಕೆ.ವಿ.ಜಿ ದಂತ ಮಹಾವಿದ್ಯಾಯದ ಉಪನ್ಯಾಸಕ ಡಾ. ಶಿವಾನಂದ್ ಅವರು ಮಾತನಾಡಿ ಶಿಬಿರದಲ್ಲಿ ಚಿಕಿತ್ಸೆ ಪಡೆಯುವ ಮುಂದೆ ಇತರ ಖಾಯಿಲೆಗಳ ಔಷಧಿ ಪಡೆಯುವ ವಿಧಾನ ತಿಳಿಸಬೇಕು. ಅದಕ್ಕೆ ತಕ್ಕಂತೆ ನಾವು ಚಿಕಿತ್ಸೆ ಕೊಡಲು ಸಹಕಾರಿಯಾಗುತ್ತದೆ. ದಂತ ಕುಳಿ ತುಂಬುವಿಕೆ, ಸ್ವಚ್ಚತೆ, ಕೃತಕ ದಂತ ಜೋಡಣೆ ಸೇರಿದಂತೆ ಹೆಚ್ಚಿನ ಚಿಕಿತ್ಸೆಗಳನ್ನು ಸುಳ್ಯ ನಮ್ಮ ದಂತ ಮಹಾವಿದ್ಯಾಲಯಕ್ಕೆ ಬಂದರೆ ಅಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಅ.28ಕ್ಕೆ ಬೆಳಿಗ್ಗೆ ಪುತ್ತೂರಿನಿಂದ ಕೆವಿಜಿ ಕ್ಯಾಂಪಸ್‌ನ ಬಸ್ ಇದೆ. ಅದರ ಮೂಲಕ ನಮ್ಮ ಸಂಸ್ಥೆಗೆ ಬಂದು ಚಿಕಿತ್ಸೆ ಪಡೆದು ಕೊಳ್ಳಬಹುದು. ಈ ಭಾರಿ ಮಹವಿದ್ಯಾಲಯದಲ್ಲಿ ಆಗುವ ಕೆಲವೊಂದು ಹಂತದ ಚಿಕಿತ್ಸೆಗೆ ಸರಳ ಫೀಸ್ ಇಡಲಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಉಪನ್ಯಾಸಕ ಡಾ. ಆಲ್ವಿನ್ ಆಂಟನಿ ಉಪಸ್ಥಿತರಿದ್ದರು. ಸತ್ಯಸಾಯಿ ಮಂದಿರದ ಎ.ಟಿ.ರೈ, ಜಯರಾಮ ಪೂಜಾರಿ , ಮಾಜಿ ಸೈನಿಕ ಶಿವಪ್ಪ ಗೌಡ ಅತಿಥಿಗಳನ್ನು ಗೌರವಿಸಿದರು. ಸಮಿತಿ ಸಂಚಾಲಕ ರಘುನಾಥ ರೈ ವಂದಿಸಿದರು. ಪದ್ಮನಾಭ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ದಂತ ಚಿಕಿತ್ಸಾ ಶಿಬಿರ ನಡೆಯಿತು. ಸುಮಾರು 100ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.