ಪುತ್ತೂರಿನ ಏಳು ರೋಟರಿ ಕ್ಲಬ್,ದಿ ಪುತ್ತೂರು ಕ್ಲಬ್,ತಾ|ಆರೋಗ್ಯ ಇಲಾಖೆ,ತಿರುಮಲ ಸೈಕಲ್ಸ್‌ರವರಿಂದ ಪೋಲಿಯೋ ನಿರ್ಮೂಲನಾ ಜಾಗೃತಿ ಸೈಕಲ್ ಜಾಥಾ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪೋಲಿಯೋ ಮುಕ್ತ ವಿಶ್ವಕ್ಕೆ ರೋಟರಿ ಕೊಡುಗೆ ಅನನ್ಯ-ಡಾ.ಭಾಸ್ಕರ್ ಎಸ್

ಸಂತೋಷ್ ಮೊಟ್ಟೆತ್ತಡ್ಕ

 

ಪುತ್ತೂರು: ಅಪಘಾನಿಸ್ತಾನ, ಪಾಕಿಸ್ತಾನ ಹಾಗೂ ನೈಜೀರಿಯದಲ್ಲಿ ಮಾತ್ರ ಪೋಲಿಯೋ ರೋಗದ ಒಂದೆರಡು ಪ್ರಕರಣಗಳು ಗೋಚರಿಸುತ್ತಿದ್ದು, ಭಾರತ ಸೇರಿ ಬಹುತೇಕ ರಾಷ್ಟ್ರಗಳು ಇಂದು ಪೋಲಿಯೋ ಮುಕ್ತ ರಾಷ್ಟ್ರವೆನಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಇಡೀ ವಿಶ್ವವು ಪೋಲಿಯೋ ಮುಕ್ತ ವಿಶ್ವವಾಗಿ ಬದಲಾಗುವ ಕ್ಷಣಗಳನ್ನು ಎದುರಿಸುತ್ತಿದ್ದು, ಇದರ ಹಿಂದೆ ರೋಟರಿ ಸಂಸ್ಥೆಯ ಕೊಡುಗೆ ಮಾತ್ರ ಅನನ್ಯವಾದುದು ಎಂದು ರೋಟರಿ ಜಿಲ್ಲೆ 3181 ಇದರ ಪಿಡಿಜಿ ಡಾ.ಭಾಸ್ಕರ್ ಎಸ್‌ರವರು ಹೇಳಿದರು.


ರೋಟರಿ ಕ್ಲಬ್ ಪುತ್ತೂರು ಈಸ್ಟ್‌ರವರ ಸಾರಥ್ಯದಲ್ಲಿ ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ಮರೀಲು ದಿ ಪುತ್ತೂರು ಕ್ಲಬ್, ತಾಲೂಕು ಆರೋಗ್ಯ ಇಲಾಖೆರವರ ಸಹಭಾಗಿತ್ವದಲ್ಲಿ ಬೊಳ್ವಾರು ತಿರುಮಲ ಸೈಕಲ್ಸ್‌ರವರ ಪ್ರಾಯೋಜಕತ್ವದಲ್ಲಿ ಅ.೨೪ ರಂದು ಬೆಳಿಗ್ಗೆ ಬೊಳ್ವಾರು ತಿರುಮಲ ಸೈಕಲ್ಸ್ ಶೋರೂಂ ಬಳಿ ನಡೆದ `ಪೋಲಿಯೋ ನಿರ್ಮೂಲನಾ ಜಾಗೃತಿ ಸೈಕಲ್ ಜಾಥಾ’ವನ್ನು ಅವರು ಬಲೂನ್‌ಗಳ ಗೊಂಚಲನ್ನು ಆಗಸಕ್ಕೆ ಹಾರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಪೋಲಿಯೋ ರೋಗವನ್ನು ತಡೆಗಟ್ಟಲು ಮಕ್ಕಳಿಗೆ ಸಣ್ಣ ಪ್ರಾಯದಲ್ಲಿಯೇ ಬಾಯಿಗೆ ಪೋಲಿಯೋ ಎರಡು ಡ್ರಾಪ್ಸ್‌ಗಳನ್ನು ನೀಡಲಾಗುತ್ತಿತ್ತು. ಫಿಲಿಫೈನ್ಸ್ ದೇಶದ ರೋಟರಿ ಗವರ್ನರ್ ಓರ್ವರು ಓಂದು ಊರಿನಲ್ಲಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಏಕಕಾಲದಲ್ಲಿ ನೀಡುವ ಮೂಲಕ ಯಶಸ್ವಿಯನ್ನು ಕಂಡಿದ್ದು ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡಲೇ ಅಂಗೀಕರಿಸಿತ್ತು. ಇದೀಗ ಪೋಲಿಯೋ ಡ್ರಾಪ್ಸ್‌ನ್ನು ಬಾಯಿಗೆ ನೀಡುವ ಬದಲು ಇಂಜೆಕ್ಷನ್ ರೂಪದಲ್ಲಿ ನೀಡಲಾಗುತ್ತಿದೆ. ಇತ್ತೀಚೆಗೆ ನೈಜೀರಿಯದಲ್ಲೂ ಕೂಡ ಪೋಲಿಯೋ ಪ್ರಕರಣ ಕೇಸ್ ಬಂದಿಲ್ಲದ್ದರಿಂದ ನೈಜೀರಿಯಾ ಕೂಡ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ ಎಂದರು. ಪಾಕಿಸ್ತಾನ ಹಾಗೂ ಅಪಘಾನಿಸ್ತಾನ ದೇಶಗಳು ಕೂಡ ಪೋಲಿಯೋ ನಿರ್ಮೂಲನೆಯತ್ತ ಕೈಜೋಡಿಸಲಿದ್ದು ಇಡೀ ವಿಶ್ವವೇ ಪೋಲಿಯೋ ಮುಕ್ತ ವಿಶ್ವವಾಗಿಸಲು ಕೈಜೋಡಿಸಲಿದ್ದೇವೆ ಎಂದು ತಿಳಿಸಿರುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ ಎಂದ ಅವರು ಸೈಕಲ್ ಜಾಥಾಕ್ಕೂ ರೋಟರಿ ಸಂಸ್ಥೆಗೂ ಅನನ್ಯವಾದ ಸಂಬಂಧವಿದೆ. ರೋಟರಿ ಡಿಸ್ಟ್ರಿಕ್ಟ್ ಪ್ರಾಜೆಕ್ಟ್‌ನ ಧ್ಯೇಯವಾಗಿರುವ ಪಾಸಿಟಿವ್ ಹೆಲ್ತ್‌ನ ಅಂಗವಾಗಿ ಹೃದಯಾಘಾತ, ಮಧುಮೇಹ ಹಾಗೂ ಹೈಪರ್ ಟೆನ್ಸನ್ ಅನ್ನುವ ಕಾಯಿಲೆಯನ್ನು ತಡೆಗಟ್ಟಲು ಸೈಕ್ಲಿಂಗ್ ತುಂಬಾ ಸಹಕಾರಿಯಾಗಿದೆ ಎಂದು ಅವರು ಹೇಳಿದರು.


ಪುತ್ತೂರು ಪೇಟೆಯಲ್ಲಿಯೇ ನೂರಕ್ಕೆ ನೂರು ವ್ಯಾಕ್ಸಿನೇಷನ್-ಡಾ.ದೀಪಕ್ ರೈ:
ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ಪೋಲಿಯೋ ಡೇ ಅನ್ನು ವಿಶ್ವದಲ್ಲಿಯೇ ಆಚರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ನಮ್ಮ ಭಾರತ ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಒಂದೇ ಒಂದು ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. 2011ರಲ್ಲಿ ಕೊನೆಯ ಪ್ರಕರಣ ಬಂದಿತ್ತು. ತದನಂತರ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲದ್ದರಿಂದ ವಿಶ್ವ ಆರೋಗ್ಯ ಸಂಸ್ಥೆ ಭಾರತ ದೇಶವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಘೋಷಣೆ ಮಾಡಿದೆ ಎಂದ ಅವರು ಅದೇ ರೀತಿ ಪ್ರಸ್ತುತ ವಿಶ್ವ ಎದುರಿಸುತ್ತಿರುವ ಕೊರೋನಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ದೇಶ ನೂರು ಕೋಟಿ ಕೋವಿಡ್ ವ್ಯಾಕ್ಸಿನೇಶನ್ ಮಾಡುವ ಮೂಲಕ ಪ್ರಪಂಚದಲ್ಲಿಯೇ ಅತೀ ಹೆಚ್ಚು ವ್ಯಾಕ್ಸಿನೇಶನ್ ಮಾಡಿದ ದೇಶವಾಗಿ ಭಾರತ ಗುರುತಿಸಿಕೊಂಡಿದ್ದು ಇದು ನಮ್ಮ ದೇಶಕ್ಕೆ ಹೆಮ್ಮೆಯ ದಿನವಾಗಿದೆ. ಸುಮಾರು 65 ಸಾವಿರ ಜನಸಂಖ್ಯೆ ಇರುವ ಪುತ್ತೂರು ಪೇಟೆಯಲ್ಲಿ ನೂರಕ್ಕೆ ನೂರು ವ್ಯಾಕ್ಸಿನೇಶನ್ ಆಗಿರುವುದು ಹೆಮ್ಮೆಯ ವಿಷಯವಾಗಿದೆ. ಕೋವಿಡ್ ವ್ಯಾಕ್ಸಿನೇಶನ್ ಕುರಿತಾಗಿ ಎಲ್ಲಾ ಸಂಘ-ಸಂಸ್ಥೆಗಳು, ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಿದ್ದಾರೆ ಎಂದು ಅವರು ಹೇಳಿದರು.

ಸೈಕಲ್ ಜಾಥಾದೊಂದಿಗೆ ಪೋಲಿಯೋ ಮುಕ್ತ ದೇಶಕ್ಕೆ ವಿಶೇಷ ಮಹತ್ವ-ಸುರೇಂದ್ರ ಕಿಣಿ:
ರೋಟರಿ ಅಸಿಸ್ಟೆಂಟ್ ಗವರ್ನರ್ ಜಿ.ಸುರೇಂದ್ರ ಕಿಣಿರವರು ಮಾತನಾಡಿ, ರೋಟರಿ ಸಂಸ್ಥೆಗೆ ಇಂದು ನಿಜಕ್ಕೂ ಮಹತ್ತರ ದಿನವಾಗಿದೆ. ಪೋಲಿಯೋ ಮುಕ್ತ ಘೋಷಣೆಯೊಂದಿಗೆ ಇಂದು ರೋಟರಿ ಸದಸ್ಯರು ಅವರವರ ಸ್ವ-ಕ್ಷೇತ್ರದಲ್ಲಿ ಏಕಕಾಲದಲ್ಲಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳುವುದರ ಮೂಲಕ ವಿಶೇಷ ಕಳೆಯನ್ನು ಹೆಚ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಪುತ್ತೂರಿನ ಏಳು ರೋಟರಿ ಕ್ಲಬ್‌ನ ಸದಸ್ಯರು ಇಂದು ಯಶಸ್ವಿಯಾಗಿ ಸೈಕಲ್ ಜಾಥಾವನ್ನು ಹಮ್ಮಿಕೊಂಡು ಪೋಲಿಯೋ ಮುಕ್ತ ದೇಶಕ್ಕೆ ವಿಶೇಷ ಮಹತ್ವವನ್ನು ಕಲ್ಪಿಸಿದ್ದಾರೆ ಎಂದರು.

ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಮೋದ್ ಮಲ್ಲಾರ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಭರತ್ ಪೈ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ನವೀನ್‌ಚಂದ್ರ ನಾಕ್, ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಮನ್ಸೂರ್, ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿರುವ ಬೊಳ್ವಾರು ತಿರುಮಲ ಸೈಕಲ್ಸ್ ಶೋರೂಂನ ಮಾಲಕರಾದ ಎನ್.ಟಿ ಕಿಶೋರ್ ಹಾಗೂ ಅವರ ಪುತ್ರ ಎನ್.ಟಿ ಅಖಿಲೇಶ್,  ರೋಟರಿ ಫೌಂಡೇಶನ್  ಡಿಸ್ಟ್ರಿಕ್ಟ್ ಚೆರ್ ಮ್ಯಾನ್ ಕೆ. ವಿಶ್ವಾಸ್ ಶೆಣೈ   ,ಪುತ್ತೂರು     ವರ್ತಕರ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ, 2022-23ನೇ ಸಾಲಿನ ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ ಸಹಿತ ರೋಟರಿ ಸದಸ್ಯರು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕು|ತನ್ವಿ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಪುರಂದರ ರೈ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಮಧು ನರಿಯೂರು ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.

10ಕಿ.ಮೀ ಸೈಕಲ್ ಜಾಥಾ…
ಜಾಥಾವು ಬೆಳಿಗ್ಗೆ 7.30 ಗಂಟೆಗೆ ಬೊಳ್ವಾರು ತಿರುಮಲ ಸೈಕಲ್ ಶೋರೂಂ ಬಳಿ ಆರಂಭವಾಗಿ ಬಳಿಕ ಜಾಥಾವು ಬೈಪಾಸ್ ರಸ್ತೆ ಮುಖೇನ ಸಾಗಿ ದರ್ಬೆ ಫಾ.ಪತ್ರಾವೋ ಸರ್ಕಲ್‌ಗೆ ಆಗಮಿಸಿ ಅಲ್ಲಿಂದ ದರ್ಬೆ-ಕಲ್ಲಾರೆ-ಪೊಲೀಸ್ ಸ್ಟೇಷನ್ ಮುಖ್ಯರಸ್ತೆ ಮಾರ್ಗವಾಗಿ ಪುನಃ ತಿರುಮಲ ಸೈಕಲ್ ಶೋರೂಂ ಬಳಿ ಆಗಮಿಸಿತು. ಜಾಥಾವು ಸುಮಾರು ಹತ್ತು ಕಿ.ಮೀ ಹೊಂದಿದ್ದು, ಯಾರು ಸೈಕಲ್ ಹೊಂದಿದ್ದಾರೆಯೋ ಅವರುಗಳು ಬಿಳಿ ಬಣ್ಣದ ಜೆರ್ಸಿಯೊಂದಿಗೆ ಆಗಮಿಸಿ ಜಾಥಾದಲ್ಲಿ ಪಾಲ್ಗೊಂಡರು. ಸಣ್ಣ ಮಕ್ಕಳು, ಹುಡುಗಿಯರು, ಯುವಕರು, ಹಿರಿಯರು ಈ ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ರೋಟರಿ ಜಿಲ್ಲೆ 3181, ವಲಯ 4ರ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ಚಾಮರಾಜನಗರ, ಮೈಸೂರು, ಕೂರ್ಗ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಪ್ರತೀ ಹಳ್ಳಿ ಹಾಗೂ ಪಟ್ಟಣ ಪ್ರದೇಶದಲ್ಲಿ ಏಕಕಾಲದಲ್ಲಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಗೌರವಾರ್ಪಣೆ..
ಇದೇ ಸಂದರ್ಭದಲ್ಲಿ ಕಳೆದ 15 ವರ್ಷಗಳಿಂದ ಸೈಕಲ್ಲನ್ನೇ ತುಳಿಯುತ್ತಾ ಉದ್ಯೋಗಕ್ಕೆ ಆಗಮಿಸುತ್ತಿರುವ ಇಲ್ಲಿನ ಮೆ|ದೇವಣ್ಣ ಕಿಣಿ ಸಂಸ್ಥೆಯ ಉದ್ಯೋಗಿ, ವೆಂಕಟೇಶ್‌ನಗರ ನಿವಾಸಿ ಜಿ.ಜಗದೀಶ್ ಪ್ರಭುರವರಿಗೆ ಶಾಲು ಹೊದಿಸಿ ಗೌರವಿಸುವ ಮೂಲಕ ಸೈಕಲ್ ಜಾಥಾಕ್ಕೆ ವಿಶೇಷ ಮೆರುಗನ್ನು ಸೃಷ್ಟಿಸಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.