ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ 19 ನೇ ವರ್ಷದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 6,72,54,755.20 ರೂ, ಠೇವಣಾತಿ, 6,03,91,660.00ರೂ ಸಾಲ ವಿತರಣೆ, 24,19,905.50  ರೂ, ಲಾಭ, ಸದಸ್ಯರಿಗೆ ಶೇ. 16 ಡಿವಿಡೆಂಡ್

                                                                                                                                                                           ಚಿತ್ರ- ಉಮಾಪ್ರಸಾದ್ ರೈ ನಡುಬೈಲು

 

 

ಪುತ್ತೂರು; ಇಲ್ಲಿನ ಸಿ.ಪಿ.ಸಿ, ಸಂಕೀರ್ಣದಲ್ಲಿ ಕಾರ್‍ಯನಿರ್ವಹಿಸುತ್ತಿರುವ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ 19 ನೇ ವರ್ಷದ ಮಹಾಸಭೆಯು ಅ. 24 ರಂದು ಸಂಸ್ಥೆಯ ಕಚೇರಿಯಲ್ಲಿ ಜರಗಿತು. ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಕೆ.ಕಸ್ತೂರಿ ಪ್ರಭುರವರು ಅಧ್ಯಕ್ಷತೆ ವಹಿಸಿ, ಮಾತನಾಡಿ ಸಂಸ್ಥೆಯ 2020-21 ನೇ ಸಾಲಿನಲ್ಲಿ 6,72,54,755.20 ರೂ, ಠೇವಣಾತಿ ಹೊಂದಿದ್ದು,6,03,91,660.00ರೂ ಸಾಲ ವಿತರಣೆ ಮಾಡಲಾಗಿದ್ದು, 24,19,905.50  ರೂ, ಲಾಭ ಬಂದಿರುತ್ತದೆ, ಈ ಬಾರಿ ಸದಸ್ಯರಿಗೆ ಶೇ.16  ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು. ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯು ೨೦೦೨ ನವೆಂಬರ್ ೨೫ ರಂದು ಉದ್ಘಾಟನೆಗೊಂಡಿದ್ದು, 2530 ಮಂದಿ ಸದಸ್ಯರುಗಳು ಇದ್ದು, 46,09,700 ಪಾಲು ಬಂಡವಾಳ ಇದೆ. ಸಹಕಾರಿಯ ನಿಧಿಗಳು ವರ್ಷದ ಆರಂಭದಲ್ಲಿ ಸಹಕಾರಿಯ ನಿಧಿಗಳು ರೂ-೧,೩೩,೩೬,೯೨೧,೫೫ ಆಗಿದ್ದು, ವರ್ಷಂತ್ಯದಲ್ಲಿ ರೂ-೧,೪೮,೧೯,೩೭೭,೯೯ ಕ್ಕೆ ಏರಿರುತ್ತದೆ, ಇದರಲ್ಲಿ ಸಹಕಾರಿ ಕ್ಷೇi ನಿಧಿಯು ರೂ-೫೩,೩೫,೨೧೫,೭೯ ಮತ್ತು ಇತರ ನಿಧಿಗಳು ರೂ-೯೪,೮೪,೧೬೨.೦೦ ಆಗಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು. ಸಂಸ್ಥೆಯ ಉಪಾಧ್ಯಕ್ಷ ವಸಂತ ಬಿ, ನಿರ್ದೆಶಕರುಗಳಾದ ದೀಪಾ ಪ್ರಭು, ಯು.ಬಾಲಕೃಷ್ಣ ನಾಯಕ್, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಪ್ರಭು, ರಾಜರಾಮ್ ಪ್ರಭು, ಯಶವಂತ ನಾಯಕ್, ಶಿವಾನಂದ ನಾಯಕ್, ಶಿವರಾಮ ಪ್ರಭು, ಸುಭಾಶ್ ನಾಯಕ್, ಸುಮಿತ್ರ ಪಿ, ಯತೀಂದ್ರನಾಥ್, ವಿದ್ಯಾ ನಾಯಕ್ ಉಪಸ್ಥಿತರಿದ್ದರು. ಸದಸ್ಯರುಗಳಾದ ಅಜಿತ್ ಕುಮಾರ್ ಜೈನ್, ಸೀತಾರಾಮ್ ಪ್ರಭು ಹಾಗೂ ಶ್ರೀನಿವಾಸ್ ಸಾಮಂತ್‌ರವರುಗಳು ವಿವಿಧ ಸಲಹೆ ಸೂಚನೆಯನ್ನು ನೀಡಿದರು. ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಿ ವರದಿ ವಾಚಿಸಿದರು. ಸಂಸ್ಥೆಯ ಸಿಬ್ಬಂಧಿಗಳಾದ ನಳಿನಾಕ್ಷಿ ಮತ್ತು ನವೀನ್‌ರವರು ವಿವಿಧ ಕಾರ್‍ಯಕ್ರಮ ನಿರೂಪಿಸಿದರು. ಸಂಸ್ಥೆಯ ಪಿಗ್ಮಿ ಸಂಗ್ರಾಹಕರಾದ ಶ್ರೀಧರ್, ದಿನೇಶ್, ಸತೀಶ್ ಪ್ರಭು ಮಣಿಯ, ಗೋಪಾಲಕೃಷ್ಣ ಭಟ್ ಸಹಕರಿಸಿದರು.ವಿದ್ಯಾರ್ಥಿಗಳಾದ ಸನ್ನಿಧಿ, ರಶ್ಮಿ, ಸಮೀಕ್ಷ ಹಾಗೂ ಧನ್ವಿ ಪ್ರಾರ್ಥನೆಗೈದರು, ಸಂಸ್ಥೆಯ ಪಿಗ್ಮಿ ಸಂಗ್ರಾಹಕ ಸತೀಶ್ ಪ್ರಭು ಮಣಿಯ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಮೌನ ಪ್ರಾರ್ಥನೆ ಸಂಸ್ಥೆಯ ನಿರ್ದೇಶಕರಾಗಿದ್ದ ಉಮೇಶ್ ನಾಯಕ್‌ರವರು ಅಕಾಲಿಕ ಅಗಲುವಿಕೆಗೆ ಸಭೆಯು ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.

 

“ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ” ಪುತ್ತೂರಿನ ಸಿಪಿಸಿ ಸಂಕಿರ್ಣದಲ್ಲಿ ನಿರಂತರವಾಗಿ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿರುವ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯು ಗ್ರಾಹಕರ ಚಿನ್ನಾಭರಣಗಳನ್ನು ಭದ್ರತೆಯಾಗಿಡಲು ಬೇಕಾದ ಸೇಫ್ ಲಾಕರಿನ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗೂ ಸದಸ್ಯರಿಗೆ ಬಾಡಿಗೆ ನೆಲೆಯಲ್ಲಿ ಭದ್ರಕೋಶವನ್ನು ನೀಡುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿ. ಕೆ.ಕಸ್ತೂರಿ ಪ್ರಭು. ಅಧ್ಯಕ್ಷರು ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.