ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ಮೂರು ದಿನದ ಧರಣಿ ಸತ್ಯಾಗ್ರಹದ ಬಳಿಕ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

  • ಕೆಎಸ್ಸಾರ್ಟಿಸಿ ಸಂಸ್ಥೆ ಹಿಂದಿನ ಬಾಗಿಲಿನಿಂದ ಪಿತೂರಿ ಮಾಡುತ್ತಿದೆ – ಶ್ರೀಗಿರೀಶ್ ಮಳಿ
  • ನಾನು ಕೂಡಾ ಅಮರಣಾಂತ ಉಪವಾಸ ಮಾಡುತ್ತೇನೆ. ಸತ್ತು ಹೋದರೆ ಹೋಗಲಿ – ವಿಶ್ವನಾಥ ರೈ
  • ಸಂಬಳ ಕೊಡದಿದ್ದರೆ ಕೆಲಸ ಮಾಡಬೇಡಿ ಕರೆ ಕೊಡಲಿದ್ದೇವೆ – ಶಾಂತರಾಮ ವಿಟ್ಲ

 

ಪುತ್ತೂರು: ವೇತನ ಮತ್ತು ನಿವೃತ್ತಿ ನೌಕರರ ಸೇರಿದಂತೆ ಇತರ ಸೌಲಭ್ಯಗಳ ಬೇಡಿಕೆ ಮುಂದಿಟ್ಟು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಪುತ್ತೂರು ವಿಭಾಗ ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಸದಸ್ಯರು ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ನಡೆಸುತ್ತಿರುವ ಮೂರು ದಿನಗಳ ಧರಣಿ ಸತ್ಯಾಗ್ರಹಕ್ಕೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅ.25ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ.

 

ಅಮರಣಾಂತ ಉಪವಾಸ ಸತ್ಯಾಗ್ರಹದ ಆರಂಭದ ದಿನದಲ್ಲಿ ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಸದಸ್ಯರಾದ ಸಂಸ್ಥೆಯ ಚಾಲಕರು, ನಿರ್ವಾಹಕರು, ನಿವೃತ ಸಿಬಂದಿ ಹಾಗೂ ತಾಂತ್ರಿಕ ಸಿಬಂದಿಗಳಾದ ಶಾಂತರಾಮ ವಿಟ್ಲ, ಸಂಜೀವ ಗೌಡ, ಮಹಾಬಲ ಗಡಿಮಾರ್, ಅಶೋಕ್ ಭಟ್, ರಾಮಕೃಷ್ಣ ಜಿ., ಶ್ರೀಧರ್ ಭೂಸಾರೆ, ವಾಸುದೇವ ಪ್ರಭು, ಜಗದೀಶ ಕುಂಬಾರ, ಸತ್ಯನಾರಾಯಣ ಡಿ., ದೇವಾನಂದ ವಿಟ್ಲ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ಸತ್ಯಾಗ್ರಹ ಆರಂಭಕ್ಕೆ ಮುಂಚೆ ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಶ್ರೀಗಿರೀಶ್ ಮಳಿಯವರು ಅಮರ್ ಜವಾನ್ ಸ್ಮಾರಕ ಜ್ಯೋತಿಗೆ ಹಾರಾರ್ಪಣೆ ಮಾಡಿದರು. ಪುತ್ತೂರು ಘಟಕದ ಅಧ್ಯಕ್ಷ ಮಾಡಾವು ವಿಶ್ವನಾಥ್ ರೈ ಅವರು ಭಾರತಮಾತೆಯ ಭಾವ ಚಿತ್ರಕ್ಕೆ ಪುಷಾರ್ಚನೆಗೈದು ಉಪವಾಸ ಸತ್ಯಾಗ್ರಹವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಮಚಂದ್ರ ಅಡಪ, ವೆಂಕಟರಮಣ ಭಟ್, ಮಹಾಲಿಂಗೇಶ್ವರ ಭಟ್, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.

 

 

ಕೆಎಸ್ಸಾರ್ಟಿಸಿ ಸಂಸ್ಥೆ ಹಿಂದಿನ ಬಾಗಿಲಿನಿಂದ ಪಿತೂರಿ ಮಾಡುತ್ತಿದೆ:
ಕೆಎಸ್ಸಾರ್ಟಿಸಿ ಮಜ್ದೂರು ಸಂಘದ ಅಧ್ಯಕ್ಷ ನ್ಯಾಯವಾದಿ ಶ್ರೀಗಿರೀಶ್ ಮಳಿಯವರು ಮಾತನಾಡಿ ನಮ್ಮ ಹೋರಾಟವನ್ನು ಎದರು ನೋಡುತ್ತಿರುವ ಸಂಸ್ಥೆ ಹಿಂದಿನ ಬಾಗಿಲಿನಿಂದ ಪಿತೂರಿ ಮಾಡಿದೆ. ನಿರ್ಭಂಧಕಾಜ್ಞೆಯನ್ನು ತಂದಿದೆ. ಇಷ್ಟು ಸಮಯ ಸಂಸ್ಥೆಗಾಗಿ ಸಂಘದ ಮೂಲಕ ಮಾಡಿ ಹೋರಾಟವನ್ನು ಬದಿಗೊತ್ತಿ ಸಂಸ್ಥೆ ನಮ್ಮ ಮೇಲೆ ಕೇಸು ಹಾಕಿದ್ದಾರೆ. ಕೆಎಸ್ಸಾರ್ಟಿಸಿ ಡಿಸಿಯವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ ಎಂದರು. ನಮ್ಮ ಮೇಲಿನ ಕೆಎಸ್ಸಾರ್ಟಿಟಿ ಡಿಸಿಯವರು ಹೊರಿಸಿದ ಆರೋಪಗಳ ಪೈಕಿಯಲ್ಲಿ ಈ ಹಿಂದೆ ಕೆಲವಾರು ಸತ್ಯಾಗ್ರಹದಿಂದ ಸಂಸ್ಥೆಗೆ ಹಾನಿಯಾಗುವಂತಹ ಕೆಲವು ಮೀಟಿಂಗ್‌ಗಳನ್ನು ನಡೆಸಿದ್ದು, ಇದರಿಂದ ಸಂಸ್ಥೆಯ ಅಧಿಕಾರಿಗಳಿಗೆ ಸಾರ್ವಜನಿಕರಿಗೆ ತೊಂದರೆ ಆಗಿದೆ. ಇದರಿಂದ ಸಂಸ್ಥೆಗೆ ಅಪಾರವಾದ ನಷ್ಟ ಉಂಟಾಗಿದೆ. ಅದಲ್ಲದೆ ಪ್ರಾಣ ಹಾನಿಯಾಗುವ ಸಂಭವವೂ ಇದೆ ಎಂಬ ಆಪಾಧನೆ ಮಾಡಿದ್ದರೆ. ಸಂಸ್ಥೆಗೆ ಬರುವ ಯಾವುದೇ ವಾಹನಗಳನ್ನು ನಾವು ತಡೆಯಬಾರದು. ಸಂಸ್ಥೆಯ ವಠಾರಕ್ಕೆ ಬಿ.ಎಮ್.ಎಸ್ ಯೂನಿಯರ್ ಯಾರೂ ಕೂಡಾ ಹೋಗಬಾರದು. ಸಂಸ್ಥೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ದಾರಿ ತಪ್ಪಿಸುವ ಹುನ್ನಾರ ಮಡುತ್ತಾರೆ ಎಂದು ಅವರು ದೂರಿನಲ್ಲಿರುವ ಮಾಹಿತಿಯನ್ನು ತಿಳಿಸಿದ ಅವರು ಈ ಕುರಿತ ನಿರ್ಭಂದಕಾಜ್ಞೆಯ ಸಮನ್ಸ್ ನಮಗೆ ಬಂದಿಲ್ಲ. ಆದರೆ ಇವರ ಆರೋಪಗಳಿಗೆ ಬಿಎಂಎಸ್ ನ್ಯಾಯಾಲಯದಲ್ಲಿ ಉತ್ತರಿಸಲಿದೆ. ಆರೋಪಗಳನ್ನು ಸಂಘಟನೆ ಖಂಡಿಸುತ್ತದೆ ಎಂದು ಹೇಳಿದರು.

 

ನಾನು ಕೂಡಾ ಅಮರಣಾಂತ ಉಪವಾಸ ಮಾಡುತ್ತೇನೆ. ಸತ್ತು ಹೋದರೆ ಹೋಗಲಿ:
ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಹಾಗೂ ನಿವೃತ್ತ ನೌಕರ ಮಾಡಾವು ವಿಶ್ವನಾಥ ರೈ ಅವರು ಮಾತನಾಡಿ ನನಗೆ ೭೬ ವರ್ಷ ಆಗಿದೆ. ರಾಷ್ಟ್ರೀಯ ವಿಚಾರಗಳಿಗಾಗಿ ಹೋರಾಡುತ್ತಾ ಬಂದವನು. ಸಾಕಷ್ಟು ಹೋರಾಟದ ಕಾರಣ ಇವತ್ತು ಪುತ್ತೂರು ಡಿಪೋ ಪುತ್ತೂರು ವಿಭಾಗೀಯವಾಗಿ ಪರಿವರ್ತನೆ ಆಗಿದೆ. ಇದಕ್ಕೆಲ್ಲ ಕಾರಣ ನಮ್ಮ ಸಂಘಟನೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ನೌಕರ ವಿರೋಧಿ ಧೋರಣೆಯನ್ನು ಖಂಡಿಸಿ ಅ.೨೬ರಿಂದ ನಾನು ಕೂಡಾ ಅಮರಣಾಂತ ಉಪವಾಸ ಕುಳಿತುಕೊಳ್ಳಲಿದ್ದೇನೆ. ನಾನು ಸತ್ತು ಹೋದರೆ ಹೋಗಲಿ. ಆದರೆ ಹೊಣೆ ಅಧಿಕಾರಿಗಳು ಎಂದರು.

ಸಂಬಳ ಕೊಡದಿದ್ದರೆ ಕೆಲಸ ಮಾಡಬೇಡಿ ಕರೆ ಕೊಡಲಿದ್ದೇವೆ:
ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ಪ್ರಧಾನ ವಕ್ತಾರ ಶಾಂತಾರಾಮ ವಿಟ್ಲ ಅವರು ಮಾತನಾಡಿ ನಮ್ಮ ಹೋರಾಟ ಬೇಡಿಕೆಯಲ್ಲ. ಅದು ನಮ್ಮ ಹಕ್ಕು. ಕೂಲಿ ಮಾಡಿದ್ದಕ್ಕೆ ಸಂಬಳ ಕೊಡಲೇ ಬೇಕು. ಕೆಎಸ್ಸಾರ್ಟಿಸಿ ಸಂಸ್ಥೆಗೆ ಒಂದೂವರೆ ವರ್ಷದಿಂದ ಗ್ರ್ಯಾಚ್ಯುವಿಟಿ ಕೊಡಲು ಆಗಿಲ್ಲ. ನೋ ಪೇ ನೋ ವರ್ಕ್. ಹಾಗೆಯೇ ಸಂಬಂಳ ಕೊಟ್ಟವರಿಗೆ ಮಾತ್ರ ಕೆಲಸ ಮಾಡಲು ಅಧಿಕಾರ.
ಸಂಬಳ ಕೊಡದಿದ್ದರೆ ಹೇಗೆ ತೆಗೆದು ಕೊಳ್ಳಬೇಕೆಂದು ನಮಗೆ ಗೊತ್ತಿದೆ. ಆಗಸ್ಟ್ ತಿಂಗಳಲ್ಲಿ ಪೂರ್ಣ ಸಂಬಳದ ಸ್ಲಿಪ್ ಕೊಟ್ಟಿದ್ದಾರೆ. ಅರ್ಧ ಸಂಬಳ ಮಾತ್ರ ಬ್ಯಾಂಕ್‌ಗೆ ಜಮೆ ಮಾಡಿದ್ದಾರೆ. ಈ ರೀತಿಯ ದೋರಣೆ ಮಾಡುತ್ತಿರುವ ಅಧಿಕಾರಿಗಳನ್ನು ಕೋರ್ಟು ಕಟ್ಟಕಡೆಯಲ್ಲಿ ನಿಲ್ಲಿಸುತ್ತೇವೆ. ಇದು ನಮ್ಮ ಹಸಿವಿನ ಕೂಗು ಎಂದ ಅವರು ಕೆಎಸ್‌ಆರ್‌ಟಿಸಿ ಸಂಸ್ಥೆಯ ಹಿತಾಸಕ್ತಿಗೆ ವಿರುದ್ದವಾಗಿ ಮಜ್ದೂರ್ ಸಂಘವು ಎಂದೂ ವರ್ತಿಸಿಲ್ಲ. ಸಂಸ್ಥೆಗೆ ನಷ್ಟ ಉಂಟು ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ. ವೇತನ ಪಾವತಿ ವಿಚಾರದಲ್ಲಿ ಮತ್ತು ನಿವೃತ್ತಿ ನಂತರದ ಸೌಲಭ್ಯವನ್ನು ನೀಡದೆ ಅನ್ಯಾಯ ಮಾಡುತ್ತಿರುವ ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಸವಾಲಾಗಿ ಸ್ವೀಕರಿಸಿ ಅಮರಣಾಂತ ಉಪವಾಸವನ್ನು ಆರಂಭಿಸಿದ್ದೇವೆ

ಅಧಿಕಾರಿಗಳು ಧರಣಿ ಸತ್ಯಾಗ್ರಹದ ಆವರಣಕ್ಕೆ ಬರಕೂಡದು
ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿಯ ಯಾವುದೇ ಅಧಿಕಾರಿಗಳು ನಮ್ಮ ಧರಣಿ ಸತ್ಯಾಗ್ರಹದ ಆವರಣಕ್ಕೆ ಬರಕೂಡದು. ಬರಲು ನಾವು ಬಿಡುವುದಿಲ್ಲ. ಬಂದರೆ ಮಾತ್ರ ನಾವು ಧಿಕ್ಕಾರ ಕೂಗುತ್ತೇವೆ. ಕಾನೂನು ಮೀರಿ ತೊಂದರೆ ಮಾಡಿದರೆ ಅಧಿಕಾರಿಗಳು ಹೊಣೆಗಾರರಾಗುತ್ತಾರೆ. ಇವತ್ತು ಬಸ್ ಕೆಲವು ಕಡೆ ನಿಲ್ಲುತ್ತಿಲ್ಲ. ಚಾಲಕರ ಕೊರತೆ ಉಂಟಾಗಿದೆ ಎಂದಾದರೆ ಅದಕ್ಕೆ ಕಾರಣ ನಾವಲ್ಲ. ಸಂಬಳ ಸಿಗದೆ ಇರುವುದಿದರಿಂದ ಮನೆಯ ಬಾಡಿಗೆ ಕೊಡಲು ಗತಿಯಿಲ್ಲದೆ ಕೆಲವರು ಉತ್ತರಕನ್ನಡದ ಚಾಲಕರು, ನಿರ್ವಾಹಕರು ಊರಿಗೆ ಹೋಗಿದ್ದಾರೆ. ನಮ್ಮ ಬೇಡಿಕೆಯನ್ನು ಪರಿಹಾರ ಮಾಡಲು ಯಾರಿಗೆ ತಾಕತ್ತಿದೆಯೋ ಅವರು ಇಲ್ಲಿಗೆ ಬರಲಿ. ಕೇವಲ ಧರಣಿಯ ವರದಿಯನ್ನು ಮಾಡಲು ಬರುವವರು ಇಲ್ಲಿಗೆ ಬರುವುದು ಬೇಡ.
ಶಾಂತಾರಾಮ ವಿಟ್ಲ, ಪ್ರಧಾನ ವಕ್ತಾರ ಕೆಎಸ್ಸಾರ್ಟಿಸಿ ಮಜ್ದೂರ್ ಸಂಘ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.