ಶಿಕ್ಷಕರ ಕೊರತೆ‌ ನೀಗಿಸಲು ಉಪ್ಪಿನಂಗಡಿ ಮಾದರಿ ಹಿ.ಪ್ರಾಶಾಲಾ ಎಸ್.ಡಿ.ಎಂ.ಸಿ, ಪೋಷಕರಿಂದ ಶಿಕ್ಷಣಾಧಿಕಾರಿಗಳಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಂತೆ ಶಿಕ್ಷಕರನ್ನು ಒದಗಿಸುವಂತೆ ಶಾಲಾ ಎಸ್.ಡಿ.ಎಂಸಿ ಹಾಗೂ ಪೋಷಕರು ಅ.25ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.


ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 560 ಮಕ್ಕಳು ದಾಖಲಾತಿಯನ್ನು ಹೊಂದಿರುತ್ತಾರೆ. ಆದರೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಮತ್ತು ದೈಹಿಕ ಶಿಕ್ಷಕಿಯನ್ನು ಸೇರಿಸಿ ಕೇವಲ 8 ಮಂದಿ ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಈ ವರ್ಷ 1 ರಿಂದ 5 ನೇ ತರಗತಿಗೆ 378 ಮಂದಿ ಮಕ್ಕಳು ದಾಖಲಾತಿ ಪಡೆದುಕೊಂಡಿದ್ದು, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಹತ್ತು ಶಿಕ್ಷಕರ ಅವಶ್ಯಕತೆ ಇದೆ. ಅದೇ ರೀತಿ 6 ರಿಂದ 8 ನೇ ತರಗತಿಗೆ 180 ಮಕ್ಕಳು ಇದ್ದು, ಆರು ಶಿಕ್ಷಕರ ಅವಶ್ಯಕತೆ ಇರುತ್ತದೆ. ಹೀಗಾಗಿ ಶಾಲೆಯಲ್ಲಿ ಕೊರತೆಯಿರುವ ಶಿಕ್ಷಕರನ್ನು ಒದಗಿಸಿಕೊಡಬೇಕು. ನ.2ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ಪ್ರಾರಂಭಗೊಳ್ಳಲಿದ್ದು ಈ ಸಮಯಕ್ಕೆ ಶಿಕ್ಷಕರ ಕೊರತೆ ಕಂಡುಬಂದಲ್ಲಿ ನಾವು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಶಾಲೆಗೆ ಆವಶ್ಯವಿರುವ ಶಿಕ್ಷಕರ ನೇಮಕಾತಿ ಆಗುವ ತನಕ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ತೀರ್ಮಾನಿಸಿರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

ಒಂದು ವಾರದ ಕಾಲಾವಕಾಶ-ಮೋಯ್ದಿನ್ ಕುಟ್ಟಿ:
ಮನವಿ ಸಲ್ಲಿಸಿದ ಮೊಯ್ದಿನ್ ಕುಟ್ಟಿ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ ಶಾಲೆಗೆ 16 ಶಿಕ್ಷಕರ ಆವಶ್ಯಕತೆಯಿದೆ. ಶಾಲೆಗೆ ಕೊರತೆಯಿರುವ ಶಿಕ್ಷಕರ ಕೊರತೆಯನ್ನು ಪೂರೈಸಲು ನ.2ರ ತನಕ ಕಾಲಾವಕಾಶ ನೀಡಲಾಗುವುದು. ಆ ಬಳಿಕವು ಶಿಕ್ಷಕರನ್ನು ಒದಗಿಸಿಕೊಡದಿದ್ದರೆ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲೆಗೆ ಕಳುಹಿಸುವುದಿಲ್ಲ. ಶಾಲೆಗೆ 16 ಶಿಕ್ಷಕರ ಭರ್ತಿಯಾದ ಬಳಿಕ ಮಕ್ಕಳನ್ನು ಶಾಲೆಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.

ನಿಯೋಜನೆಗೆ ಪ್ರಯತ್ನ-ಲೋಕೇಶ್;
ಮನವಿ‌ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.ಮಾತನಾಡಿ, ಈಗಾಗಲೇ ತಾಲೂಕಿನ ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಈಗಾಗಲೇ ನಿಯೋಜನೆ ಮಾಡಲಾಗಿತ್ತು. ಇದಕ್ಕೆ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುಮೋದನೆ ದೊರೆಯದೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಶಾಲೆಗಳಿಗೆ ನಿಯೋಜನೆಗೊಳಿಸಿದ ಆದೇಶವನ್ನು ಉಪನಿರ್ದೇಶಕರು ರದ್ದುಗೊಳಿಸಿರುತ್ತಾರೆ. ಈಗ ಮತ್ತೆ ನಿಯೋಜನೆಗೆ ಹೊಸ ಪಟ್ಟಿ ಸಿದ್ದಗೊಂಡಿದ್ದು ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅನುಮೋದನೆ ದೊರತೆಕೂಡಲೇ ನಿಯೋಜನೆ ಗೊಳಿಸಲಾಗುವುದು. ಅಲ್ಲದೆ ವರ್ಗಾವಣೆಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ನಡೆದಿದ್ದು ಶಿಕ್ಷಕರ ವರ್ಗಾವಣೆ ಗಳು ನಡೆಯಲಿದೆ. ಅದಲ್ಲದೆ ನಿಯೋಜನೆಗೆ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಪೋಷಕರಾದ ಮುನೀರ್, ಖಲಂದರ್ ಶಾಫಿ, ಸುಲೈಮಾನ್, ಫಾರೂಕ್ ಝಿಂದಗಿ, ಬದ್ರುದ್ದೀನ್, ಲಲಿತಾ, ಜಯಂತಿ ಎನ್., ಮಂಜುಳ, ಪ್ರಮೀಳಾ ಕೆ., ಖೈರುನ್ನೀಸಾ, ಸಫಿಯಾ, ಆಯಿಷಾ, ತುಳಸಿ, ಆಸ್ಯಮ್ಮ, ಉಮೈಬಾನು, ಬರ್ಕತ್, ಚೈತ್ರಾ, ಖತೀಜಾ, ಮಹಮ್ಮದ್ ರವಾಝ್, ಹನೀಫ್, ತಸ್ಲೀಮಾ ಹಾಗೂ ಸತೀಶ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.