ಪುತ್ತೂರು ಎಂ.ಟಿ.ರಸ್ತೆಯಲ್ಲಿ ಸ್ಟೈಲ್ ಪಾರ್ಕ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರಿನ ವಿವಿಧ ಕಡೆ ಕಾರ್ಯಾಚರಿಸುತ್ತಿರುವ ಸ್ಟೈಲ್ ಪಾರ್ಕ್ ಸಂಸ್ಥೆಯವರ ಇನ್ನೊಂದು ಬೃಹತ್ ಸಂಸ್ಥೆ ಸ್ಟೈಲ್ ಪಾರ್ಕ್ ಇಲ್ಲಿನ ಎಂ.ಟಿ.ರಸ್ತೆಯಲ್ಲಿ ಅ.೨೫ರಂದು ಶುಭಾರಂಭಗೊಂಡಿತು. ಪುತ್ತೂರು ಮುದರ್ರಿಸ್ ಅಸಯ್ಯದ್ ಅಹ್ಮದ್ ಪೂಕೋಯ ತಂಙಳ್‌ರವರ ನೇತೃತ್ವದಲ್ಲಿ ಆರಂಭದಲ್ಲಿ ಮೌಲೂದ್ ಪಾರಾಯಣ ನಡೆಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಈ ಸಂಸ್ಥೆಯು ಉನ್ನತವಾಗಿ ಬೆಳಗಲಿ ಎಂದು ಶುಭಹಾರೈಸಿದರು. ಬಳಿಕ ಸಾಲ್ಮರ ಶರ್ಫುದ್ದೀನ್ ತಂಙಳ್ ರವರು ದುವಾಶೀರ್ವಚನ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು.

 

ಕೆಮ್ಮಾಯಿ ಮಸೀದಿಯ ಖತೀಬ್ ಇರ್ಷಾದ್ ಸಖಾಫಿ, ಎಸ್.ಎಮ್.ತಂಙಳ್ ಸಾಲ್ಮರ, ಕೆಮ್ಮಾಯಿ ಅಬೂಬಕ್ಕರ್ ತಂಙಳ್, ಕಟ್ಟಡದ ಮಾಲಕ ಇಂದಾಜೆ ಮಂಜುನಾಥ ನಾಯಕ್, ಪುತ್ತೂರು ಸಿಟಿ ಬಝಾರ್ ಮಾಲಕ ಹಸೈನಾರ್ ಹಾಜಿ ಸಿಟಿ ಬಝಾರ್, ಶೂ ಬಝಾರ್ ಮಾಲಕ ಅಬೂಬಕ್ಕರ್, ಫ್ಯಾನ್ಸಿ ಪಾರ್ಕ್ ಮಾಲಕ ಲತೀಫ್, ಅರಮನೆ ಗಾರ್ಮೆಂಟ್ಸ್ ಮಾಲಕ ಅಬ್ದುಲ್ ರಹಿಮಾನ್, ಅಬ್ದುಲ್ ಖಾದರ್ ಪುತ್ತು, ದರ್ಬೆ ಎಒನ್ ಡಿಸ್ಟ್ರಿಬ್ಯೂಟರ್‍ಸ್ ಮಾಲಕ ಶಕೀಲ್ ದರ್ಬೆ, ಕಾಮತ್ ಹೋಟೆಲ್ ಮಾಲಕ ದಿನೇಶ್ ಕಾಮತ್ ಸಹಿತ ಹಲವಾರು ಗಣ್ಯರು ಆಗಮಿಸಿ ಶುಭಹಾರೈಸಿದರು. ಸ್ಟೈಲ್ ಪಾರ್ಕ್ ಮಾಲಕ ಶಂಶುದ್ದೀನ್ (ಚಮ್ಮು) ಕೆಮ್ಮಾಯಿರವರು ಸ್ವಾಗತಿಸಿ ಮಾತನಾಡಿ ಒಂದು ಗ್ರಾಂ. ಗೋಲ್ಡ್, ಆಂಟಿಕ್ ಜುವೆಲ್, ಕಾಸ್ಮೆಟಿಕ್ಸ್, ಗಿಫ್ಟ್ ಮತ್ತು ಬ್ಯಾಗ್ ಸ್ಟೇಷನರಿಗಳು, ಆಟಿಕೆಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.