ವಾಹನ ಸವಾರರ ತ್ಯಾಜ್ಯದ ಊರು ಆರ್ಯಾಪು…!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರಸ್ತೆ ಬದಿಯಲ್ಲೇ ತ್ಯಾಜ್ಯಗಳ ರಾಶಿ ರಾಶಿ

ಪುತ್ತೂರು; ಮಾಣಿ- ಮೈಸೂರು ರಾ. ಹೆದ್ದಾರಿಯ ಆರ್ಯಾಪು ಗ್ರಾಪಂ ವ್ಯಾಪ್ತಿಯ ಕಲ್ಲರ್ಪೆ ಬಳಿ ರಸ್ತೆ ಬದಿಯಲ್ಲಿ ತ್ಯಾಜ್ಯಗಳ ರಾಶಿಯೇ ಇದ್ದು ವಾಹನದಲ್ಲಿ ತೆರಳುವ ಸವಾರರು ತಮ್ಮ ಮನೆಯಿಂದ ತರುವ ತ್ಯಾಜ್ಯವನ್ನು ಇಲ್ಲೇ ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಕಳೆದ ಕೆಲವು ತಿಂಗಳ ಹಿಂದೆ ಇದೇ ಜಾಗದಲ್ಲಿ ತ್ಯಾಜ್ಯ ಹಾಕುತ್ತಿದ್ದರು. ಆರ್ಯಾಪು ಗ್ರಾಪಂ ರಾಶಿ ಬಿದ್ದಿರುವ ತ್ಯಾಜ್ಯವನ್ನು ತೆರುವಗೊಳಿಸಿ ಅಲ್ಲೊಂದು ನಾಮಫಲಕವನ್ನು ಹಾಕಿ ಇಲ್ಲಿ ಯಾರೂ ತ್ಯಾಜ್ಯ ಹಾಕಬಾರದು, ಹಾಕಿದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕಾ ಫಲಕವನ್ನು ಅಳವಡಿಸಿತ್ತು. ಫಲಕ ಹಾಕಿದ ಬಳಿಕ ಒಂದು ತಿಂಗಳು ಮಾತ್ರ ಅಲ್ಲಿ ಯಾರೂ ಕಸ ಹಾಕಿರಲಿಲ್ಲ. ಇದೀಗ ಮತ್ತೆ ಅದೇ ಸ್ಥಳದಲ್ಲಿ ಕಸದ ರಾಶಿಯೇ ಬಿದ್ದಿದೆ. ಮನೆಯಿಂದ, ಅಂಗಡಿಯಿಂದ ತರುವ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಎಸೆಯುತ್ತಿದ್ದಾರೆ. ಈಗಾಗಲೇ ಒಂದು ಲೋಡಿಗೂ ಮಿಕ್ಕಿ ಪ್ಲಾಸ್ಟಿಕ್ ಗಂಟುಗಳು ಸ್ಥಳದಲ್ಲಿದೆ. ತ್ಯಾಜ್ಯ ಹಾಕುವವರಿಗೆ ಸ್ವಚ್ಚತೆಯ ಪರಿಕಲ್ಪನೆ ಮತ್ತು ರಸ್ತೆ ನಮ್ಮದ , ಊರು ನಮ್ಮದು ಎಂಬ ಭಾವನೆ ಬರುವ ತನಕ ತ್ಯಾಜ್ಯಕ್ಕೆ ಮುಕ್ತಿ ಸಿಗುವುದು ಕಷ್ಟ ಎಂದು ಸ್ಥಳೀಯರ ಅಬಿಪ್ರಾಯವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.