ಉಪ್ಪಿನಂಗಡಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಒಟ್ಟು ವ್ಯವಹಾರ : ರೂ. 13,30,51,932.80 , ನಿವ್ವಳ ಲಾಭ : ರೂ.5,44,961.26, ಶೇ.13 ಡಿವಿಡೆಂಡ್

ಉಪ್ಪಿನಂಗಡಿ : ಉಪ್ಪಿನಂಗಡಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿಯ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್‌ರವರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ 2020-21 ರ ಅರ್ಥಿಕ ವರ್ಷದ ವ್ಯವಹಾರವು ರೂ. 13,30,51,932.80  ಆಗಿದ್ದು, ಪ್ರಸಕ್ತ ಸಾಲಿನಲ್ಲಿ ರೂ.5,44,961.26 ನಿವ್ವಳ ಲಾಭವನ್ನು ಗಳಿಸಿರುತ್ತದೆ. ಸಭೆಯು ಅನುಮತಿಸಿದಂತೆ ಸದಸ್ಯರಿಗೆ ಶೇ.13 ಡಿವಿಡೆಂಟ್ ನೀಡುವುದಾಗಿ ತಿಳಿಸಿದರು.

ಸಹಕಾರಿಯ ಉಪಾಧ್ಯಕ್ಷ ಜೆರೋಂ ಬ್ಲಾಗ್ಸ್ ಸ್ವಾಗತಿಸಿದರು. ನಿರ್ದೇಶಕರಾದ ಗ್ರೆಗರಿ ಲೋಬೊ, ರೋಬರ್ಟ್ ಡಿಸೋಜ, ಸೆಬೆಸ್ಟಿಯನ್ ಲೋಬೊ, ಸಿಲ್ವೆಸ್ಟರ್ ವೇಗಸ್, ಮ್ಯಾಕ್ಸಿಂ ಲೋಬೊ, ಹೆನ್ರಿ ಲೋಬೊ, ವಿನ್ಸೆಂಟ್ ಕೆನ್ಯೂಟ್ ಮಿನೇಜಸ್, ಐರಿನ್ ಲೋಬೊ, ಫೆಲ್ಸಿ ಡಿಸೋಜ ರವರು ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಫ್ರೆಡ್ ವಿನ್ಸೆಂಟ್ ಡಿಸೋಜರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನೆಲ್ಯಾಡಿ ಶಾಖೆಯ ಗುಮಾಸ್ತೆ ಅನೀಶ ಡಿಸೋಜರವರು ವರದಿ ವಾಚಿಸಿದರು. ನೆಲ್ಯಾಡಿ ಶಾಖೆಯ ವ್ಯವಸ್ಥಾಪಕ ಶ್ರೇಯಸ್ ಶೆಟ್ಟಿ ಲೆಕ್ಕ ಪತ್ರಗಳನ್ನು ಮಂಡಿಸಿದರು. 2021-2022ರ ಅಂದಾಜು ಮುಂಗಡ ಪತ್ರವನ್ನು ಗುಮಾಸ್ತೆ ಲವೀನಾರವರು ವಾಚಿಸಿದರು. ಕೇಂದ್ರ ಕಚೇರಿಯ ಪಿಗ್ನಿ ಸಂಗ್ರಾಹಕರಾದ ವಿಕ್ಟರ್ ಪಿಂಟೊ, ಸೋಮನಾಥ ಹಾಗೂ ನೆಲ್ಯಾಡಿ ಶಾಖೆಯ ಶಿವಪ್ರಸಾದ್ ರವರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.