ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪುತ್ತೂರು ಶಿಕ್ಷಣ ಇಲಾಖೆಯ ತಂಡದ ಬೆಂಕಿ ಬೇಲಿ ನಾಟಕಕ್ಕೆ ಎರಡನೇ ಅತ್ಯುತ್ತಮ ನಾಟಕ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಸರಕಾರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು 2021ರ ನಾಟಕ ವಿಭಾಗದಲ್ಲಿ ಪುತ್ತೂರು ಶಿಕ್ಷಣ ಇಲಾಖೆಯ ಶಿಕ್ಷಕರ ತಂಡ ಪ್ರಸ್ತುತಪಡಿಸಿದ ಬೆಂಕಿ ಬೇಲಿ ನಾಟಕ ಎರಡನೇ ಅತ್ಯುತ್ತಮ ನಾಟಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.ರವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ನಾಟಕವನ್ನು ಸಂಜಯನಗರ ಶಾಲಾ ಶಿಕ್ಷಕ ರಮೇಶ್ ಉಳಯ ರಚಿಸಿ, ನಿರ್ದೇಶನ ಮಾಡಿದ್ದರು. ರಂಗಾಯಣ ಮೈಸೂರಿನ ಜಯಶ್ರೀ ಇಡ್ಕಿದು ಈ ನಾಟಕದ ರಂಗನಡೆಯನ್ನು ಮಾಡಿದ್ದಾರೆ. ಬಂಟ್ವಾಳ ತಾಲೂಕು ನೀರ್ಕಜೆ ಶಾಲಾ ಶಿಕ್ಷಕ ರಾಮನಾಯ್ಕ್ ಕೊಜಪ್ಪೆ ಇವರ ಸಂಗೀತ ನಿರ್ದೇಶನ, ಮುಕ್ವೆ ಶಾಲಾ ಶಿಕ್ಷಕ ಚರಣ್ ಕುಮಾರ್ ಪುದು ಹಾಗೂ ಆರೆಲ್ತಡಿ ಶಾಲಾ ಶಿಕ್ಷಕ ಶ್ರೀಕಾಂತ್ ನಾಯ್ಕ್ ಕಂಬಳಕೋಡಿ ಇವರ ದೃಶ್ಯ ವಿನ್ಯಾಸಗಳನ್ನೊಳಗೊಂಡಿದೆ.

 

ಆಧುನಿಕ ನಾರಿಯೊಬ್ಬಳು ಹೆಣ್ಣಿನ ಮೇಲಾಗುವ ಶೋಷಣೆಯಿಂದ ರೋಸಿ ಹೋಗಿ ಹೆಣ್ಣ ಬದುಕಿನಿಂದ ಬಿಡುಗಡೆ ಹೊಂದ ಬಯಸುತ್ತಾಳೆ. ಮೇಲ್ನೋಟದ ಹೆಣ್ಣ ಬದುಕಿನ ಚಿತ್ರೀಕರಣ ಮತ್ತೆ ಅವಳನ್ನು ಹೆಣ್ಣು ಬದುಕಿನತ್ತ ಮರಳಿಸುತ್ತದೆ. ಅವಳು ಪುರಾಣದ ಮಹಾನಾರಿಯರಾದ ಸೀತೆ, ಕುಂತಿ, ಗಾಂಧಾರಿ, ದ್ರೌಪದಿ ಇವರುಗಳಿಗೆ ಮುಖಾಮುಖಿಯಾಗುತ್ತಾಳೆ. ಹೆಣ್ಣಿನ ಮೇಲಿನ ಶೋಷಣೆಗೆ ಮುಕ್ತಿ ಕೊಡಿ ಎಂದು ಬೇಡುತ್ತಾಳೆ. ಆದರೆ ಅವರೆಲ್ಲರೂ ಶೋಷಣೆಯ ಬೆಂಕಿ ಬೇಲಿಯಲ್ಲಿ ಬಂದವರೆಂಬ ನೋವನ್ನು ತೋಡಿಕೊಳ್ಳುತ್ತಾರೆ. ನಾಟಕದುದ್ದಕ್ಕೂ ನೋವು ನೋವಾಗಿ ಉಳಿದುಬಿಡುತ್ತದೆ. ಅಂತಿಮವಾಗಿ ಕಾಡುವ ಪ್ರಶ್ನೆ ಒಂದೇ ಎಂದು ಬಿಡುಗಡೆ ಹೆಣ್ಣಿಗೆ..? ಎಂಬುದು. ಆಕರ್ಷಿತವಾದ ದೃಶ್ಯಗಳು, ನವೀನ ರೀತಿಯ ವಸ್ತ್ರವಿನ್ಯಾಸ, ಸುಮಧುರ ಹಾಡುಗಳು ನೃತ್ಯಗಳು ಎಲ್ಲದಕ್ಕಿಂತ ಹೆಚ್ಚಾಗಿ ಎಲ್ಲಾ ಪಾತ್ರಗಳ ಅಭಿನಯಗಳು ನಾಟಕವನ್ನು ಎದ್ದು ನಿಲ್ಲಿಸುತ್ತದೆ. ಮಗು ಗಂಗೆಯನ್ನು ತೇಲಿಬಿಡುವ ದೃಶ್ಯ, ಸೀತೆಯ ಅಗ್ನಿ ಪರೀಕ್ಷೆ, ಸೀತೆ ದೇಹ ಪರಿತ್ಯಾಗ, ಕುರುಕ್ಷೇತ್ರದಲ್ಲಿ ನಾರಿಯರ ಆರ್ತನಾದ ಎಲ್ಲವೂ ನಾಟಕಕ್ಕೆ ಜೀವ ತುಂಬಿಸುತ್ತದೆ.

ಸೀತೆಯಾಗಿ ಪುಣ್ಚಪ್ಪಾಡಿ ಶಾಲಾ ಶಿಕ್ಷಕಿ ರಶ್ಮಿತಾ ನರಿಮೊಗರು, ಕುಂತಿಯಾಗಿ ಗೋಳಿತ್ತಟ್ಟು ಶಾಲಾ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು, ಗಾಂಧಾರಿಯಾಗಿ ಅಮೈ ಶಾಲಾ ಶಿಕ್ಷಕಿ ಜ್ಯೋತಿ ದೇವರಮನೆ, ದ್ರೌಪದಿಯಾಗಿ ಸರ್ವೆ ಶಾಲಾ ಶಿಕ್ಷಕಿ ಜ್ಯೋತಿ ಚಿಕ್ಕಮಗಳೂರು, ಸೂರ್ಯನಾಗಿ ಬೊಬ್ಬೆಕೇರಿ ಶಾಲಾ ಶಿಕ್ಷಕಿ ಶೋಭಿತ ಮಾರ್ನಾಡ್, ಆಧುನಿಕ ನಾರಿಯಾಗಿ ಕಬಕ ಶಾಲಾ ಶಿಕ್ಷಕಿ ರಾಣಿ ಅತ್ತಿಹಳ್ಳಿ, ತಾಟಕಿಯಾಗಿ ಬಡಗನ್ನೂರು ಶಾಲಾ ಶಿಕ್ಷಕ ಜನಾರ್ಧನ ದುರ್ಗ, ಕರ್ಣನಾಗಿ ಶಾಂತಿನಗರ ಗೋಳಿತೊಟ್ಟು ಶಾಲಾ ಶಿಕ್ಷಕ ಮಂಜುನಾಥ ಮಣಕವಾಡ, ರಾಮನಾಗಿ ದರ್ಬೆತ್ತಡ್ಕ ಶಾಲಾ ಶಿಕ್ಷಕ ರಾಜು ಕುಂದವಾಡ ಗಮನಸೆಳೆಯುವಂತೆ ಅಭಿನಯಿಸಿದ್ದಾರೆ. ಈ ನಾಟಕ ಸ್ಪರ್ಧೆಯು ದಾವಣಗೆರೆಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗನಟಿ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನಡೆಯಿತು.

ಕರ್ನಾಟಕ ರಾಜ್ಯದ 31  ಜಿಲ್ಲೆಗಳಿಂದ ಆಯ್ಕೆಯಾದ 29 ನಾಟಕಗಳ ಸ್ಪರ್ಧಾಕಣದಲ್ಲಿ ಎರಡನೇ ಅತ್ಯುತ್ತಮ ನಾಟಕವಾಗಿ ಬೆಂಕಿ ಬೇಲಿ ನಾಟಕ ಮೂಡಿಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.