ಸವಣೂರು : ರಾಜ್ಯಮಟ್ಟದ ತ್ರೋಬಾಲ್ ತರಬೇತಿ ಶಿಬಿರದ ಸಮಾರೋಪ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸವಣೂರು ; ಇಲ್ಲಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು ಮತ್ತು ತ್ರೋಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ತ್ರೋಬಾಲ್ ತರಬೇತಿ ಶಿಬಿರದ sಸಮಾರೋಪ ಸಮಾರಂಭ ನಡೆಯಿತು.


ಸಭಾ ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅವರು ಮಾತನಾಡಿ, ಶಿಭಿರಾರ್ಥಿಗಳೆಲ್ಲರೂ ಕ್ರೀಡಾಮನೋಭಾವದಿಂದ ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಅದ್ಭುತ ಸಾಧನೆ ಮಾಡಲು ಸಾಧ್ಯ ಎಂದರು.

ಮುಖ್ಯ ಅತಿಥಿ ಪುತ್ತೂರು ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾದರ್ ವಿಜಯ ಹಾರ್ವಿನ್ ಶಿಭಿರಾರ್ಥಿಗಳು ಅಭಾಸ ಪಂದ್ಯಗಳಿಂದ ವಿಶೇಷವಾದ ಸಾಧನೆ ಮಾಡಲು ಈ ಶಿಬಿರ ಸಹಾಯಕ. ಎಲ್ಲರೂ ಕೂಡ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಕರ್ನಾಟಕ ರಾಜ್ಯಕ್ಕೆ, ಊರಿಗೆ ಶಿಬಿರ ನಡೆಸಿದಂತಹ ಈ ಕಾಲೇಜಿಗೆ ಹೆಸರು ತರಬೇಕೆಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಪುತ್ತೂರು ಎ.ಪಿ.ಎಂ.ಸಿ ಅಧ್ಯಕ್ಷ ದಿನೇಶ ಮೆದು, ಬಿಳಿನೆಲೆ ಶ್ರೀಗೋಪಾಲಕೃಷ್ಣ ಪ್ರೌಢಶಾಲೆಚಿi ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು,ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಬಿ.ಎಸ್ ಶುಭಸಂಶನೆಗೈದರು.

ನಿವೃತ್ತ ಪೋಲೀಸ್ ಇನ್ಸ್ಪ್ ಪೆಕ್ಟರ್ ಬಾಲಕೃಷ್ಣ ಗೌಡ, ಬಿ.ಎಸ್.ಎನ್.ಎಲ್ ಉದ್ಯೋಗಿ ಗಣೇಶ್ ರೈ, ರಾಜ್ಯಮಟ್ಟದ ತ್ರೋಬಾಲ್ ಶಿಬಿರದ ಸಂಘಟಕ ಮತ್ತು ತರಬೇತುದಾರರಾದ ರಾಜೇಶ್ ಟಿ.ಬಿ, ಮೋನಪ್ಪ ಪಟ್ಟೆ, ಕು. ಪೂರ್ಣಿಮ ಪಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪದವಿ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್.ರೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಇಡಿ. ಅಶ್ವಿನ್ ಎಲ್. ಶೆಟ್ಟಿ , ರಾಜ್ಯಮಟ್ಟದ ತ್ರೋಬಾಲ್ ತರಬೇತುದಾರರಾz ಶ್ರೀ. ರಾಜೇಶ್ ಟಿ.ಬಿ, ಮೋಪ್ಪ ಪಟ್ಟೆ, ಕು. ಪೂರ್ಣಿಮ ಪಿ, ಶಿಬಿರಾರ್ಥಿಗಳಾದ ಬೃಂದ ಮತ್ತು ಮಂದಿರಾ ಆವರನ್ನು ಸಮನಿಸಲಾಯಿತು. ಶಿಭಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಉಪಪ್ರಾಂಶುಪಾಲ ಎಂ. ಶೇಷಗಿರಿ ಸ್ವಾಗತಿಸಿ, ಕಾರ್ಯಕ್ರಮದ ಸಂಘಟಕ ಮೋನಪ್ಪ ಪಟ್ಟೆ ಅವರು ವಂದಿಸಿದರು. ವಾಣಿಜ್ಯಶಾಸ್ತ್ರದ ಉಪನ್ಯಾಕ ಹರ್ಷಿತ್ ಕುಮಾರ್ ಶೆಟ್ಟಿ ನಿರೂಪಿಸಿದರು. ರಿತೇಶ್ ಮತ್ತು ಬಳಗದವರ ಆಶಯಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.