ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

* ರೂ.213 ಕೋಟಿ ವ್ಯವಹಾರ * ರೂ.61.42ಲಕ್ಷ ನಿವ್ವಳ ಲಾಭ * ಸದಸ್ಯರಿಗೆ ಶೇ.12  ಡಿವಿಡೆಂಡ್

ಕಾವು : ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2020-21ನೇ ಆರ್ಥಿಕ ಸಾಲಿನಲ್ಲಿ ರೂ.212.99 ಕೋಟಿ ವ್ಯವಹಾರ ನಡೆಸಿ ರೂ.61.42 ಲಕ್ಷ ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.೧೨ ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಹೇಳಿದರು.


ಅವರು ಅ.26ರಂದು ಸಂಘದ ಪ್ರಧಾನ ಕಛೇರಿ ಕಾವು ಇದರ ಶಿವಸದನ ಸಭಾಭವನದಲ್ಲಿ ನಡೆದ ಸಂಘದ 2020-21ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ರೂ.61.42 ಲಕ್ಷ ನಿವ್ವಳ ಲಾಭ:
ಸಂಘವು 2020-21ನೇ ಸಾಲಿನಲ್ಲಿ ಒಟ್ಟು ರೂ.213 ಕೋಟಿಗಳಷ್ಟು ವಾರ್ಷಿಕ ವ್ಯವಹಾರವನ್ನು ಮಾಡಿ ೬೧,೪೨,೪೮೬ ರೂಪಾಯಿ ನಿವ್ವಳ ಲಾಭ ಹೊಂದಿದ್ದು, ಲಾಭಾಂಶವನ್ನು ನಿಯಮಾವಳಿಯ ಪ್ರಕಾರ ಹಂಚಿಕೆ ಮಾಡಿ ಸದಸ್ಯರಿಗೆ ಶೇ.೧೨ ಡಿವಿಡೆಂಡ್ ಮತ್ತು ಸಂಘದ ಸಿಬ್ಬಂದಿಗಳಿಗೆ ಎರಡು ತಿಂಗಳ ಸಂಬಳದ ಬೋನಸ್ ನೀಡಲಾಗುವುದು. ವರ್ಷಾಂತ್ಯಕ್ಕೆ ಸಂಘದಲ್ಲಿ ೨೦೮೫ ಜನ ಸದಸ್ಯರಿದ್ದು, ರೂ.೧,೯೬,೫೭,೧೦೦ ಪಾಲು ಬಂಡವಾಳವಿದೆ. ವರ್ಷಾಂತ್ಯಕ್ಕೆ ವಿವಿಧ ಠೇವಣಿಗಳಾಗಿ ರೂ. ೨೭,೪೦,೬೪,೪೪೭ ಹೊಂದಿರುತ್ತದೆ. ಲಾಭಾಂಶವನ್ನು ಮಹಾಸಭೆಯ ಬಳಿಕ ಸದಸ್ಯರ ಉಳಿತಾಯ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ನನ್ಯ ಅಚ್ಚುತ ಮೂಡೆತ್ತಾಯರು ಹೇಳಿದರು.

ಸಾಲ ವಸೂಲಾತಿಯಲ್ಲಿ ಶೇ.99.72 ಪ್ರಗತಿ:
ಸಂಘದಲ್ಲಿ ವರ್ಷಾರಂಭಕ್ಕೆ ರೂ. 22,13, ಸದಸ್ಯರ ಸಾಲ ಹೊರಬಾಕಿಯಿದ್ದು, ವರದಿ ವರ್ಷದಲ್ಲಿ ರೂ. 26,27,35,650 ಸಾಲ ವಿತರಿಸಿದ್ದು, ರೂ. 23,48,67,691 ವಸೂಲಾತಿಯಾಗಿ ವರ್ಷಾಂತ್ಯಕ್ಕೆ ರೂ. ೨೪,೯೧,೩೨,೫೭೬ ಸಾಲ ಹೊರ ಬಾಕಿ ಇದ್ದು, ಸಾಲ ವಸೂಲಾತಿಯಲ್ಲಿ ಶೇ.99.72 ಪ್ರಗತಿ ಸಾಧಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ವೇದಿಕೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ಶರತ್ ಡಿ, ಸಂಘದ ಉಪಾಧ್ಯಕ್ಷ ರಮೇಶ್ ಪೂಜಾರಿ ಮುಂಡ್ಯ, ನಿರ್ದೇಶಕರುಗಳಾದ ಎ.ಮಂಜುನಾಥ ರೈ, ಶಿವಪ್ರಸಾದ್ ಕೊಚ್ಚಿ, ಶ್ರೀಧರ್ ರಾವ್ ನಿಧಿಮುಂಡ, ಲೋಕೇಶ್ ಚಾಕೋಟೆ, ರಾಮಣ್ಣ ನಾಯ್ಕ ಕುದ್ರೋಳಿ, ಮೋಹನಾಂಗಿ ಬೀಜಂತಡ್ಕ, ಹೇಮಾವತಿ ಚಾಕೋಟೆ, ಚಂದ್ರಶೇಖರ ಗೌಡ ನೂಜಿಬೈಲು, ಲೋಹಿತ್ ಅಮ್ಚಿನಡ್ಕರವರು ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿ ಶೋಭಾ ಪ್ರಾರ್ಥಿಸಿದರು. ನಿರ್ದೇಶಕರಾದ ಪ್ರವೀಣ್ ರೈ ಮೇನಾಲ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ಮಹಾಸಭೆಯ ತಿಳುವಳಿಕೆ ಪತ್ರವನ್ನು ಓದಿ ದೃಢೀಕರಿಸಿದರು. ಸಂಘದ ಸಿಬ್ಬಂದಿಗಳು ವಿವಿಧ ಜವಾಬ್ದಾರಿ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.