ಕೆಯ್ಯೂರು: ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹರ್ಷ ಕುಮಾರ್ ರೈಯವರ ಸಮಾಜಮುಖಿ ಚಿಂತನೆ ಎಲ್ಲರಿಗೂ ಮಾದರಿ: ಕಾವು ಹೇಮನಾಥ ಶೆಟ್ಟಿ

 

ಪುತ್ತೂರು: ಹಿರಿಯರ ನೆನಪು ಮಾಡಿಕೊಳ್ಳುವ ಮೂಲಕ ಅವರಿಗೆ ಗೌರವ ಕೊಡುವ ಕೆಲಸದೊಂದಿಗೆ ತಾನು ಗಳಿಸಿದ ಆರ್ಥಿಕ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜದ ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸುತ್ತಿರುವ ಡಾ.ಹರ್ಷ ಕುಮಾರ್ ರೈಯವರ ಸಮಾಜಮುಖಿ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ. ಸಮಾಜದಲ್ಲಿ ಶ್ರೀಮಂತರು ಬೇಕಾದಷ್ಟು ಜನರಿದ್ದಾರೆ ಆದರೆ ತಮ್ಮ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜಮುಖಿ ಕೆಲಸಗಳಿಗೆ ಎಷ್ಟು ಜನರು ಕೊಡುತ್ತಾರೆ ಎಂಬುದು ಮುಖ್ಯ. ಅಂತಹ ವ್ಯಕ್ತಿಗಳಲ್ಲಿ ಹರ್ಷ ಕುಮಾರ್ ರೈಯವರು ತನ್ನ ಎಳೆಯ ಪ್ರಾಯದಲ್ಲೇ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಅವರು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಅ.26  ರಂದು ಜನ್ಮ ಫೌಂಡೇಷನ್ ಟ್ರಸ್ಟ್ ಪುತ್ತೂರು ಇದರ ನೇತೃತ್ವದಲ್ಲಿ ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈ ಸ್ಮರಣಾರ್ಥ 9 ನೇ ವರ್ಷದ ಪುಸ್ತಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾವು ಎಷ್ಟೇ ಶ್ರೀಮಂತರಾದರೂ ನಮ್ಮ ಸಂಪಾದನೆಯಲ್ಲಿ ಒಂದಿಷ್ಟಾದರೂ ಸಮಾಜಕ್ಕೆ ಕೊಡದೇ ಇದ್ದರೆ ನಾವು ಶ್ರೀಮಂತರಾಗಿದ್ದರೂ ಪ್ರಯೋಜನವಿಲ್ಲ. ತಮ್ಮ ಶ್ರೀಮಂತಿಕೆಯಲ್ಲಿ ಒಂದಷ್ಟು ಸಮಾಜಕ್ಕೆ ನೀಡಿದಾಗಲೇ ನಾವು ನಿಜವಾದ ಶ್ರೀಮಂತರಾಗಲು ಸಾಧ್ಯವಿದೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಈ ನಿಟ್ಟಿನಲ್ಲಿ ಹರ್ಷ ಕುಮಾರ್ ರೈಯವರನ್ನು ನಾವೆಲ್ಲರೂ ಗೌರವಿಸಬೇಕಾಗಿದೆ ಎಂದು ಹೇಮನಾಥ ಶೆಟ್ಟಿ ಹೇಳಿದರು.


ಸಭಾಧ್ಯಕ್ಷತೆ ವಹಿಸಿದ್ದ ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ ಎಸ್.ಭಂಡಾರಿ ಮಾತನಾಡಿ, ಹರ್ಷ ಕುಮಾರ್‌ಯವರು ಪ್ರತಿ ವರ್ಷವೂ ತನ್ನ ಅಜ್ಜಅಜ್ಜಿಯ ನೆನಪಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ತನ್ನ ಹಿರಿಯರ ನೆನಪಲ್ಲಿ ಇಂತಹ ಸಮಾಜಮುಖಿ ಕೆಲಸ ಮಾಡುತ್ತಿರುವ ಹರ್ಷರವರು ಯುವ ಜನಾಂಗಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ. ಇವರಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.

ಶಾಲಾ ಮುಖ್ಯಗುರು ಬಾಬು.ಎಂ ಸ್ವಾಗತಿಸಿದರು.ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಸುಪ್ರಭಾ ಪಿ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಟಿಜಿಟಿ ಶಿಕ್ಷಕ ಗಂಗಾಧರ್ ರೈ ವಂದಿಸಿದರು. ಎ.ಜಿ.ಟಿ ಶಿಕ್ಷಕ ಪ್ರಕಾಶ್ ಹುಲಿಕಟ್ಟಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶೈಲಜಾ ಸಿ.ಎನ್, ಶಾಲಿನಿ, ಗೌರವ ಶಿಕ್ಷಕಿ ಸೌಮ್ಯ, ಎಲ್‌ಕೆಜಿ ಯುಕೆಜಿ ಶಿಕ್ಷಕಿಯರಾದ ಸೌಮ್ಯ, ಜ್ಯೋತಿ ಸಹಕರಿಸಿದ್ದರು. ಅರಿಯಡ್ಕ ಗ್ರಾಪಂ ಸದಸ್ಯ ಕಾವು ದಿವ್ಯನಾಥ ಶೆಟ್ಟಿ, ಪೋಷಕ ಶರೀಫ್ ಕಟ್ಟತ್ತಾರು ಮತ್ತಿತರರು ಉಪಸ್ಥಿತರಿದ್ದರು.

9ನೇ ವರ್ಷದ ಕಾರ್ಯಕ್ರಮ
ಡಾ.ಹರ್ಷ ಕುಮಾರ್ ರೈಯವರು ತನ್ನ ಅಜ್ಜ, ಅಜ್ಜಿಯರಾದ ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ ತ್ಯಾಂಪಣ್ಣ ರೈಯವರ ಸ್ಮರಣಾರ್ಥ ಕೆಯ್ಯೂರು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸುತ್ತಿರುವುದು ಇದು 9ನೇ ವರ್ಷವಾಗಿದೆ. ಕಳೆದ 8ವರ್ಷಗಳಿಂದಲೂ ಪ್ರತಿ ವರ್ಷ ಅಜ್ಜಅಜ್ಜಿಯ ನೆನಪಿನಲ್ಲಿ ಪುಸ್ತಕ ವಿತರಣೆ ಮಾಡುತ್ತಾ ಬಂದಿದ್ದಾರೆ.

375ಮಕ್ಕಳಿಗೆ ವಿತರಣೆ
ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 1 ರಿಂದ 8ರಗತಿಯ ಒಟ್ಟು 375 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಒಂದಷ್ಟು ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.

ಪ್ರತಿಭಾ ಪುರಸ್ಕಾರ
2020-21 ನೇ ಸಾಲಿನಲ್ಲಿ ಶಾಲೆಯ 8 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಚರಿತಾ ಕಣಿಯಾರು ಬೈಲು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಲು,ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.