ಆರ್ಯಾಪು ಸಿ.ಎ, ಬ್ಯಾಂಕ್ ಮಾಜಿ ನಿರ್ದೇಶಕ ನಡುಬೈಲು ಕಿಟ್ಟಣ್ಣ ಶೆಟ್ಟಿ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 ಪುತ್ತೂರು: ಕಾಟುಕುಕ್ಕೆ ದಿ. ಅಕ್ಕರಿ ಶೆಟ್ಟಿರವರ ಪುತ್ರ, ಆರ್ಯಾಪು ಸಿ. ಎ, ಬ್ಯಾಂಕ್ ಮಾಜಿ ನಿರ್ದೇಶಕ ಹಾಗೂ ಕುರಿಯ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ನಡುಬೈಲು ಕಿಟ್ಟಣ್ಣ ಶೆಟ್ಟಿ (92 ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ. 23 ರಂದು ತಮ್ಮ ಸೃಗೃಹ ಮೇಗಿನ ಇಳಂತಾಜೆಯಲ್ಲಿ ನಿಧನರಾದರು. ನಡುಬೈಲು ಕಿಟ್ಟಣ್ಣ ಶೆಟ್ಟಿ ರವರು ಕಾಟುಕುಕ್ಕೆ ಮತ್ತು ಶೇಖಮಲೆ ಶಾಲೆಯಲ್ಲಿ ಶಿಕ್ಷಣ ಪೂರೈಸಿರುವ ಇವರು ಪ್ರಗತಿಪರ ಕೃಷಿಕರಾಗಿ, ಸಾಮಾಜಿಕ ಮುಂದಾಳುವಾಗಿ, ಹಲವಾರು ವರ್ಷ ಕುರಿಯ ಶಾಲೆಯ ವಾರ್ಷಿಕೋತ್ಸವ ಇವರ ಉಸ್ತುವಾರಿಯಲ್ಲಿ ನಡೆಯುತ್ತಿತು.

ಯಕ್ಷಗಾನ ತಾಳಮದ್ದಳೆ ಯಲ್ಲಿ ಅಸಕ್ತಿ ಹೊಂದಿದ್ದ, ಇವರು ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದರು.ನಡುಬೈಲು ಕಿಟ್ಟಣ್ಣ ಶೆಟ್ಟಿರವರು ಪತ್ನಿ ಪುಷ್ಪವತಿ, ಪುತ್ರರಾದ ಮಸ್ಕತ್ ನ ರಾಯಲ್ ಹಾಸ್ಪಿಟಲ್ ನ ಮೆಡಿಕಲ್ ವಿಭಾಗದ ನಿವೃತ್ತ ಉದ್ಯೋಗಿ ಭಾಸ್ಕರ ಶೆಟ್ಟಿ, ಪ್ರಗತಿಪರ ಕೃಷಿಕ ಜಯರಾಮ ಶೆಟ್ಟಿ, ದೋಹ- ಕತ್ತಾರ್ ನಲ್ಲಿ ಸರಕಾರಿ ಆಸ್ಪತ್ರೆಯ ಬಯೋ ಮೆಡಿಕಲ್ ಇಂಜಿನಿಯರ್ ಸುಭಾಷ್ ಚಂದ್ರ ಶೆಟ್ಟಿ, ಅಳಿಯ ಕೆದಂಬಾಡಿ- ಕೆಯ್ಯೂರು ಸಿ.ಎ, ಬ್ಯಾಂಕ್ ನ ಮುಖ್ಯಕಾರ್ಯನಿರ್ವಹಣಾಧಕಾರಿ ವಿನಯ ಕುಮಾರ್ ರೈ ದೇರ್ಲ, ಪುತ್ರಿ ಜಯಶ್ರೀ ವಿನಯ ಕುಮಾರ್ ರೈ, ಸೊಸೆಯಂದಿರಾದ ಆಶಾ ಭಾಸ್ಕರ್ ಶೆಟ್ಟಿ, ಗುಣಶೀಲ ಜಯರಾಮ್ ಶೆಟ್ಟಿ, ವಿದ್ಯಾ ಸುಭಾಷ್ ಚಂದ್ರ ಶೆಟ್ಟಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಎ.ಕೆ.ಜಯರಾಮ ರೈ, ಸಂತೋಷ ಕುಮಾರ್ ರೈ ಇಳಂತಾಜೆ, ಕೆಯ್ಯೂರು ಪಂಚಾಯತ್ ಸದಸ್ಯರಾದ ಬಟ್ಯಪ್ಪ ರೈ ದೇರ್ಲ, ಮಮತಾ ರೈ, ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರಹಾಸ ರೈ ಬೊಳಿಕಳ ಸಹಿತ ಅನೇಕ ಮಂದಿ ಭೇಟಿ ನೀಡಿ, ಸಂತಾಪ ಸೂಚಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.