ಮುಂಬರುವ ಜಿ.ಪಂ, ತಾ.ಪಂ  ಚುನಾವಣೆಯಲ್ಲಿ  ಬಿಜೆಪಿ ನೂರಕ್ಕೆ ನೂರು ಬಹುಮತ  – ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ರಾಷ್ಟ್ರೀಯ ವಿಚಾರಧಾರೆಯಲ್ಲಿ ಭಾರತೆ ಮಾತೆಗೆ ಅರ್ಚನೆ ಮಾಡುವ ಮೂಲಕ ವಿಚಾರಧಾರೆಗೆ ಒತ್ತು ಕೊಟ್ಟು ಈ ದೇಶದಲ್ಲಿ ಸರ್ವವ್ಯಾಪಿ, ಸರ್ವಸ್ಪರ್ಶಿ, ಸರ್ವ ಗ್ರಾಹಿಯಾಗಿ ಜನರ ಅಪೇಕ್ಷೆಗೆ ಸರಿಯಾಗಿ ಬಿಜೆಪಿ ಕಾರ್ಯಕ್ರಮ ಆಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಬೂತ್ ಮಟ್ಟದಲ್ಲಿ ೧ಸಾವಿರ ಕಾರ್ಯಕರ್ತರು ಸಿದ್ದಗೊಂಡಿದ್ದು, ಮುಂಬರುವ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಬಹುಮತ ಪಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಅ.೨೬ರಂದು ನಡೆದ ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಅವರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಮೀತ್ ಶಾ ನರೇಂದ್ರ ಮೋದಿಯವರು ರಾಷ್ಟ್ರದಲ್ಲಿ ಯಾವ ರೀತಿಯಲ್ಲಿ ನಾಯಕತ್ವ ಹೊಂದಿದ್ದಾರೋ ಅದೇ ರೀತಿ ಕಾರ್ಯಕರ್ತರು ಬೂತ್ ಮಟ್ಟದಿಂದ ಆಯ್ಕೆಯಾಗಬೇಕು. ಇದಕ್ಕಾಗಿ ಬಿಜೆಪಿ ತಮ್ಮೆಲ್ಲಾ ವ್ಯವಸ್ಥೆಯಲ್ಲಿ ಅಮೂಲಾಗ್ರವಾಗಿ ಬದಲಾವಣೆ ಮಾಡಿದೆ. ಬೂತ್‌ನಲ್ಲಿ ಇರುವ ವ್ಯವಸ್ಥೆ ರಾಷ್ಟ್ರಮಟ್ಟದಲ್ಲಿ ಇರಬೇಕು. ರಾಷ್ಟ್ರಮಟ್ಟದಲ್ಲಿರುವ ವ್ಯವಸ್ಥೆ ಬೂತ್ ಮಟ್ಟದಲ್ಲಿರಬೇಕು. ಅದಕ್ಕೆ ಬೂತ್ ಅಧ್ಯಕ್ಷರಿಗೆ ನಾಮಪಲಕ ಹಾಕುವುದು. ಕೇವಲ ಎಸಿಯಲ್ಲಿ ಕೂತು ಕೊಳ್ಳುವ ಅಧಿಕಾರಿಗಳು ಮಾತ್ರ ನೇಮ್‌ಪ್ಲೇಟ್ ಹಿಂದೆ ಕೂತುಕೊಳ್ಳುವುದಲ್ಲ ಎಂದ ಅವರು ಬೂತ್ ಅಧ್ಯಕ್ಷರು ಕೂಡಾ ನೇಮೆಪ್ಲೇಟ್ ಅಳವಡಿಸುವ ಕಾರ್ಯ ಕೇವಲ ಬಿಜೆಪಿಯಲ್ಲಿ ನಡೆಯುತ್ತದೆ ಇದು ಕಾಂಗ್ರೆಸ್‌ನಲ್ಲಿ ನಡೆಯಲು ಸಾಧ್ಯವಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಶೈಲಿ ಹಾಗೂ ಕೊರೋನಾ ವಿರುದ್ದದ ಸಮರದಲ್ಲಿ ಇಲ್ಲಿಯವರೆಗೆ 100 ಕೋಟಿ ಲಸಿಕೆ ವಿತರಣೆ, ದೇಶದಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣ ಇತ್ಯದಿ ಕಾರ್ಯಗಳು ಜನಮಾನಸದಲ್ಲಿ ಮೆಚ್ಚುಗೆ ಪಡೆದಿವೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತದ ಪರಿಣಾಮವು ಜನಮೆಚ್ಚುಗೆ ಗಳಿಸಿದೆ. ಆದರೆ ಕಾಂಗ್ರೆಸ್ ವಂಶಪಾರ್ಯ ಆಡಳಿತದಿಂದ ಎಷ್ಟೋ ಭ್ರಷ್ಟಚಾರ, ಭಯೋತ್ಪದಾನೆ, ನಕ್ಸಲ್, ಜಾತಿ ಒಡೆಯುವ ಕೆಲಸ ಮಾಡಿದ್ದಾರೆ. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಹತ್ತಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಂಡಾಗ ಕಾಂಗ್ರೆಸ್‌ನಿಂದ ಸಣ್ಣಪುಟ್ಟ ಅಪಪ್ರಚಾರ ಮಾಡುತ್ತಾರೆ. ಬಿಜೆಪಿಯಿಂದ ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳು, ಸಂಘಟನಾತ್ಮಕ ವಿಚಾರಗಳನ್ನು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್ ನೀರಿನಿಂದ ಹೊರ ತೆಗೆದ ಮೀನಿನಂತೆ ಒದ್ದಾಡುತ್ತಾರೆ. ಬಿಜೆಪಿಯಲ್ಲಿ ಬೂತ್ ಜಿತೇಗ ತೋ ದೇಶ್ ಜಿತೇಗ ಎಂಬ ಸಂದೇಶದಂತೆ ಬಿಜೆಪಿ ಬೂತ್ ಸಮಿತಿ ಕಾರ್ಯಕರ್ತರು ತಮ್ಮ ಕೆಲಸವನ್ನು ತೋರಿಸಿಕೊಟ್ಟಿದ್ದಾರೆ. ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಬಂಟ್ವಾಳ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಉಪಸ್ಥಿತರಿದ್ದರು. ಬಿಜೆಪಿ ಪುತ್ತೂರು ಮಂಡಲ ಉಪಾಧ್ಯಕ್ಷ ಅರುಣ್ ವಿಟ್ಲ ಸ್ವಾಗತಿಸಿ, ಉಷಾ ಮುಳಿಯ ಪ್ರಾರ್ಥಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.