ರಾಮಕುಂಜ ಗ್ರಾಮದ ಪೆರ್ಜಿಯಲ್ಲಿ ಜಿಲ್ಲಾ ಗೋಶಾಲೆಗೆ 98 ಎಕ್ರೆ ಜಾಗ ಮಂಜೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕೊಲ ಜಾನುವಾರು ಕೇಂದ್ರದಿಂದ ಪಶುಪಾಲನಾ ಇಲಾಖೆಗೆ ದಾಖಲೆ ಪತ್ರ ಹಸ್ತಾಂತರ
೦ ಕಟ್ಟಡ ಕಾಮಗಾರಿ ಶೀಘ್ರ ಆರಂಭ-ಡಾ. ಪ್ರಸನ್ನ ಕುಮಾರ್

ಉಪ್ಪಿನಂಗಡಿ: ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಒಂದು ಗೋಶಾಲೆ ಮಂಜೂರು ಆಗಿದ್ದು, ದ.ಕ. ಜಿಲ್ಲೆಗೆ ಮಂಜೂರು ಆಗಿರುವ ಗೋ ಶಾಲೆ ರಾಮಕುಂಜ ಗ್ರಾಮದ ಬರೆಂಪಾಡಿ ರಸ್ತೆಯಲ್ಲಿ, ಪೆರ್ಜಿ ಎಂಬಲ್ಲಿ ಆರಂಭ ಆಗಲಿದ್ದು, ಇದಕ್ಕಾಗಿ ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಅಧೀನದಲ್ಲಿದ್ದ 98.45 ಎಕ್ರೆ ಜಾಗ ಮಂಜೂರು ಆಗಿದ್ದು, ಇದರ ಹಸ್ತಾಂತರ ಕಾರ್‍ಯಕ್ರಮ ಅ. 26ರಂದು ಜರಗಿತು.


ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಅಧೀನದಲ್ಲಿದ್ದ ರಾಮಕುಂಜ ಗ್ರಾಮದ ಸರ್ವೆ ನಂಬ್ರ 233ರಲ್ಲಿ 85.20 ಎಕ್ರೆ ಮತ್ತು ಸರ್ವೆ ನಂಬ್ರ 299/1ರಲ್ಲಿ 1325 ಎಕ್ರೆ ಸೇರಿದಂತೆ ಒಟ್ಟು 98.45  ಎಕ್ರೆ ಜಾಗದಲ್ಲಿ ಸರ್ಕಾರದಿಂದ ಮಂಜೂರು ಆಗಿರುವ ಪ್ರಾಣಿ ದಯಾ ಸಂಘದ ಮೂಲಕ ಆರಂಭವಾಗಲಿರುವ ಜಿಲ್ಲಾ ಗೋಶಾಲೆ ನಿರ್ಮಿಸುವ ಸಲುವಾಗಿ ಈ ಜಾಗದ ದಾಖಲೆ ಪತ್ರವನ್ನು ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕರಾದ ಡಾ. ಧರ್ಮಪಾಲ ಕರಂದ್ಲಾಜೆಯವರು ದ.ಕ. ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಪ್ರಸನ್ನ ಕುಮಾರ್ ಟಿ.ಜಿ.ಯವರಿಗೆ ಹಸ್ತಾಂತರಿಸಿದರು.

ದಾಖಲೆ ಪತ್ರ ಸ್ವೀಕರಿಸಿದ ಡಾ. ಪ್ರಸನ್ನ ಕುಮಾರ್ ಟಿ.ಜಿ. ಮಾತನಾಡಿ ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ 24 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಆಗಿದ್ದು, ಪ್ರಾಣಿ ದಯಾ ಸಂಘದ ಮೂಲಕ ಶೀಘ್ರವಾಗಿ ಗೋಶಾಲೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ದಾಖಲೆ ಹಸ್ತಾಂತರ ಸಂದರ್ಭದಲ್ಲಿ ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಕಾರ್‍ಯದರ್ಶಿ ಪಮ್ಮು, ರಾಮಕುಂಜ ಗ್ರಾಮಕರಣಿಕ ಶೇಷಾದ್ರಿ, ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಡಾ. ಅಪರ್ಣಾ ಹೆಬ್ಬಾರ್, ಅಧೀಕ್ಷಕಿ ರೂಪಶ್ರೀ ಕೊಲ, ಜಾನುವಾರು ಅಭಿವೃದ್ಧಿ ಅಧಿಕಾರಿ ಕೃಷ್ಣ ಭಟ್, ಸಹಾಯಕ ದಿವಾಕರ
ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.