ಕಡಬ ಸಮುದಾಯ ಆಸ್ಪತ್ರೆಯಲ್ಲಿ ವಿಕಲಚೇತನರ ವೈದ್ಯಕೀಯ ಶಿಬಿರ ನಡೆಸಲು ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬ ತಾಲೂಕಿನ ೨೧ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲಚೇತನರಿಗೆ ನಡೆಯುವ ಪ್ರತಿ ತಿಂಗಳ ವಿಕಲಚೇತನರ ವೈದ್ಯಕೀಯ ಶಿಬಿರವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ನಡೆಸುವಂತೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರರವರಿಗೆ ಮನವಿ ಮಾಡಲಾಗಿದೆ.

ಅ.೨೭ರಂದು ಪೆರಾಬೆ ಗ್ರಾಮ ಪಂಚಾಯತ್‌ನಲ್ಲಿ ಕಂದಾಯ ಇಲಾಖೆಯ ವಿವಿಧ ಸವಲತ್ತು ವಿತರಣಾ ಸಮಾರಂಭ ಮತ್ತು ಅಕ್ರಮ ಸಕ್ರಮ ಸಮಿತಿ ಸಭೆಗೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ಕಡಬ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಅಕ್ಷತಾ ರಾಮಕುಂಜ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಪೆರಾಬೆ ಗ್ರಾ.ಪಂ.ನ ಮುತ್ತಪ್ಪ, ಬಿಳಿನೆಲೆ ಗ್ರಾ.ಪಂ.ನ ವಿಜಯಕುಮಾರ್, ಆಲಂಕಾರು ಗ್ರಾ.ಪಂ.ನ ಮೋನಪ್ಪ ಬಿ., ಕುಟ್ರುಪ್ಪಾಡಿ ಗ್ರಾ.ಪಂ.ನ ಚಂದ್ರಾವತಿ ಹಾಗೂ ಐತ್ತೂರು ಗ್ರಾ.ಪಂ.ನ ಸಂತೋಷ್‌ರವರು ಮನವಿ ಸಲ್ಲಿಸಿದ್ದಾರೆ. ಪುತ್ತೂರು ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ವಿಕಲ ಗುರುತಿಸುವ ಶಿಬಿರವನ್ನು ತಿಂಗಳಲ್ಲಿ ೨ ಅಥವಾ ೩ ಬಾರಿ ನಡೆಸುತ್ತಿದ್ದು ಕೊರೋನಾ ಮಹಾಮಾರಿಯಿಂದ ಕೇವಲ ೧೦ ರಿಂದ ೨೦ ಮಂದಿ ವಿಕಲಚೇತನರಿಗೆ ಮಾತ್ರ ಮೆಡಿಕಲ್ ಸರ್ಟಿಫಿಕೇಟ್ ನೀಡಲು ಸಾಧ್ಯವಾಗುತ್ತಿದೆ. ಪುತ್ತೂರು ಆರೋಗ್ಯ ಕೇಂದ್ರಕ್ಕೆ ವಿಕಲಚೇತನರನ್ನು ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವು ಸಂದರ್ಭದಲ್ಲಿ ವಿಕಲಚೇತನರನ್ನು ಶಿಬಿರಕ್ಕೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಗಳು ಇಲ್ಲದೇ ವಾಪಸ್ಸು ಬಂದಿರುವ ಸಂದರ್ಭಗಳು ಇವೆ. ೨೦೧೪ರ ಹಿಂದಿನ ಸಾಲಿನ ಹಳೆಯ ವಿಕಲಚೇತನರ ಗುರುತಿನ ಚೀಟಿ ನವೀಕರಣವೂ ಆಗಬೇಕಾಗಿದೆ. ಈ ಕಾರಣದಿಂದಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಶ್ವತವಾಗಿ ಕನಿಷ್ಠ ತಿಂಗಳಲ್ಲಿ ೨ ಬಾರಿ ವಿಕಲಚೇತನ ವೈದ್ಯಕೀಯ ಶಿಬಿರ ನಡೆಸುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸ್ವಯಂ ಉದ್ಯೋಗ ಘಟಕಕ್ಕೆ ಅನುದಾನಕ್ಕೆ ಮನವಿ:
ಆಲಂಕಾರು ಗ್ರಾಮದ ವಿಕಲಚೇತನರಾದ ಶರವೂರು ನಿವಾಸಿ ತೀರ್ಥ ಕುಮಾರಿಯವರಿಗೆ ಸ್ವಯಂ ಉದ್ಯೋಗ ಮಾಡಲು ಹಾಳೆ ತಟ್ಟೆ ತಯಾರಿಕಾ ಘಟಕಕ್ಕೆ ಅನುದಾನವನ್ನು ಒದಗಿಸುವಂತೆಯೂ ಸಚಿವರಿಗೆ ಈ ಸಂದರ್ಭದಲ್ಲಿ ಮನವಿ ಮಾಡಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.