ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ಅಸ್ತಿತ್ವಕ್ಕೆ ಬಂದ ತೆಂಗಿನ ಬೆಳೆ ಬೆಳೆಯುವ ರೈತರಿಗಾಗಿಯೇ ಹುಟ್ಟಿಕೊಂಡ ಮೊದಲ ಸಂಸ್ಥೆಯೊಂದು ಇದೀಗ ಮಹತ್ತರವಾದ ಒಂದು ಕಾರ್ಯ ಮಾಡಿದೆ. ತೆಂಗು ಬೆಳೆಯುವ ರೈತರಿಗೆ ಹಾಗೂ ತೆಂಗಿನಮರ ಹತ್ತಿ ತೆಂಗಿನಕಾಯಿ ಕೀಳುವ ಕಾರ್ಮಿಕ ವರ್ಗದವರಿಗೆ ವಿಶೇಷ ಯೋಜನೆ ರೂಪಿಸಿಕೊಂಡಿರುವ ಜಿಲ್ಲೆಯ ಮೊದಲ ಸಂಸ್ಥೆ ಇದಾಗಿದೆ.
ದ.ಕ. ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸಜಿಪನಡು ಗ್ರಾಮದ ಕೊಂಕಣ ತೋಟ ಎಂಬಲ್ಲಿಯ ಚಂದಪ್ಪ ಪೂಜಾರಿಯವರು ಸುಮಾರು 28 ವರ್ಷಗಳಿಂದ ತೆಂಗಿನಕಾಯಿ ಕೀಳುವ ಕೆಲಸ ಮಾಡಿಕೊಂಡಿದ್ದರು. ಸುಮಾರು 1 ತಿಂಗಳ ಹಿಂದೆ ತನ್ನ ಮನೆಯ ಪಕ್ಕದಲ್ಲಿ ಕಾಯಿ ಕೀಳುವ ಸಂದರ್ಭದಲ್ಲಿ ಆಯಾ ತಪ್ಪಿ ತೆಂಗಿನ ಮರದಿಂದ 30 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿ ಮಲಗಿದ ಸ್ಥಿತಿಯಲ್ಲಿರಬೇಕಾಯಿತು. ಇವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು ದ.ಕ.ಜಿಲ್ಲೆಯ ತೆಂಗು ರೈತ ಸಂಸ್ಥೆಯ ಸಿಬಂದಿಗಳು ಮನೆಗೆ ಭೇಟಿ ನೀಡಿ ಮನೆಯ ಪರಿಸ್ಥಿತಿಯನ್ನು ಸಂಸ್ಥೆಗೆ ತಿಳಿಸಿದರು. ಇದನ್ನು ಮನಗಂಡ ಸಂಸ್ಥೆಯ ಆಡಳಿತ ಮಂಡಳಿ ಮನೆಗೆ ಭೇಟಿ ಕೊಟ್ಟು ತುರ್ತು ಚಿಕಿತ್ಸೆಗಾಗಿ ರೂ.10,000ದ ಚೆಕ್ನ್ನು ನೀಡಿದೆ ಹಾಗೂ ಈ ಬಡ ಕುಟುಂಬದ ಮಕ್ಕಳಿಗೆ ಸಂಸ್ಥೆಯಲ್ಲಿ ಉದ್ಯೋಗ ನೀಡುವ ಭರವಸೆಯನ್ನೂ ನೀಡಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಬಡ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಚಿಕಿತ್ಸಾ ವೆಚ್ಚ ಬರಿಸಲು ದಾನಿಗಳು ಸಹಕರಿಸಬಹುದು.
ಬ್ಯಾಂಕ್ ಖಾತೆಗಳ ವಿವರ
ಚಂದಪ್ಪ
ಮೊಬೈಲ್ :8970164454, 8217632215
ಕೆನರಾ ಬ್ಯಾಂಕ್ ಬೋಳಿಯಾರ್
ಖಾತೆ ಸಂಖ್ಯೆ-88021080000117
IFSC CODE -CNRB0008802