ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ: ಕುದ್ಕಾಡಿ ನಾರಾಯಣ ರೈಯವರಿಗೆ 2 ದಿನ ಪೊಲೀಸ್ ಕಸ್ಟಡಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಡಗನ್ನೂರಿನಲ್ಲಿ ತೋಟದ ಕೆಲಸಕ್ಕೆ ಬರುತ್ತಿದ್ದ ಅಪ್ರಾಪ್ತ ದಲಿತ ಬಾಲಕಿಯನ್ನು ಅತ್ಯಾಚಾರ ನಡೆಸಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣರಾದ ಆರೋಪ ಎದುರಿಸುತ್ತಿರುವ ಕುದ್ಕಾಡಿ ನಾರಾಯಣ ರೈಯವರನ್ನು ವಿಚಾರಣೆಗಾಗಿ ಪುತ್ತೂರು ಸೆಷೆನ್ಸ್ ನ್ಯಾಯಾಲಯ ಎರಡು ದಿನ ಪೊಲೀಸರ ವಶಕ್ಕೆ‌ ಒಪ್ಪಿಸಿ ಆದೇಶಿಸಿದೆ.

ದಲಿತ ಬಾಲಕಿಯ ಅತ್ಯಾಚಾರ ನಡೆಸಿ ಆಕೆ ಮಗುವಿಗೆ ಜನ್ಮ ನೀಡಿದ ಬಳಿಕ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ನಾರಾಯಣ ರೈ ಕುದ್ಕಾಡಿರವರು ನಿರೀಕ್ಷಣಾ ಜಾಮೀನು‌ ಕೋರಿ ಸಲ್ಲಿಸಿದ್ದ ಅರ್ಜಿ ಪುತ್ತೂರು ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಹೈಕೋರ್ಟಿನಲ್ಲಿ ಅವರು ಖ್ಯಾತ ವಕೀಲರೋರ್ವರ ಮೂಲಕ ನಿರೀಕ್ಷಣಾ ಜಾಮೀನು‌ ಪಡೆಯಲು ಪ್ರಯತ್ನಿಸುತ್ತಿದ್ದರು.‌ ಈ ಮಧ್ಯೆ ಅವರ ಬಂಧನಕ್ಕಾಗಿ ಪೊಲೀಸರು ಬಲೆ‌ ಬೀಸಿದ್ದರು. ಅಲ್ಲದೆ, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ನಾರಾಯಣ ರೈಯವರನ್ನು ಬಂಧಿಸಲು ಆಗ್ರಹಿಸಿತ್ತು. ಈ ಬೆಳವಣಿಗೆಗಳ ನಡುವೆ ಅ.27ರಂದು ನಾರಾಯಣ ರೈಯವರು ಪುತ್ತೂರಿನ ಸೆಷೆನ್ಸ್ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ವಕೀಲರ ಮೂಲಕ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದರು.‌ ಈ ಬಗ್ಗೆ ಮಾಹಿತಿ ಅರಿತ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಿ ವಿಶೇಷ ಸರಕಾರಿ ಅಭಿಯೋಜಕರ ಮೂಲಕ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ವಿಚಾರಣೆಗಾಗಿ ಆರೋಪಿ ನಾರಾಯಣ ರೈಯವರನ್ನು ಎರಡು ದಿನ‌ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಪ್ರಾಸಿಕ್ಯೂಷನ್‌ ಪರ ವಾದ ಪುರಸ್ಕರಿಸಿದ ನ್ಯಾಯಾಧೀಶರು ನಾರಾಯಣ ರೈಯವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.‌ ಇದೇ ಪ್ರಕರಣದಲ್ಲಿ ಈಗಾಗಲೇ ಈರ್ವರು ಬಂಧಿಸಲ್ಪಟ್ಟಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.