ಕಲ್ಲುಗುಡ್ಡೆ: ಬಿಜೆಪಿ ವತಿಯಿಂದ ಕೊರೊನಾ ವಾರಿಯರ್ಸ್‌ಗಳಿಗೆ ಅಭಿನಂದನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹಲವಾರು ಸವಾಲುಗಳ ಮಧ್ಯೆ ಕ್ರಾಂತಿಕಾರಿ ಬದಲಾವಣೆ; ಕೃಷ್ಣ ಶೆಟ್ಟಿ

ಕಡಬ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಇಡೀ ವ್ಯವಸ್ಥೆಯ ಸಹಕಾರದಿಂದ ಕೊರೊನಾ ಮಹಾಮಾರಿ ನಿಯಂತ್ರಣ ಸಾಧ್ಯವಾಗಿದೆ. ಹಲವು ಸವಾಲುಗಳ ಮಧ್ಯೆ ಇಂದು ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಾಗೂ ಇತರೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದ್ದು, ಕೊರೊನಾ ಮಹಾಮಾರಿ ಆರೋಗ್ಯದ ಬಗ್ಗೆ ಒತ್ತು ಕೊಡಲು ಒಂದು ಪರಿಣಾಮಕಾರಿ ಕಾರಣವಾಗಿದೆ ಎಂದು ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಹೇಳಿದರು.

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ, ನೆಲ್ಯಾಡಿ ಮಹಾಶಕ್ತಿ ಕೇಂದ್ರ ಹಾಗೂ ನೂಜಿಬಾಳ್ತಿಲ ಮತ್ತು ರೆಂಜಿಲಾಡಿ ಶಕ್ತಿ ಕೇಂದ್ರದ ವತಿಯಿಂದ ನೂರು ಕೋಟಿ ಡೋಸ್ ಲಸಿಕೆ ವಿತರಣೆ ಸಾಧನೆ ಪ್ರಯುಕ್ತ ಕಲ್ಲುಗುಡ್ಡೆ ಜೆಜೆ ಅಡಿಟೋರಿಯಂನಲ್ಲಿ ಬುಧವಾರ ನಡೆದ ಕೊರೊನಾ ವಾರಿಯರ್ಸ್‌ಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆಯೇ ಆರೋಗ್ಯ ಕ್ಷೇತ್ರಕ್ಕೆ ಒತ್ತು ಕೊಡಬೇಕಾದ ಅನಿವಾರ್ಯತೆ ಇದ್ದರೂ ಸಾಧ್ಯವಾಗಿರಲಿಲ್ಲ. ಆದರೆ ಮಾರಕ ಕೊರೊನಾ ಸೋಂಕು ಜನತೆಗೆ ಆರೋಗ್ಯದ ಬಗ್ಗೆ ಜಾಗೃತಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ನೇರ ಕಾರಣವಾಗಿದೆ. ಆರೋಗ್ಯ ಕಾರ್ಯಕರ್ತರು, ಕೊರೊನಾ ವಾರಿಯರ್‌ಗಳಿಂದ ಲಸಿಕೆ ವಿತರಣೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಅಭಿನಂದನೆ;
ಕೊರೊನಾ ವಾರಿಯರ್ಸ್‌ಗಳಾದ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್, ಆರೋಗ್ಯ ಕಾರ್ಯಕರ್ತರಾದ ದಯಾಕಿರಣ್, ಸೌಮ್ಯಲತಾ, ಮಧುರಾ, ಆಶಾ ಕಾರ್ಯಕರ್ತೆಯರಾದ ಮರಿಯಮ್ಮ, ಜಯಂತಿ, ಸುಧಾ, ವಿನೋದಾ, ಲೀಲಾವತಿ, ಅಂಗನವಾಡಿ ಕಾರ್ಯಕರ್ತೆಯರಾದ ಅಮೀನಾ, ವಾರಿಜ, ಸುಮಿತ್ರಾ, ಎಲಿಯಮ್ಮ, ರಾಜೀವಿ, ಪ್ರಫುಲ್ಲ, ಹೇಮಲತಾ ಗ್ರಾ.ಪಂ. ಪಿಡಿಒ ಆನಂದ ಎ., ಕಾರ್‍ಯದರ್ಶಿ ಗುರುವ ಎಸ್., ಸಿಬ್ಬಂದಿಗಳಾದ ಗಿರಿಜಾ, ವಿಶಾಲಾಕ್ಷಿ, ಪ್ರವೀಣಿ, ಅಬ್ದುಲ್ ರಫೀಕ್, ಧನರಾಜ್, ಕುಶಲ, ಸಜಿತ್ ಪಿ.ವಿ., ಭರತ್ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭಾಸ್ಕರ ಇಚ್ಲಂಪಾಡಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ, ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಇಮಾನ್ಯುವೆಲ್ ಪಿ.ಜೆ., ಪಿಡಿಒ ಆನಂದ ಎ., ಶಕ್ತಿಕೇಂದ್ರದ ಅಧ್ಯಕ್ಷ ಚಂದ್ರಶೇಖರ ಗೌಡ ಹಳೆನೂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಂತ್ ಬರೆಮೇಲು ಸ್ವಾಗತಿಸಿದರು. ಗ್ರಾ.ಪಂ. ಸದಸ್ಯೆ ವಿನಯ ಕುಮಾರಿ ಬಳಕ್ಕ ವಂದಿಸಿದರು. ಕಿಟ್ಟು ಕಲ್ಲುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.