ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 362.54 ಕೋಟಿ ರೂ.,ವ್ಯವಹಾರ;1.07 ಕೋಟಿ ರೂ.ನಿವ್ವಳ ಲಾಭ – ಶೇ.9 ಡಿವಿಡೆಂಡ್ ಘೋಷಣೆ

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಅ.೨೭ರಂದು ಬೆಳಿಗ್ಗೆ ಸಂಘದ ಪ್ರಧಾನ ಕಚೇರಿಯ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಯಸ್.ಉಮೇಶ್ ಶೆಟ್ಟಿಯವರು ಮಾತನಾಡಿ, ೨೦೨೦-೨೧ನೇ ಸಾಲಿನಲ್ಲಿ ಸಂಘವು ೩೬೨,೫೪,೩೬,೧೮೩ ರೂ., ವ್ಯವಹಾರ ಮಾಡಿದ್ದು ೧,೦೭,೧೨,೦೫೨ ರೂ.,ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರ ಬೇಡಿಕೆಯಂತೆ ಲಾಭಾಂಶದಲ್ಲಿ ಶೇ.೯ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು. ವರ್ಷಾಂತ್ಯದಲ್ಲಿ ಸಂಘವು ೨೩.೫ ಕೋಟಿ ರೂ.ಠೇವಣಿ ಹೊಂದಿದ್ದು ೫೮.೧೦ ಕೋಟಿ ರೂ. ಹೊರಬಾಕಿ ಸಾಲ ಇದೆ. ಶೇ.೯೯.೧೪ಕ್ಕೂ ಮೇಲ್ಪಟ್ಟು ಸಾಲ ವಸೂಲಾತಿಯಾಗಿದೆ. ಪಡಿತರ ಸಾಮಾಗ್ರಿ, ರಾಸಾಯನಿಕ ಗೊಬ್ಬರ ವಿತರಿಸಲಾಗುತ್ತಿದೆ. ಸಂಘದ ಸಹಭಾಗಿತ್ವದಲ್ಲಿ ಕ್ಯಾಂಪ್ಕೋ ಸಂಸ್ಥೆಯಿಂದ ಅಡಿಕೆ, ಕೊಕ್ಕೋ ಖರೀದಿ ವ್ಯವಸ್ಥೆ ಮಾಡಲಾಗಿದೆ ಎಂದು ಉಮೇಶ್ ಶೆಟ್ಟಿ ಹೇಳಿದರು. ಸಂಘದ ಕೇಂದ್ರ ಕಚೇರಿ ಮತ್ತು ಗೋಳಿತ್ತೊಟ್ಟು ಶಾಖೆಯು ಸ್ವಂತ ಕಟ್ಟಡ ಹೊಂದಿದ್ದು ಶಿರಾಡಿ ಶಾಖೆಯು ಬಾಡಿಗೆ ಕಟ್ಟಡದಲ್ಲಿ ವ್ಯವಹಾರ ಮಾಡುತ್ತಿದೆ. ಸ್ವಂತ ನಿವೇಶನ ದೊರೆತಲ್ಲಿ ಶಿರಾಡಿ ಶಾಖೆಗೆ ಸ್ವಂತ ಕಟ್ಟಡ ಮಾಡುವ ಯೋಜನೆಯು ಇದೆ. ಸಂಘದ ಕೇಂದ್ರ ಕಚೇರಿಯ ಕಟ್ಟಡದಲ್ಲಿ ೨ ಸಭಾಭವನ ಇದ್ದು ಸಂಘದ ಸದಸ್ಯರಿಗೆ ಮಿತದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಸಂಘದ ಉತ್ತಮ ವ್ಯವಹಾರವನ್ನು ಪರಿಗಣಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸತತ ೨ ವರ್ಷಗಳಿಂದ ವಿಶೇಷ ಪ್ರೋತ್ಸಾಹ ಪ್ರಶಸ್ತಿ ನೀಡಿ ಗೌರವಿಸಿದೆ. ಕಳೆದ ಸಾಲಿನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಸಂಘಕ್ಕೆ ಜಿಲ್ಲೆಯಲ್ಲಿಯೇ ಉತ್ತಮ ಕೃಷಿ ಪತ್ತಿನ ಸಹಕಾರಿ ಸಂಘ ಎಂಬ ಪ್ರಶಸ್ತಿಯನ್ನು ಸಹಕಾರ ಇಲಾಖೆಯು ನೀಡಿ ಗೌರವಿಸಿದೆ. ಕಳೆದ ೨೭ವರ್ಷಗಳಿಂದ ನಿರಂತರವಾಗಿ ಅಧ್ಯಕ್ಷನಾಗಿ ಸದಸ್ಯರ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಉಮೇಶ್ ಶೆಟ್ಟಿ ಹೇಳಿದರು.

ಸಾಲಮನ್ನಾ ಬಾಕಿ:
ರಾಜ್ಯ ಸರಕಾರ ಘೋಷಣೆ ಮಾಡಿದ್ದ ೧ ಲಕ್ಷ ರೂ.ಸಾಲಮನ್ನಾ ಯೋಜನೆಯಲ್ಲಿ ೭೭ ಸದಸ್ಯರಿಗೆ ಸಾಲಮನ್ನಾ ಮೊತ್ತ ಬರಲು ಬಾಕಿ ಇದೆ. ಈ ಬಗ್ಗೆ ಸರಕಾರಕ್ಕೆ ದಾಖಲೆ ಸಲ್ಲಿಸಲಾಗಿದ್ದು ಸಾಲಮನ್ನಾ ಮೊತ್ತ ಬಿಡುಗಡೆಗೊಳಿಸುತ್ತೇವೆ ಎಂಬ ಭರವಸೆ ಸಿಕ್ಕಿದೆ ಎಂದು ಸದಸ್ಯರ ಪ್ರಶ್ನೆಗೆ ಅಧ್ಯಕ್ಷ ಉಮೇಶ್ ಶೆಟ್ಟಿ ಉತ್ತರಿಸಿದರು.

ಗ್ರಾ.ಪಂ.ಗೊಂದು ಸಹಕಾರಿ ಸಂಸ್ಥೆಗೆ ವಿರೋಧ:
ಗ್ರಾಮ ಪಂಚಾಯತ್‌ಗೊಂದು ಸಹಕಾರಿ ಸಂಸ್ಥೆ ಆರಂಭಿಸುವ ಕುರಿತು ಸರಕಾರ ಇತ್ತೀಚೆಗೆ ಹೇಳಿಕೆ ನೀಡಿದೆ. ಆದರೆ ಇದು ಕಾರ್ಯಸಾಧುವಲ್ಲ, ಇದರಿಂದ ಸಹಕಾರಿ ಸಂಸ್ಥೆಗಳು ನಷ್ಟ ಅನುಭವಿಸಬೇಕಾಗುತ್ತದೆ. ಇದಕ್ಕೆ ವಿರೋಧ ಸೂಚಿಸಿ ನಿರ್ಣಯ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಮಳೆಯಿಂದಾಗಿ ಅಡಿಕೆ ಬೆಳೆಹಾನಿ, ಆನೆ ದಾಳಿಯಿಂದ ಕೃಷಿ ಹಾನಿಗೊಂಡಲ್ಲಿ ಪರಿಹಾರ ನೀಡಬೇಕೆಂದು ಸದಸ್ಯರು ಒತ್ತಾಯಿಸಿದರು.

ಬೇಡಿಕೆಗಳು:
ಸೇಫ್‌ಲಾಕರ್, ಸಭಾಭವನದ ಪಕ್ಕದಲ್ಲಿ ಸುಸಜ್ಜಿತ ಪಾಕಶಾಲೆ, ಗೋಳಿತ್ತೊಟ್ಟು ಶಾಖೆಯಲ್ಲಿ ಆರ್‌ಟಿಜಿಎಸ್, ನೆಫ್ಟ್ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಿಗುವ ಸೌಲಭ್ಯಗಳ ವ್ಯವಸ್ಥೆ, ಚಿನ್ನ ಅಡಮಾನ ಸಾಲದ ಮೊತ್ತ ಏರಿಕೆ, ಕೃಷಿ ಯಂತ್ರೋಪಕರಣ ಮಾರಾಟ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸದಸ್ಯರು ಸಭೆಯಲ್ಲಿ ಮಂಡಿಸಿದರು. ಸಂಘದ ಸದಸ್ಯರಾದ ದಿನೇಶ್‌ಕುಮಾರ್, ಅಗ್ರಾಳ ನಾರಾಯಣ ರೈ, ಜಯಪ್ರಕಾಶ್ ನೆಕ್ರಾಜೆ, ಚಂದ್ರಶೇಖರ ಭಟ್ ಮಾಪಳ, ಕುಶಾಲಪ್ಪ ಗೌಡ ಅನಿಲ, ಜಾರ್ಜ್‌ಕುಟ್ಟಿ ಉಪದೇಶಿ, ಶಿವಪ್ರಸಾದ್ ನೆಕ್ರಾಜೆ, ಎನ್.ವಿ.ವ್ಯಾಸ, ಜನಾರ್ದನ ಬಾಣಜಾಲು, ಜಯರಾಮ ಬಾಣಜಾಲು, ನಾಸೀರ್ ಸಮರಗುಂಡಿ, ಎಂ.ಆರ್.ಎಡಪಡಿತ್ತಾಯ, ಗಿರೀಶ್ ಸಾಲಿಯಾನ್ ಬದನೆ, ಜೋಸೆಫ್ ಗೋಳಿತ್ತೊಟ್ಟು, ರಾಮಚಂದ್ರ ಪುಚ್ಚೇರಿ ಮತ್ತಿತರ ಸದಸ್ಯರು ವಿವಿಧ ಪ್ರಶ್ನೆ ಕೇಳಿದರು.

ಉಪಾಧ್ಯಕ್ಷ ಕಮಲಾಕ್ಷ ಗೌಡ, ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ಪ್ರಶಾಂತ್ ರೈ ಅರಂತಬೈಲು, ಸುದರ್ಶನ್, ಉಷಾ ಅಂಚನ್, ಸುಲೋಚನಾ ಡಿ., ಅಣ್ಣು ಬಿ., ಸುಮಿತ್ರಾ, ಗುರುರಾಜ ಭಟ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ವಸಂತ ಯಸ್.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮೇಶ್ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈ ವರದಿ, ಆಯ-ವ್ಯಯಪಟ್ಟಿ ಮಂಡಿಸಿದರು. ಜಯಾನಂದ ಬಂಟ್ರಿಯಾಲ್ ನಿರೂಪಿಸಿದರು. ಸುಲೋಚನಾ ಡಿ.,ಪ್ರಾರ್ಥಿಸಿದರು. ಮೇನೇಜರ್‌ಗಳಾದ ಪಿ.ಜೆ.ಸೆಬಾಸ್ಟಿನ್, ಪಿ.ರತ್ನಾಕರ, ರಮೇಶ ನಾಯ್ಕ್, ಗುಮಾಸ್ತರಾದ ಯಂ.ಟಿ.ಮಹೇಶ, ಅನಿಶ್ ಕೆ.ಜೆ., ಸಂದೀಪ್‌ಕುಮಾರ್, ಅಶೋಕ ಎಸ್., ಮುಕುಂದ ಪ್ರಸಾದ್ ಎಸ್., ರೋಶನ್‌ಕುಮಾರ್ ಬಿ.ಜೆ.,ಜವಾನರಾದ ಕೆ.ಪದ್ಮಶೆಟ್ಟಿ, ಪಿ.ನಾಗೇಶ, ತಾರಾನಾಥ, ಪ್ರಮೋದ್, ಪಿಗ್ಮಿ ಸಂಗ್ರಾಹಕ ಕೆ.ರಘುನಾಥರವರು ಸಹಕರಿಸಿದರು.

ಶುದ್ಧ ಕುಡಿಯುವ ನೀರಿನ ಫಿಲ್ಟರ್ ವಿತರಣೆ:
ಸಂಘದ ವತಿಯಿಂದ ಮೂರು ಸರಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್ ವಿತರಣೆ ಮಾಡಲಾಯಿತು. ಸರಕಾರಿ ಹಿ.ಪ್ರಾ.ಶಾಲೆ ಪಡುಬೆಟ್ಟು, ಸರಕಾರಿ ಪ್ರೌಢಶಾಲೆ ಕೊಣಾಲು ಹಾಗೂ ಸರಕಾರಿ ಉ.ಹಿ.ಪ್ರಾ.ಶಾಲೆ ಗೋಳಿತ್ತೊಟ್ಟುಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್ ವಿತರಣೆ ಮಾಡಲಾಯಿತು. ಶಾಲಾ ಎಸ್‌ಡಿಎಂಸಿಯವರು ಕೊಡುಗೆ ಸ್ವೀಕರಿಸಿದರು. ಮಧ್ಯಾಹ್ನ ಸಂಘದ ವತಿಯಿಂದ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.