ನ.1: ಬಂಟರ ಭವನದಲ್ಲಿ ತುಳುನಾಡ ಐಸಿರ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಒಡಿಯೂರು ಶ್ರೀ ಷಷ್ಟ್ಯಬ್ಧ ಸಮಿತಿ ಪುತ್ತೂರು ತಾಲೂಕು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಹಯೋಗದೊಂದಿಗೆ ನ.೧ ರಂದು ತುಳುನಾಡ ಐಸಿರ ಕಾರ್ಯಕ್ರಮ ದಿನಪೂರ್ತಿ ವಿಶಿಷ್ಟ ಕಲ್ಪನೆಯೊಂದಿಗೆ ನಡೆಯುತ್ತಿದೆ.ಪುತ್ತೂರು ತಾಲೂಕಿನಲ್ಲಿ ಒಡಿಯೂರು ಷಷ್ಟ್ಯಬ್ಧ ಸಮಿತಿ ಅಧ್ಯಕ್ಷರಾದ ಸವಣೂರು ಸೀತರಾಮ.ರೈಗಳ ನೇತೃತ್ವದಲ್ಲಿ ೫೯ ಕಾರ್ಯಕ್ರಮಗಳು ನಡೆದಿವೆ.೬೦ನೇ ಕಾರ್ಯಕ್ರಮ ತುಳುವೆರೆ ಕೂಡುಕಟ್ಟ್ ತುಳುನಾಡ ಐಸಿರ-೨೦೨೧ ಹೆಸರಿನೊಂದಿಗೆ ಬಂಟರ ಭವನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಒಡಿಯೂರು ಷಷ್ಟ್ಯಬ್ಧ ಸಂಭ್ರಮ ಸಮಿತಿಯ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್.ರೈ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅವರು ನ.೧ ರಂದು ಬಂಟರ ಭವನದಲ್ಲಿನಡೆಯಲಿರುವ ತುಳುನಾಡ ಐಸಿರ-೨೦೨೧ ಕಾರ್ಯಕ್ರಮದ ಕುರಿತಾಗಿ ಅ.೨೭ರಂದು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಗ್ಗೆ ೮ ಗಂಟೆಗೆ ಭಜನಾಮೃತ ಕಾರ್ಯಕ್ರಮ ನಡೆಯಲಿದ್ದು ಬಳಿಕ ರಾಣಿ ಅಬ್ಬಕ್ಕ ಮುಖ್ಯದ್ವಾರದ ಉದ್ಘಾಟನೆಯನ್ನು ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ನಡೆಸಲಿದ್ದಾರೆ.ರಾಷ್ಟ್ರದ ಧ್ವಜವನ್ನು ಪುತ್ತೂರು ನಗರ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ,ಕನ್ನಡದ ಧ್ವಜವನ್ನು ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಐತ್ತಪ್ಪ ನಾಯ್ಕ್,ತುಳು ಧ್ವಜವನ್ನು ನಗರಸಭಾಧ್ಯಕ್ಷ ಜೀವಂಧರ್ ಜೈನ್ ಧ್ವಜಾರೋಹಣ ಮಾಡಲಿದ್ದಾರೆ,ಮಹತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಗುರುದೇವದತ್ತ ಸಂಸ್ಥಾನಮ್ ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ತುಳುನಾಡ ಐಸಿರ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಲಿದ್ದಾರೆ.ಕಾರ್ಯಕ್ರಮದಲ್ಲಿ ಪುತ್ತೂರು ಎಪಿಯಂಸಿ ಅಧ್ಯಕ್ಷ ದಿನೇಶ್ ಮೆದು,ದಯಾನಂದ.ರೈ ಮನವಳಿಕೆ,ಬೂಡಿಯಾರ್ ರಾಧಾಕೃಷ್ಣ.ರೈ,ಆನಂದ.ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಬಳಿಕ ತುಳು ಪದರಂಗಿತ ನಲಿಕೆ-ತೆಲಿಕೆ ವಿಶೇಷ ಕಾರ್ಯಕ್ರಮ ನಡೆಯಲಿದೆ.ನಂತರ ‘ತುಳುನಾಡ್‌ಟ್ ತುಳು-ಕನ್ನಡ ಅಪ್ಪೆ ¨ಭಾಷೆದ ಪೊರ್ಲು ತಿರ್ಲ್ ಎಂಬ ವಿಷಯದ ಕುರಿತು ಚಾವಡಿ ಚರ್ಚೆ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜಿನ ನೀವೃತ್ತ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಉಪಸ್ಥಿತರಿರಲಿದ್ದು,ರಾಣಿ ಅಬ್ಬಕ್ಕ ತುಳು ಸಂಚಯನ ಕೇಂದ್ರ ಬಂಟ್ವಾಳ ಇಲ್ಲಿನ ಡಾ.ತುಕಾರಾಮ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿರ್ದೇಶಕ ಡಾ.ರಾಜೇಶ್.ರೈ ಬೆಜ್ಜಂಗಳ ಸಮನ್ವಯಕಾರರಾಗಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.ಡಾ.ಸುಂದರ ಕೇನಾಜೆ,ಡಾ.ವಿಶ್ವನಾಥ ಬದಿಕಾನ.ಬಿ.ವಿ ಸೂರ್ಯನಾರಾಯಣ,ಯದುಪತಿ ಗೌಡ ಚಾವಡಿ ಚರ್ಚೆಯಲ್ಲಿ ಭಾಗವಿಸಲಿದ್ದಾರೆ.ಮಧ್ಯಾಹ್ನ ಗುರುವಂದನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಷಷ್ಟ್ಯಬ್ಧ ಸಂಭ್ರಮ ಸಮಿತಿ ಅಧ್ಯಕ್ಷ ಸವಣೂರು ಸೀತರಾಮ.ರೈ ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ.ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್,ಸಂತ ಫಿಲೋಮಿನಾ ಕಾಲೇಜಿನ ಫಾ/ಪ್ರಕಾಶ್ ಮೊಂತೇರೊ,ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ,ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೇ.ವಿಜಯ್ ಹಾರ್ವಿನ್,ಒಡಿಯೂರು ಷಷ್ಟ್ಯಬ್ಧ ಸಂಭ್ರಮದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿಲರಿದ್ದಾರೆ.ಸಹಭೋಜನದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಒಡಿಯೂರು ಷಷ್ಟ್ಯಬ್ಧ ಸಂಭ್ರಮ ಸಮಿತಿಯ ಪ್ರಚಾರ ಸಮಿತಿ ಸಂಚಾಲಕರಾದ ರಾಜೇಶ್ ಬನ್ನೂರು ಮಾತನಾಡಿ ಒಡಿಯೂರು ಶ್ರೀ ಷಷ್ಟ್ಯಬ್ಧ ಸಮಿತಿ ಪುತ್ತೂರು ತಾಲೂಕು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಹಯೋಗದೊಂದಿಗೆ ತುಳುವೆರೆ ಕೂಡು ಕಟ್ಟ್ ತುಳುನಾಡ ಐಸಿರ-೨೦೨೧ ನ.೧ರಂದು ಬಂಟರ ಭವನದಲ್ಲಿ ನಡೆಯಲಿದೆ.ಕರ್ನಾಟಕ ರಾಜ್ಯೋತ್ಸವದ ದಿನ ತುಳು ತಾಯಿಯ ಮಡಿಲಿನಲ್ಲಿ ಕನ್ನಡದ ಆರಾಧನೆಯ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಒಡಿಯೂರು ಷಷ್ಟ್ಯಬ್ಧ ಸಂಭ್ರಮ ಸಮಿತಿ ಪದಾಧಿಕಾರಿಗಳಾದ ಹರಿಣಾಕ್ಷಿ.ಜೆ ಶೆಟ್ಟಿ,ಪುತ್ತೂರು ತುಳು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಭಂಡಾರಿ,ನ್ಯಾಯವಾದಿ ರಾಜೇಶ್ವರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.