ಪುತ್ತೂರು ಕಾಲೇಜಿನಲ್ಲಿ ನಡೆದಿರುವ ಕಿರುಕುಳ ಪ್ರಕರಣ ಷಡ್ಯಂತ್ರವಾಗಿದ್ದಲ್ಲಿ ಖಂಡನೆ: ಎನ್‌ಎಸ್‌ಯುಐ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆದಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣವು ಯಾವುದೋ ವ್ಯಕ್ತಿಯ ವಿರುದ್ಧಧ ಷಡ್ಯಂತ್ರದ ಭಾಗವಾಗಿದ್ದಲ್ಲಿ ಅಥವಾ ಶಿಕ್ಷಕರ ಮಾನಹರಣ ಮಾಡುವ ಉದ್ದೇಶದಿಂದ ನಡೆದಿದ್ದು ಆಗಿದ್ದಲ್ಲಿ ಇದನ್ನು ಎನ್‌ಎಸ್‌ಯುಐ ಖಂಡಿಸುತ್ತದೆ ಎಂದು ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾತೀಶ್ ಅಳಕೆಮಜಲು ಹೇಳಿದ್ದಾರೆ.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಬಳಸಿಕೊಂಡು ಯಾವುದೇ ಚಾರಿತ್ರ್ಯದಲ್ಲಿ ಕಳಂಕ ಹೊಂದಿರದ ಶಿಕ್ಷಕನ ಮಾನಹರಣ ಮಾಡುವುದು ಅತ್ಯಂತ ಖಂಡನೀಯ. ಒಂದು ವೇಳೆ ಶಿಕ್ಷಕರು ತಪ್ಪು ಮಾಡಿದ್ದೇ ಆದಲ್ಲಿ ಅವರಿಗೆ ಶಿಕ್ಷೆ ಆಗಲೇಬೇಕು. ಇದನ್ನು ಎನ್‌ಎಸ್‌ಯುಐ ಖಂಡಿಸುತ್ತದೆ. ಮುಂದಕ್ಕೆ ಯಾರಾದರೂ ವಿದ್ಯಾರ್ಥಿನಿ ಅಥವಾ ಯುವತಿ ಅನಾರೋಗ್ಯದ ಸಮಸ್ಯೆಯಿಂದ ರಸ್ತೆ ಬದಿಯಲ್ಲಿ ಏನಾದರೂ ಬಿದ್ದರೆ, ಅವರನ್ನು ಯಾವ ಧೈರ್ಯದಲ್ಲಿ ಓರ್ವ ವಿದ್ಯಾರ್ಥಿ ಅಥವಾ ಯುವಕ ಮುಟ್ಟಬಹುದು? ಇಲ್ಲಿ ಪೊಕ್ಸೊ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಕಾಣುತ್ತಿದೆ. ಒಂದು ವೇಳೆ ವಿದ್ಯಾರ್ಥಿನಿಗೆ ಕಿರುಕುಳ ಆಗಿದ್ದೇ ಆದಲ್ಲಿ ಇಡೀ ವಿದ್ಯಾರ್ಥಿ ಸಮುದಾಯ ಆಕೆಯ ಜೊತೆಗಿರುತ್ತದೆ. ಪೊಲೀಸ್ ಇಲಾಖೆ ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ವಿದ್ಯಾರ್ಥಿನಿಗೆ ನ್ಯಾಯವನ್ನು ಒದಗಿಸಬೇಕು. ಅಥವಾ ಇದೊಂದು ಷಡ್ಯಂತ್ರವಾಗಿದ್ದರೆ ಯಾರೆಲ್ಲಾ ಅದರಲ್ಲಿ ಭಾಗಿಯಾಗಿದ್ದಾರೋ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಎನ್‌ಎಸ್‌ಯುಐ ದ.ಕ. ಜಿಲ್ಲಾ ಕಾರ್ಯದರ್ಶಿ ಲ್ಯಾಸ್ಟರ್ ಪಿಂಟೋ ಮಾತನಾಡಿ, ವಿದ್ಯಾರ್ಥಿನಿಗೆ ಅನ್ಯಾಯವಾಗಿದ್ದಲ್ಲಿ ಆಕೆಗೆ ನ್ಯಾಯ ಒದಗಿಸಬೇಕು. ಶಿಕ್ಷಕರು ನಿರಪರಾಧಿ ಆಗಿದ್ದಲ್ಲಿ ಅವರಿಗೂ ನ್ಯಾಯ ಒದಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸುವುದನ್ನು ತಪ್ಪಿಸಲು ಪ್ರತೀ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ದೈಹಿಕ ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಟ್ಲ-ಉಪ್ಪಿನಂಗಡಿ ಎನ್‌ಎಸ್‌ಯುಐ ಅಧ್ಯಕ್ಷೆ ವೀರಾ ಜೆನ್ನಿಫರ್ ಡಿಸೋಜ, ಫಿಲೋಮಿನಾ ಕಾಲೇಜಿನ ಎನ್‌ಎಸ್‌ಯುಐ ಅಧ್ಯಕ್ಷ ಎಡ್ವರ್ಡ್ ಡಿಸೋಜ ಸಹಿತ ಎನ್‌ಎಸ್‌ಯುಐ ಪದಾಧಿಕಾರಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.