ಟೊಳ್ಳಾದ ಮರ ಅಪಾಯಕ್ಕೆ ಆಹ್ವಾನ: ತೆರವಿಗೆ ಇಲಾಖೆಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಡಾವು -ಸವಣೂರು ರಸ್ತೆ ನೆಕ್ರಾಜೆ ಕ್ರಾಸ್ ಬಳಿಕ ಮರವೊಂದು ಟೊಳ್ಳಾಗಿ ಅಪಾಯಕಾರಿ ಪರಿಣಮಿಸಿದ್ದು ಮರವನ್ನು ತೆರವು ಮಾಡುವಂತೆ ವಾಹನ ಸವಾರರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

 

ಎತ್ತರಕ್ಕೆ ಬೆಳೆದಿರುವ ಈ ಮರದ ಕಾಂಡ ಮುಕ್ಕಾಲು ಭಾಗದಷ್ಟು ಟೊಳ್ಳಾಗಿದೆ. ಮರದ ಎರಡೂ ಬದಿಯಲ್ಲಿ ಎಚ್ ಟಿ ವಿದ್ಯುತ್ ತಂತಿಯೂ ಇದೆ. ಈ ರಸ್ತೆಯ ಮೂಲಕ ವಾಹನ ಸಂಚಾರ ಇದ್ದು , ಶಾಲಾ ವಾಹನಗಳು ತೆರಳುತ್ತಿದೆ. ಅನಿರೀಕ್ಷಿತ ಗಾಳಿಮಳೆ ಬಂದರೆ ಈ ಮರದಿಂದ ಅಪಾಯವಾಗುವ ಸಂಭವ ಇದೆ. ಮರಗಟ್ಟಿಯಾಗಿದ್ದರೆ ಭಯಪಡುವ ಅಗತ್ಯವಿರಲಿಲ್ಲ ಟೊಳ್ಳಾಗಿ ಒಳಭಾಗದಲ್ಲಿ ಗೆದ್ದಲು ತುಂಬಿರುವ ಸಾಧ್ಯತೆ ಇದ್ದು ಗಾಳಿ ಬೀಸಿದರೆ ಅಪಾಯ ತಂದೊಡ್ಡಬಹುದು. ಅರಣ್ಯ ಇಲಾಖೆ ಮರವನ್ನು ಪರಿಸೀಲಿಸಿ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.