ನೆಕ್ಕಿಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ೩೪ ನೆಕ್ಕಿಲಾಡಿ ಹಾಲು ಉತ್ಪಾದಕರ ಸಂಘವು ೨೦೨೦-೨೧ನೇ ಸಾಲಿನಲ್ಲಿ ೩,೦೪,೪೬೨.೯೨ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ೨೦೨೧-೨೨ನೇ ಸಾಲಿನಲ್ಲಿ ೫,೧೪,೭೦೦ ರೂ. ನಿವ್ವಳ ಲಾಭ ನಿರೀಕ್ಷಿಸಬಹುದೆಂದು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಗೌಡ ಕೆ. ತಿಳಿಸಿದರು.

೩೪ ನೆಕ್ಕಿಲಾಡಿ ಗ್ರಾ.ಪಂ.ನ ರಾಜೀವ ಗಾಂಧಿ ಸೇವಾ ಕೇಂದ್ರದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಾಲು ವ್ಯವಹಾರ ವಹಿವಾಟಿನಿಂದ ೬,೨೬,೪೮೩.೧೮ ರೂಪಾಯಿ ಲಾಭ ಗಳಿಸಿದ್ದು, ಒಕ್ಕೂಟದ ಬೋನಸ್ಸಿನಿಂದ ೬೩೪೫.೦೪ ರೂ., ಒಕ್ಕೂಟದ ಡಿವಿಡೆಂಟ್‌ನಿಂದ ೧೫೨೬೦ರೂ., ಬ್ಯಾಂಕ್ ಬಡ್ಡಿಯಿಂದ ೧೪,೩೩೮ರೂ., ಬ್ಯಾಂಕ್ ಠೇವಣಿಯ ಬಡ್ಡಿಯಿಂದ ೬೨,೧೩೬ ರೂಪಾಯಿ ಲಾಭ ಗಳಿಸಿ, ಪ್ರಸಕ್ತ ಸಾಲಿನಲ್ಲಿ ಒಟ್ಟು ೩,೦೪,೪೬೨.೯೨ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದರು.

ಬಂದ ಲಾಭಾಂಶದಲ್ಲಿ ಕ್ಷೇಮನಿಧಿಗೆ ೭೬೧೧೫.೭೩ ರೂ., ಶಿಕ್ಷಣ ನಿಧಿಗೆ ೪,೫೬೬.೯೪ ರೂ., ಸದಸ್ಯರ ಬೋನಸ್ಸಿಗೆ ೧,೪೫,೪೫೭.೧೬, ಕಟ್ಟಡ ನಿಧಿಗೆ ೭,೮೩೨.೩೦ರೂ., ಉದ್ಯೋಗಿಗಳ ಬೋನಸ್ಸಿಗೆ ೪೪,೦೦೦, ಶೇರು ಡಿವಿಡೆಂಟ್‌ಗೆ ೬,೬೨೨.೬೯ರೂ., ದಾನ-ಧರ್ಮ ನಿಧಿಗೆ ೬,೯೫೩.೮೩ರೂ., ರಾಸುಗಳ ನಿಧಿಗೆ ೪೫೧೯.೯೯ರೂ., ಸಂಘದ ಉದ್ಯೋಗಿಗಳ ಕ್ಷೇಮನಿಧಿಗೆ ೨೯೩೭.೯೯ ರೂ., ಮೀಸಲು ನಿಧಿಗೆ ೫೪೫೬.೨೯ ರೂ.ವನ್ನು ವಿಂಗಡಿಸಲಾಗಿದೆ ಎಂದರು.

ಸಂಘದ ಅಭಿವೃದ್ಧಿಗೆ ಸಂಘದ ಸದಸ್ಯರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಕಾರಣವಾಗಿದ್ದು, ಎಲ್ಲರ ಸಹಕಾರವನ್ನು ಸ್ಮರಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಹೊನ್ನಪ್ಪ ನಾಯ್ಕ, ನಿರ್ದೇಶಕರಾದ ಕಿಶೋರ ಗೌಡ, ದಿವಾಕರ ಕೆ., ಚನ್ನಕೇಶವ ಎನ್., ನಾರಾಯಣ ಗೌಡ ಎನ್., ಸುರೇಶ ಪಡಿವಾಳ, ರಾಜೀವ ಪೂಜಾರಿ, ಗೀತಾ, ವಾರಿಜಾ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕೆ. ರಾಜೇಶ್ ನಾಯಕ್ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.