ಗೂಗಲ್ ಪೇ, ಫೋನ್ ಪೇ ಕ್ಯೂಆರ್ ಕೋಡ್ ಸ್ಕ್ಯಾನರ್ ಬಳಸುವ ವರ್ತಕರೇ ಎಚ್ಚರ…!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್

  • ಮನಿ ಟ್ರಾನ್ಸಾಕ್ಷನ್ ಸಕ್ಸಸ್‌ಫುಲ್‌ನಲ್ಲೂ ನಡೆಯುತ್ತೇ ಮೋಸ!

ಪುತ್ತೂರು: ನಾವು ಎಲ್ಲಿಯ ತನಕ ಮೋಸ ಹೋಗುತ್ತೇವೋ ಅಲ್ಲಿಯ ತನಕ ಮೋಸ ಮಾಡುವವರೂ ಇದ್ದೇ ಇರುತ್ತಾರೆ. ಜನರನ್ನು ಮೋಸ ಮಾಡುವುದು ಹೇಗೆ ಎಂಬ ಬಗ್ಗೆ ಪ್ರತಿನಿತ್ಯ ಒಂದಲ್ಲ ಒಂದು ಹೊಸ ವಿದ್ಯೆಯನ್ನು ಹುಡುಕುತ್ತಲೆ ಇರುತ್ತಾರೆ. ಇಂದು ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಎಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತದೆ. ಮೊಬೈಲ್ ಒಂದು ಕೈಯಲ್ಲಿದ್ದರೆ ಬೇರೇನೂ ಬೇಕಾಗಿಲ್ಲ. ಹಿಂದಿನ ಕಾಲದಲ್ಲಿ ಕ್ಯಾಶ್ ಆಂಡ್ ಕ್ಯಾಶ್ ವ್ಯವಹಾರವೇ ಹೆಚ್ಚಾಗಿತ್ತು. ಜೇಬಲ್ಲಿ ಒಂದು ಸಾವಿರ ರೂಪಾಯಿಯ ನೋಟು ಇಟ್ಟುಕೊಂಡು ಹೋಗಿ ಸಂತೆಯಿಂದ ಸಾಮಾನು ಹೊತ್ತುಕೊಂಡು ಬರುತ್ತಿದ್ದೆವು. ಆದರೆ ಇಂದು ಜೇಬಲ್ಲಿ ನೋಟುಗಳಿಲ್ಲ ಬದಲಾಗಿ ಡೆಬಿಟ್,ಕ್ರೆಡಿಟ್ ಕಾರ್ಡ್‌ಗಳು ಮತ್ತು ಸ್ಮಾರ್ಟ್‌ಫೋನ್ ತುಂಬಿಕೊಂಡಿರುತ್ತದೆ. ಕ್ಯಾಶ್‌ಲೆಸ್ ವ್ಯವಹಾರ ಎಷ್ಟು ಉತ್ತಮವೋ ಅಷ್ಟೇ ಅಪಾಯಕಾರಿಯೂ ಹೌದು ಎಂಬುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಕ್ಯಾಶ್‌ಲೆಸ್ ವ್ಯವಹಾರ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಮೋಸ ಕಟ್ಟಿಟ್ಟ ಬುತ್ತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಗೂಡಂಗಡಿಯಿಂದ ಹಿಡಿದು ಮಾಲ್‌ಗಳ ತನಕ ಒಂದು ಕ್ಯೂಆರ್ ಕೋಡ್ ಸ್ಕ್ಯಾನರ್ ಇಟ್ಟುಕೊಂಡಿರುವುದನ್ನು ನಾವು ನೋಡಿದ್ದೇವೆ. ಗೂಗಲ್‌ಪೇ, ಫೋನ್‌ಪೇ ಇತ್ಯಾದಿಗಳ ಮೂಲಕ ಸುಲಭದಲ್ಲಿ ಹಣ ಪಾವತಿಸಲು ಇಂತಹ ಸ್ಕ್ಯಾನರ್‌ಗಳು ಸಹಕಾರಿಯಾಗಿವೆ. ಆದರೆ ಇದರಲ್ಲೂ ಮೋಸ ಮಾಡುತ್ತಾರೆ ಎಂಬುದನ್ನು ನೀವು ನಂಬುತ್ತೀರಾ?

ಸ್ಕ್ಯಾನರ್‌ನಲ್ಲೂ ಮೋಸ
ನಾವು ಅಂಗಡಿಯಿಂದ ಯಾವುದಾದರೂ ವಸ್ತುಗಳನ್ನು ಖರೀದಿಸಿದ ಬಳಿಕ ಅಲ್ಲೇ ಇರುವ ಸ್ಕ್ಯಾನರ್‌ಗೆ ನಮ್ಮ ಮೊಬೈಲ್‌ನಲ್ಲಿರುವ ಗೂಗಲ್ ಪೇ, ಫೋನ್ ಪೇ ಅಥವಾ ಇನ್ನಿತರ ಹಣ ಸಂದಾಯ ಮಾಡುವ ಆಪ್ ಮುಖಾಂತರ ಸ್ಕ್ಯಾನ್ ಮಾಡಿ ಹಣ ಪಾವತಿಸುತ್ತೇವೆ. ನಾವು ಪಾವತಿ ಮಾಡಿದ ಹಣ ಅಂಗಡಿದಾತನ ಅಕೌಂಟ್‌ಗೆ ಪಾವತಿಯಾಗಿದೆ ಎಂಬುದನ್ನು ದೃಢೀಕರಿಸಲು ನಮ್ಮ ಮೊಬೈಲ್‌ನಲ್ಲಿ ಟ್ರಾನ್ಸ್‌ಸೆಕ್ಷನ್ ಸಕ್ಸಸ್‌ಫುಲ್ ಎಂಬ ಸಂದೇಶ ಬರುತ್ತದೆ. ಅದನ್ನು ನೋಡಿದ ಅಂಗಡಿಯಾತ ಓಕೆ ಅನ್ನುತ್ತಾನೆ. ಕೆಲವು ಅಂಗಡಿಯವರು ಸಕ್ಸಸ್‌ಫುಲ್ ಮೆಸೇಜ್ ನೋಡಿ ಹಣ ಬಂದಿದೆ ಅಂದುಕೊಂಡು ತಮ್ಮ ಮೊಬೈಲ್‌ನಲ್ಲಿ ಹಣ ಸಂದಾಯವಾದ ಬಗ್ಗೆ ಅಕೌಂಟ್ ಚೆಕ್ ಮಾಡಲು ಹೋಗುವುದಿಲ್ಲ. ಕೆಲವೊಮ್ಮೆ ಹಣ ಸಂದಾಯವಾದ ಮೆಸೇಜ್ ಕೂಡ ವರ್ತಕನಿಗೆ ಬರಲು ತಡವಾಗುತ್ತದೆ. ಇಲ್ಲೇ ಎಡವಟ್ಟು ಆಗುವುದು. ಮೋಸ ಮಾಡುವವ ಇಲ್ಲಿ ಭಲೇ ಚಾಲಾಕಿಯಾಗಿರುತ್ತಾನೆ. ಅಂಗಡಿಗೆ ಬಂದು ಸಾಮಾನುಗಳನ್ನು ಖರೀದಿಸಿ ಬಳಿಕ ಎಷ್ಟು ಹಣ ಎಂದು ಕೇಳುತ್ತಾನೆ. ಅದರಂತೆ ತನ್ನ ಮೊಬೈಲ್ ಅನ್ನು ಅಂಗಡಿ ಎದುರಿಟ್ಟಿರುವ ಗೂಗಲ್ ಫೇ ಸ್ಕ್ಯಾನರ್‌ಗೆ ತೋರಿಸುತ್ತಾನೆ ಬಳಿಕ ಹಣ ಕೂಡ ನಮೂದಿಸಿ ಓಕೆ ಮಾಡುತ್ತಾನೆ. ಟ್ರಾನ್ಸ್‌ಸೆಕ್ಷನ್ ಸಕ್ಸಸ್‌ಫುಲ್ ಬರುತ್ತೆ. ಆ ಮೆಸೇಜ್ ಅನ್ನು ಅಂಗಡಿದಾತನಿಗೆ ತೋರಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಹಾಗಾದರೆ ಆತ ಸ್ಕ್ಯಾನ್ ಮಾಡಿದ ಹಣ ಎಲ್ಲಿಗೆ ಹೋಯಿತು. ಇಲ್ಲೇ ಅಡಗಿರುವುದು ರಹಸ್ಯ!

ಗೆಳೆಯನ ಅಕೌಂಟ್‌ಗೆ ಬೀಳುತ್ತೆ ಹಣ
ಮೋಸ ಮಾಡುವವ ಮೊದಲೇ ಸೆಟ್ಟಿಂಗ್ ಮಾಡಿಕೊಂಡಿರುತ್ತಾನೆ. ತನ್ನ ಗೆಳೆಯನಲ್ಲಿ ಈ ಬಗ್ಗೆ ಮಾತನಾಡಿ ನಿನ್ನ ಅಕೌಂಟ್‌ಗೆ ಹಣ ಹಾಕುತ್ತೇನೆ ಮತ್ತೆ ನನ್ನ ಅಕೌಂಟ್‌ಗೆ ಕಳುಹಿಸಿದರಾಯಿತು ಎಂದು ತಿಳಿಸಿರುತ್ತಾನೆ. ಹಾಗಾದರೆ ಸ್ಕ್ಯಾನ್ ಮಾಡಿದ ಹಣ ಗೆಳೆಯನ ಅಕೌಂಟ್‌ಗೆ ಹೇಗೆ ಹೋಗುತ್ತೆ? ಇಲ್ಲಿ ಮೋಸಗಾರ ಅಂಗಡಿಯ ಎದುರು ಇಟ್ಟಿದ್ದ ಸ್ಕ್ಯಾನರ್‌ಗೆ ಮೊಬೈಲ್ ತೋರಿಸಿದ್ದು ಮಾತ್ರ ಆದರೆ ಆ ಕ್ಯೂಆರ್ ಕೋಡ್‌ಗೆ ಅದು ಸ್ಕ್ಯಾನ್ ಆಗಿರುವುದಿಲ್ಲ ಬದಲಾಗಿ ಮೋಸಗಾರ ತನ್ನ ಗೆಳೆಯನ ಗೂಗಲ್‌ಪೇ,ಪೋನ್‌ಪೇ ನಂಬರಿಗೆ ಓಕೆ ಮಾಡಿ ಅದರಲ್ಲಿ ಅಂಗಡಿಯವನಿಗೆ ಕೊಡಬೇಕಾದ ಹಣವನ್ನು ನಮೂದಿಸಿ ಅಂಗಡಿಯವನಿಗೆ ತೋರಿಸಿ ಓಕೆ ಮಾಡುತ್ತಾನೆ. ಟ್ರಾನ್ಸ್‌ಸೆಕ್ಷನ್ ಸಕ್ಸಸ್‌ಫುಲ್ ಮೆಸೇಜ್ ಅನ್ನು ಕೂಡ ಅಂಗಡಿಯವನಿಗೆ ತೋರಿಸಿ ಅಲ್ಲಿಂದ ಹೊರಡುತ್ತಾನೆ. ಆದರೆ ಇಲ್ಲಿ ಹಣ ಟ್ರಾನ್ಸಫರ್ ಆಗಿರುವುದು ಆತನ ಗೆಳೆಯನ ಅಕೌಂಟ್‌ಗೆ ಆಗಿರುತ್ತದೆ.

ವರ್ತಕರೇ ಎಚ್ಚರ..!
ವರ್ತಕರು ಬಹಳಷ್ಟು ಎಚ್ಚರದಿಂದಿರಬೇಕಾಗಿದೆ. ಆನ್‌ಲೈನ್‌ನಲ್ಲಿ ಹಣ ಪಾವತಿ ವಿಚಾರ ಬಂದಾಗ ಬಹಳಷ್ಟು ಕ್ಯಾರ್‌ಫುಲ್ ಆಗಿ ಹ್ಯಾಂಡಲ್ ಮಾಡಬೇಕಾಗಿದೆ. ಒಬ್ಬ ವ್ಯಕ್ತಿ ತನ್ನ ಶಾಫ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನರ್‌ಗೆ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡುತ್ತಾನೆ ಎಂದ ಕೂಡಲೇ ಹಣ ತಮ್ಮ ಅಕೌಂಟ್‌ಗೆ ಪಾವತಿಯಾಗಿದೆಯಾ ಎಂಬ ಬಗ್ಗೆ ಪರಿಶೀಲನೆ ಮಾಡಬೇಕು. ಹಣ ಪಾವತಿ ಬಗ್ಗೆ ಮೆಸೇಜ್ ಬರದಿದ್ದರೂ ಅಕೌಂಟ್ ಚೆಕ್ ಮಾಡಿ ಖಾತ್ರಿ ಪಡಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮೋಸ ಹೋಗುವುದು ಗ್ಯಾರಂಟಿ.

` ಕ್ಯೂಆರ್ ಕೋಡ್ ಸ್ಕ್ಯಾನರ್ ಇಟ್ಟುಕೊಂಡಿರುವ ವರ್ತಕರು ಬಹಳ ಎಚ್ಚರದಿಂದಿರಬೇಕು ಏಕೆಂದರೆ ಸ್ಕ್ಯಾನ್ ಮಾಡಿ ಹಣ ಸಕ್ಸಸ್ ಆಗಿದೆ ಎಂದು ಮೆಸೇಜ್ ತೋರಿಸಿದರೂ ತಮ್ಮ ಅಕೌಂಟ್ ಪರಿಶೀಲಿಸಿಕೊಳ್ಳುವುದು ಸೂಕ್ತ. ಮೋಸ ಮಾಡುವವರು ಯಾವ ರೀತಿಯಿಂದಾದರೂ ಮೋಸ ಮಾಡುತ್ತಾರೆ. ನನಗೂ ಈ ರೀತಿಯ ಅನುಭವ ಆಗಿದೆ’ – ನಾಸಿರ್ ಅಲ್‌ರಾಯ, ಹೊಟೇಲ್ ಉದ್ಯಮಿ ಕುಂಬ್ರ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.