ಮನೆಗೆ ವಿದ್ಯುತ್ ಸಂಪರ್ಕ ನೀಡಲು ಅಧಿಕಾರಿಗಳ ನಿರಾಕರಣೆ – ಒಂದನೇ ತರಗತಿಯಲ್ಲಿ ಓದುತ್ತಿರುವ ಮಗುವಿಗೆ ತೊಂದರೆ | ಸಹಾಯಕ ಆಯುಕ್ತರಿಗೆ ಮಹಿಳೆ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಅಕ್ರಮ ಸಕ್ರಮ ಸ್ಥಳದಲ್ಲಿನ ವಾಸದ ಮನೆಗೆ ವಿದ್ಯುತ್ ಸಂಪರ್ಕ ನೀಡದಿರುವ ಬಗ್ಗೆ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಗಡಿಕಲ್ಲು ನಿವಾಸಿ ಮಾಲತಿ ತೀರ್ಥರಾಮ ಎಂಬವರು ಪುತ್ತೂರು ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ನಾವು ಕುಟುಂಬ ಸಮೇತ ಹಲವಾರು ವರ್ಷಗಳಿಂದ ಅಕ್ರಮ ಸಕ್ರಮದ ಸ್ಥಳದಲ್ಲಿ ವಾಸವಿದ್ದೇನೆ. ನಾನು ಕೂಲಿ ಕೆಲಸ ಮಾಡಿಕೊಂಡು ವಯಸ್ಸಾದ ಅತ್ತೆ, ಏಳು ವರ್ಷದ ಹೆಣ್ಣು ಮಗಳು ಮತ್ತು ಪತಿಯವರೊಂದಿಗೆ ಜೀವನ ಸಾಗಿಸುತ್ತಿದ್ದೇನೆ. ನಮಗೆ ವಾಸದ ಮನೆಯ ಸ್ಥಳಕ್ಕೆ ಹಕ್ಕುಪತ್ರ ದೊರೆಯದ ಕಾರಣ ಡೋರ್ ನಂಬರ್ ನೀಡಲು ನಗರಸಭೆಯವರು ನಿರಾಕರಿಸಿರುತ್ತಾರೆ. ಮನೆಗೆ ಈವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ. ಈ ಬಗ್ಗೆ ಬನ್ನೂರು ಮೆಸ್ಕಾಂನಲ್ಲಿ ಸಂಪರ್ಕ ನೀಡಲು ವಿನಂತಿಸಿಕೊಂಡಾಗ ಡೋರ್ ನಂಬರ್ ಮತ್ತು ಮನೆ ತೆರಿಗೆ ರಶೀದಿ ಅಥವಾ ನಗರಸಭೆಯ ಒಪ್ಪಿಗೆ ಪತ್ರ ನೀಡಬೇಕೆಂದು ಹೇಳಿರುತ್ತಾರೆ.

ಮನೆಗೆ ವಿದ್ಯುತ್ ಸಂಪರ್ಕ ನೀಡಲು ನಗರಸಭೆಯ ಒಪ್ಪಿಗೆ ಪತ್ರ ಬಗ್ಗೆ ಸದ್ರಿ ಕಚೇರಿಯಲ್ಲಿ ವಿಚಾರಿಸಿದಾಗ ನಗರಸಭೆಯ ಅಧಿಕಾರಿಗಳು ಸದ್ರಿ ಸ್ಥಳಕ್ಕೆ ಹಕ್ಕುಪತ್ರ ದೊರೆಯದ ಕಾರಣ ನೀಡಲಾಗುವುದಿಲ್ಲವೆಂದು ತಿಳಿಸಿದ್ದಾರೆ. ನಮ್ಮ ವಾಸದ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ ನನ್ನ ಒಂದನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳಿಗೆ ಓದಲು ಬರೆಯಲು ಬಲು ತೊಂದರೆಯಾಗುತ್ತಿದೆ. ಇದರಿಂದ ಇವಳ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ. ಆದುದರಿಂದ ತಾವುಗಳು ನಮ್ಮ ಈ ಮನವಿಯನ್ನು ಗಣನೆಗೆ ತೆಗೆದುಕೊಂಡು ನಮ್ಮ ಮನೆಗೆ ವಿದ್ಯುತ್ ಸಂಪರ್ಕ ಕೊಡಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.