ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆಯವರಿಗೆ ಬೀಳ್ಕೊಡುವ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

೦ ಆದರ್ಶ ಶಿಕ್ಷಕರಾಗಿ ಸಂಸ್ಥೆಯನ್ನು ಮನೆಯ ಹಾಗೆ ಪ್ರೀತಿಸಿದವರು-ಕೃಷ್ಣಪ್ಪ

೦ ಸಕಾರಾತ್ಮಕವಾಗಿ ಯೋಚಿಸುವ ಶಿಕ್ಷಕರಾಗಿದ್ದರು-ಲೋಕೇಶ್

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ವಿಜ್ಞಾನ-ಗಣಿತ ಶಿಕ್ಷಕರಾಗಿ 18 ವರ್ಷ ಹಾಗೂ 12 ವರ್ಷಗಳ ಕಾಲ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಒಟ್ಟು 30 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ ಗೇರುಕಟ್ಟೆ ಇವರಿಗೆ ಶಾಲಾ ಎಸ್.ಡಿ.ಎಂ.ಸಿ. ಮತ್ತು ಶಿಕ್ಷಕ ವೃಂದದವರಿಂದ ಬೀಳ್ಕೊಡುವ ಸಮಾರಂಭ ಅ. 30ರಂದು ಶಾಲಾ ಸಭಾಂಗಣದಲ್ಲಿ ಜರಗಿತು.

ದಿವಾಕರ ಆಚಾರ್ಯ ಅವರ ಸಹೋದ್ಯೋಗಿಯಾಗಿದ್ದ, ಪ್ರಸಕ್ತ ಬೆಳ್ತಂಗಡಿ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಕೃಷ್ಣಪ್ಪರವರು ಮಾತನಾಡಿ ದಿವಾಕರ ಆಚಾರ್ಯರವರು ತನ್ನ ಸೇವೆಯ ಉದ್ದಕ್ಕೂ ಪ್ರಾಮಾಣಿಕತೆ, ಸರಳತೆ, ವಿನಯವಂತರಾಗಿ ಆದರ್ಶ ಶಿಕ್ಷಕರಾಗಿ ಸಂಸ್ಥೆಯನ್ನು ಮನೆಯ ಹಾಗೆ ಪ್ರೀತಿಸಿದವರು, ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ, ಶಿಕ್ಷಕರನ್ನು ತನ್ನ ಸಹೋದರ, ಸಹೋದರಿಯರಂತೆ, ಪೋಷಕರನ್ನು ಪ್ರೀತಿಯಿಂದ ಒಪ್ಪಿಕೊಂಡು ಕೆಲಸ ಮಾಡುತ್ತಿದ್ದರು. ದಿವಾಕರ ಆಚಾರ್ಯರು ಶಿಕ್ಷಕರಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಮೈಗೂಡಿಸಿಕೊಂಡಿದ್ದರು. ಶಿಸ್ತು, ಸಂಯಮದಿಂದ ಬೆಳದು ಒಳ್ಳೆಯ ಸಂಘಟಕನಾಗಿ, ಕಲಾವಿದನಾಗಿಯೂ ಗುರುತಿಸಿಕೊಂಡವರಾಗಿದ್ದು ವರ ಮುಂದಿನ ನಿವೃತ್ತ ಜೀವನದಲ್ಲಿ ಅವರಲ್ಲಿರುವ ಪ್ರತಿಭೆ ಇನ್ನಷ್ಟು ಅರಳಲಿ ಎಂದು ಹಾರೈಸಿದರು.

ಪುತ್ತೂರು ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ ದಿವಾಕರ ಆಚಾರ್ಯರವರು ಸಕಾರಾತ್ಮಕವಾಗಿ ಯೋಚಿಸುವ ಶಿಕ್ಷಕರಾಗಿದ್ದು, ನಾನು ಕಳೆದ 2 ವರ್ಷದಿಂದ ಬಹಳ ಹತ್ತಿರದಿಂದ ಅವರನ್ನು ನೋಡುತ್ತಿದ್ದು, 10ನೇ ತರಗತಿಯ ಫಲಿತಾಂಶ ಹೆಚ್ಚಿಸುವಲ್ಲಿ ಅವರ ಸಾಧನೆಯೂ ಪ್ರಮುಖವಾಗಿತ್ತು ಎಂದ ಅವರು ಅವರ ಪ್ರವೃತ್ತಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ನಿವೃತ್ತ ಶಿಕ್ಷಕ ಗುಡ್ಡಪ್ಪ ಬಲ್ಯ ಮಾತನಾಡಿ ದಿವಾಕರ ಆಚಾರ್ಯರವರು ಕೇವಲ ಶಿಕ್ಷಕರಾಗಿರಲಿಲ್ಲ, ಸಾಹಿತಿ, ಪತ್ರಕರ್ತ, ಕಲಾವಿದ, ಕಲಾ ಪ್ರೋತ್ಸಾಹಕ, ಮಾರ್ಗದರ್ಶಕರಾಗಿದ್ದರು. ಜಿಲ್ಲೆ, ರಾಜ್ಯ, ರಾಷ್ಟಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡ ಇವರು ಎಲ್ಲರೊಂದಿಗೆ ಬೆರೆಯುವ, ಸರಳ-ಸಜ್ಜನಿಕೆಯಿಂದ ತನ್ನ ಸೇವೆಯನ್ನು ಮಾಡಿದವರಾಗಿದ್ದು, ನಿವೃತ್ತ ಜೀವನ ಅವರನ್ನು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ಉಮೇಶ್ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ, ಶಿಕ್ಷಕರ ಪರವಾಗಿ ಶ್ರೀಧರ ಭಟ್,  ಶೋಭಾ, ವಿದ್ಯಾರ್ಥಿಗಳ ಪರವಾಗಿ ಶ್ವೇತಾ, ನಿಶ್ಮಿತಾ, ಅಂಕಿತಾ ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಸೀಫ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರಾಮಚಂದ್ರ ಮಣಿಯಾಣಿ, ಆದಂ ಕೊಪ್ಪಳ, ದುರ್ಗಾಮಣಿ, ಶೋಭಾ, ವನಲಕ್ಷ್ಮಿ, ದಿವಾಕರ ಆಚಾರ್ಯರವರ ಪತ್ನಿ  ಭಾರತಿ, ಪುತ್ರಿ ಸ್ವಾತಿ, ಪುತ್ರ ಸನತ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳಾದ ಅಜೀಜ್ ಬಸ್ತಿಕ್ಕಾರ್, ಚಂದಪ್ಪ ಮೂಲ್ಯ, ಇಸ್ಮಾಯಿಲ್ ಇಕ್ಬಾಲ್, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಧನ್ಯಕುಮಾರ್ ರೈ, ಕಳಿಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ಮಡಿವಾಳ, ಕೈಲಾರ್ ರಾಜ್‌ಗೋಪಾಲ್ ಭಟ್, ಡಾ. ಯತೀಶ್ ಶೆಟ್ಟಿ, ಝಕರಿಯಾ ಕೊಡಿಪ್ಪಾಡಿ, ರಾಘವೇಂದ್ರ ಆಚಾರ್, ಕೃಷ್ಣ, ಜಗದೀಶ್ ಶೆಟ್ಟಿ, ಮುನೀರ್ ದಾವೂದ್, ಉಮೇಶ್ ಅಮೀನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧೀರ್ ಕುಮಾರ್ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನ:
ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ದಿವಾಕರ ಆಚಾರ್ಯರವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಸನ್ಮಾನಿಸಿದರು. ಶಿಕ್ಷಣ ಇಲಾಖೆಯ ಇಲಾಖೆಯ ಸುಂದರ ಗೌಡ, ಹರಿಪ್ರಸಾದ್, ನವೀನ್ ಸ್ಟೀಫನ್ ವೇಗಸ್, ವಿಷ್ಣು ಪ್ರಸಾದ್ ಉಪಸ್ಥಿತರಿದ್ದರು.

ಶಿಕ್ಷಕ ವಿಜಯಕುಮಾರ್ ಸ್ವಾಗತಿಸಿ, ಪ್ರೀತ ಟಿ.ಎಂ. ವಂದಿಸಿದರು. ಸುಬ್ರಹ್ಮಣ್ಯ ಭಟ್, ಲಕ್ಷ್ಮೀಶ ನಾಯ್ಕ್, ವನಲಕ್ಷ್ಮಿ, ಅಮರ ವಾತ್ಸಲ್ಯ, ಸುಚಿತ್ರಾ ಹೊಳ್ಳ, ದೇವಕಿ, ಎಲಿಜಬೆತ್, ಸುಮಾ, ಸಿಬ್ಬಂದಿ ಸಚಿನ್ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಪ್ರಾರ್ಥನಾ ನಾಡೋಳಿ, ದೇವಕಿ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.