ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

    ಚಿತ್ರ: ಸುಧಾಕರ್ ಕಾಣಿಯೂರು

  • ರೂ 2,73,475.83   ನಿವ್ವಳ ಲಾಭ
  • ಶೇ 25 ಡಿವಿಡೆಂಡ್
  • 78ಪೈಸೆ ಬೋನಸ್                                                                                     

ಕಾಣಿಯೂರು: ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ 2020-21ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ದೋಳ್ಪಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಸಂಘವು 2020-21 ನೇ ಸಾಲಿನಲ್ಲಿ ರೂ 2,73,475.83   ನಿವ್ವಳ ಲಾಭಗಳಿಸಿದ್ದು, ಶೇ 25  ಡಿವಿಡೆಂಡ್ ಹಾಗೂ ಪ್ರತಿ ಲೀಟರ್‌ಗೆ ೭೮ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಆನಂದ ಬನೇರಿ ಘೋಷಿಸಿದರು.

ಶುದ್ಧ, ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ- ಆನಂದ ಬನೇರಿ
ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಬನೇರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಸಂಘದ ನಿರ್ದೇಶಕ ಗೋಪಾಲಕೃಷ್ಣ ಭಟ್ ಪಿಜಕ್ಕಳ ಅವರು ನೀಡಿದ್ದು, ಈ ಬಗ್ಗೆ ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗುವುದು ಎಂದರು. ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಕೆ ಮಾಡುವುದರ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಎಲ್ಲಾ ಸದಸ್ಯರೂ ಕೈಜೋಡಿಸಬೇಕೆಂದರು. ಒಟ್ಟಿನಲ್ಲಿ ಶುದ್ಧ ಮತ್ತು ಸ್ವಚ್ಚತ್ತೆಯ ಕಡೆಗೆ ಗಮನಕೊಟ್ಟು ಹಾಲನ್ನು ಪೂರೈಕೆ ಮಾಡುವಂತೆ ಕೇಳಿಕೊಂಡರು.

ಸಂಘವು ವೇಗವಾಗಿ ಪ್ರಗತಿಯನ್ನು ಹೊಂದುತ್ತಿದೆ- ಧನಂಜಯ ಕೇನಾಜೆ
ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಮಾತನಾಡಿ, ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘವು ವೇಗವಾಗಿ ಪ್ರಗತಿಯನ್ನು ಹೊಂದುತ್ತಿದ್ದು, ದ.ಕ ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವಂತಹ ಹಲವಾರು ಯೋಜನೆಗಳನ್ನು ಸಂಘದ ಸದಸ್ಯರಿಗೆ ತಲುಪಿಸುವ ಉತ್ತಮ ಸೇವೆ ಸಂಘ ಮಾಡುತ್ತಿದೆ. ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಕೆ ಮಾಡಿದಾಗ ಸಂಘ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಿದೆ ಎಂದರು.

ದ.ಕ.ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಮಾತನಾಡಿ, ಉತ್ತಮ ಗುಣಮಟ್ಟ ಹಾಗೂ ಪರಿಶುದ್ಧ ಹಾಲನ್ನು ಸಂಘಕ್ಕೆ ಪೂರೈಕೆ ಮಾಡಬೇಕು. ಸಂಘಕ್ಕೆ ಸ್ವಂತ ನಿವೇಶನ ಮಾಡಿ, ಕಟ್ಟಡ ರಚನೆ ಸಂದರ್ಭಲ್ಲಿ ಇಲಾಖೆಗಳಿಂದ ಬರುವ ಅನುದಾನವನ್ನು ಪಡೆಯಲು ಸಾಧ್ಯವಿದೆ. ಒಟ್ಟಿನಲ್ಲಿ ಶುದ್ಧ ಮತ್ತು ಸ್ವಚ್ಚತ್ತೆಯ ಕಡೆಗೆ ಗಮನಕೊಟ್ಟು ಹಾಲನ್ನು ಡೈರಿಗೆ ಪೂರೈಕೆ ಮಾಡುವಂತೆ ಕೇಳಿಕೊಂಡ ಅವರು ಮುಂದಿನ ದಿನಗಳಲ್ಲಿ ಸಂಘವು ಜಿಲ್ಲೆಯಲ್ಲಿ ಗುರುತಿಸುವಲ್ಲಿ ಎಲ್ಲರೂ ಪ್ರಯತ್ನ ಪಡಬೇಕೆಂದರು.

ಪಶುವೈದ್ಯಾಧಿಕಾರಿ ಡಾ| ಸಚಿನ್ ಕುಮಾರ್ ಮಾಹಿತಿ ನೀಡಿದರು. ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ದೋಳ್ಪಾಡಿ ಹಾ.ಉ.ಸ.ಸಂಘದ ಉಪಾಧ್ಯಕ್ಷ ಪುರಂದರ ಕೂರೇಲು, ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಪಿಜಕ್ಕಳ, ಪುಟ್ಟಣ್ಣ ಗೌಡ ಅಕ್ಕಾಜೆ, ಸೀತಾರಾಮ ಗೌಡ ಮರಕ್ಕಡ, ಸತೀಶ ಗೌಡ ಕೆಳಗಿನಮನೆ, ಮೋಹಿನಿ ಪರವ ದೋಳ್ಪಾಡಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಜಯಪ್ರಕಾಶ್ ೨೦೨೦-೨೧ನೇ ಸಾಲಿನ ವರದಿ ವಾಚಿಸಿದರು. ಸದಸ್ಯ ವೇದವ್ಯಾಸ ರೈ ಪಿಜಕ್ಕಳ ವಂದಿಸಿ, ಸಿಬ್ಬಂದಿ ಶೀಲಾವತಿ ಸಹಕರಿಸಿದರು.

ಬಹುಮಾನ ವಿತರಣೆ- ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ಶಿವರಾಮ ಡಿ.ಎಚ್ ಪ್ರಥಮ ಬಹುಮಾನ ಪಡೆದುಕೊಂಡರೆ, ಸಂಘದ ಉಪಾಧ್ಯಕ್ಷ ಪುರಂದರ ಕೂರೇಲು ದ್ವಿತೀಯ ಬಹುಮಾನ ಪಡೆದುಕೊಂಡರು. ಧರ್ಮಪಾಲ ಗೌಡ ತೃತೀಯ ಬಹುಮಾನ ಪಡೆದುಕೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.