ಕೆಮ್ಮಿಂಜೆ ದೇವಸ್ಥಾನದಲ್ಲಿ ಜಾತ್ರೋತ್ಸವದ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಹಾಗೂ ಮಹಾವಿಷ್ಣು ದೇವಸ್ಥಾನದಲ್ಲಿ ಡಿ.೮ ಹಾಗೂ ೯ರಂದು ನಡೆಯಲಿರುವ ವಾರ್ಷಿಕ ಜಾತ್ರೋತ್ಸವ ಷಷ್ಠಿ ಮಹೋತ್ಸವದ ಪೂರ್ವಭಾವಿ ಸಭೆಯು ಅ.೩೧ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

 

ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ದೈವಗಳ ನೇಮೋತ್ಸವವನ್ನು ಹಗಲು ಹೊತ್ತಿನಲ್ಲಿ ನಡೆಸಬೇಕು ಎಂಬ ಗ್ರಾಮಸ್ಥರ ಬೇಡಿಕೆಯಂತೆ ದೈವಜ್ಞರ ಮೂಲಕ ಪ್ರಶ್ನಾ ಚಿಂತನೆ ನಡೆಸಿ ತೀರ್ಮಾನಕೈಗೊಳ್ಳುವುದಾಗಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಜಾತ್ರೋತ್ಸವವನ್ನು ಪೂರ್ವಶಿಷ್ಠ ಸಂಪ್ರದಾಯದಂತೆ ನಡೆಸುವುದು. ದೀಪಾವಳಿ ಹಬ್ಬದ ಅಂಗವಾಗಿ ನ.೫ರಂದು ಸಂಜೆ ಗೋಪೂಜೆ, ದೀಪಾವಳಿ ಬಳಿಕ ದೇವಸ್ಥಾನದ ಗದ್ದೆ ಕೊಯ್ಲು ನಡೆಸುವುದು ಹಾಗೂ ದೇವಸ್ಥಾನದ ಪಾಕಶಾಲೆಯಲ್ಲಿ ಹೊಸದಾಗಿ ಅಳವಡಿಸಲಾಗಿರುವ ಅನ್ನಬೇಯಿಸುವ ಬಾಯ್ಲರ್ ಸ್ಟೀಮ್‌ನ್ನು ಜಾತ್ರೋತ್ಸವದ ಸಂದರ್ಭಲ್ಲಿ ಉದ್ಘಾಟಿಸುವುದಾಗಿ ತೀರ್ಮಾನಿಸಲಾಗಿದೆ.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಆನಂದ ಪೂಜಾರಿ, ದಯಾನಂದ, ವಿಶ್ವನಾಥ ನಾಯ್ಕ, ವಿನುತಾ ಮೋಹನ್, ಪ್ರೇಮಲತಾ ರಾವ್, ವಿಶ್ವನಾಥ ಗೌಡ, ಚಂದ್ರಶೇಖರ, ಶ್ಯಾಮಣ್ಣ, ಬಿ.ಕೆ ದೇವಪ್ಪ ಗೌಡ, ದಯಾನಂದ ಅತ್ತಾಜೆ, ಟಿ. ರಂಗನಾಥ ರಾವ್, ಗೋವರ್ಧನ್ ಶೆಟ್ಟಿ, ಉದಯ, ರೋಹನ್, ನವೀನ್ಚಂದ್ರ, ಕೆ.ದಯಾನಂದ, ಗಣೇಶ್, ಧನುಷ್, ಅವಿನಾಶ್, ಯಶಸ್ ಕೆ., ರ್ಶಋಧಿರ ಹೆಗ್ಡೆ, ನಾಗರಾಜ್ ಕೆಮ್ಮಿಂಜೆ, ದೇವಸ್ಥಾನದ ವ್ಯವಸ್ಥಾಪಕ ಪ್ರಶಾಂತ್ ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.