ನ.3ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎ.8ರಂದು ಮುಖ್ಯ ಮಂತ್ರಿಗಳಿಂದ ಉದ್ಘಾಟನೆಗೊಳ್ಳಬೇಕಿದ್ದ ವಿವೇಕಾನಂದ ವಿದ್ಯಾಸಂಸ್ಥೆಯ 70ನೇ ನೂತನ ವಿದ್ಯಾಸಂಸ್ಥೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿ.ಬಿ.ಎಸ್.ಸಿ)ಯ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ನ.3ರಂದು ನೆಹರೂನಗರದ ವಿವೇಕಾನಂದ ಕ್ಯಾಂಪಸ್ ನಲ್ಲಿ ನಡೆಯಲಿದೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷೆ ವಸಂತಿ ಕೆದಿಲ ಹೇಳಿದರು.

ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ವಿದ್ಯಾಸಂಸ್ಥೆಯ ಉದ್ಘಾಟನಾ ಸಮಾರಂಭದ ಕುರಿತು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ನ.1 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

 

ನೂತನ ಕಟ್ಟಡ ಲೋಕಾರ್ಪಣೆಯ ಸಭಾ ಕಾರ್ಯಕ್ರಮದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಟ್ಟಡ ಲೋಕಾರ್ಪಣೆ ಮಾಡಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್, ಮಂಗಳೂರು ಕೆನರಾ ಬ್ಯಾಂಕ್‌ನ ಸರ್ಕಲ್ ಆಫೀಸ್ ಜನರಲ್ ಮ್ಯಾನೇಜರ್ ಯೋಗೀಶ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಭರತ್ ಪೈ ಮಾತನಾಡಿ ಕೇಂದ್ರೀಯ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿರುವ ನಮ್ಮ ಹೊಸ ಶಿಕ್ಷಣ ಸಂಸ್ಥೆ ಅನೇಕ ವೈಶಿಷ್ಟ್ಯತೆಗಳಿಂದ ಕೂಡಿದೆ.ಆಧುನಿಕ ತಂತ್ರಜ್ಞಾನಾಧಾರಿತ ಸ್ಮಾರ್ಟ್ಟೆಕ್ನೋ ಕ್ಲಾಸ್‌ಗಳು, ಡಾ.ಅನ್ನಪೂರ್ಣ ಎಸ್.ಕಿಣಿಯವರ ಕೊಡುಗೆಯಾದ ಮೂರು ಆಯಾಮಗಳ ‘೩ ಡಿ’ ವಿಜ್ಞಾನ ಪಾರ್ಕ್,ಜಿಯೋಗ್ರಾಫಿ ಮತ್ತು ಲ್ಯಾಂಗ್ವೇಜ್ ಲ್ಯಾಬ್‌ಗಳು,ಇನ್ಫೋಸಿಸ್ ಸಹಕಾರದಲ್ಲಿ ಹೊಸ ಪೀಳಿಗೆಯ ಶಿಕ್ಷಣಕ್ಕೆ ಅನುಕೂಲವಾಗುವ ಕೋಡಿಂಗ್ ನಂತಹ ವಿಶೇಷ ತಂತ್ರಜ್ಞಾನದ ಉಚಿತ ಶಿಕ್ಷಣ, ಸ್ನಾತಕೋತ್ತರ ಪದವೀಧರರಾದ ಅನುಭವಿ ಶಿಕ್ಷಕ,ಶಿಕ್ಷಕಿ ವೃಂದ, ಮಕ್ಕಳ ಒಳಾಂಗಣ ಕ್ರೀಡೆಗಾಗಿ ಟೇಬಲ್ ಟೆನ್ನಿಸ್ ಆಟದ ಸಾಧನ ಲಭ್ಯವಿದ್ದು ಹೊರಾಂಗಣ ಕ್ರೀಡೆಗಾಗಿ ವಿಶಾಲವಾದ ಆಟದ ಬಯಲಿನೊಂದಿಗೆ ಪುಟ್ಟ ಮಕ್ಕಳಿಗಾಗಿ ವಿವಿಧ ತರಹದ ಆಟೋಪಕರಣ ವ್ಯವಸ್ಥೆ, ಮಕ್ಕಳ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಕೆ, ಮಕ್ಕಳಿಗೆ ಯೋಗ ಹಾಗೂ ಧ್ಯಾನದ ತರಬೇತಿ, ಆಸಕ್ತ ಮಕ್ಕಳಿಗೆ ನುರಿತ ಅಧ್ಯಾಪಕರಿಂದ ಸಂಗೀತ ವಾದ್ಯಗಳಾದ ತಬಲ ಮತ್ತು ಕೀಬೋರ್ಡ್ ತರಗತಿಗಳು,ಮಕ್ಕಳಿಗಾಗಿ ಆಂಫೀ ಥಿಯೇಟರ್, ಭಾರತೀಯ ಸಂಸ್ಕೃತಿಯನ್ನೊಳಗೊಂಡ ಮೊಂಟಸರಿ ಶಿಕ್ಷಣ, ಹರ್ಷ ಮತ್ತು ಬಳಗದವರು ಅಭಿವೃದ್ದಿಪಡಿಸಿರುವ ‘ಸ್ಕೂಲ್ ಆ್ಯಪ್’ ಬಳಕೆ ಮುಂತಾದ ವಿಶಿಷ್ಟತೆಗಳನ್ನು ನಮ್ಮ ಶಾಲೆ ಹೊಂದಿದೆ ಎಂದರು.

ಕೆನರಾ ಬ್ಯಾಂಕಿನ ಸಹಯೋಗದೊಂದಿಗೆ ಪ್ರಧಾನ ಮಂತ್ರಿಗಳ ಗ್ರಾಮ ವಿಕಾಸ ಯೋಜನೆಯ ಅಂಗವಾಗಿ ಪುತ್ತೂರಿನ ಆರ್ಯಾಪು ಗ್ರಾಮದ ‘ಅಜನಾಡಿ ಕೆರೆ’ ಪುನರುಜ್ಜೀವನದ ಕೆಲಸವನ್ನು ಮಾಡುವ ಮೂಲಕ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಳ್ಳುವ ಕಾರ್ಯ ಮಾಡಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಂಧು ಹಾಗೂ ಸಹಶಿಕ್ಷಕಿ ಸಹನಾ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.