ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷ ಶಾಸಕ ಸಂಜೀವ ಮಠಂದೂರು, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಡಮಜಲು ಸುಭಾಸ್ ರೈ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದ ಪ್ರತಿಷ್ಟಾ ಬ್ರಹ್ಮಕಲಶೋತ್ಸವವು ಡಿ. ೨೦ ರಿಂದ ೨೪ ರವರೆಗೆ ನಡೆಯಲಿದ್ದು, ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಈಗಾಗಲೇ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ರಚಿಸಿ ಕಾರ್ಯಾನುಷ್ಠಾನ ಆರಂಭಗೊಂಡಿರುತ್ತದೆ.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಸಂಜೀವ ಮಠಂದೂರು ಮತ್ತು ಗಣಪತಿ ಭಟ್ ಸನ್ಯಾಸಿಗುಡ್ಡೆಯವರನ್ನು ಆಯ್ಕೆ ಮಾಡಲಾಗಿದೆ. ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಶ್ರೀರಾಮ ಮಂದಿರದ ನಿಕಟಪೂರ್ವ ಅಧ್ಯಕ್ಷರೂ ಆಗಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಸ್ ರೈಯವರನ್ನು ಆಯ್ಕೆ ಮಾಡಲಾಗಿದೆ.

ಸ್ವಾಗತ ಸಮಿತಿಯ ಸಂಚಾಲಕರಾಗಿ ಯಶೋಧರ ಚೌಟ ಪಟ್ಟೆತ್ತಡ್ಕ, ಆರ್ಥಿಕ ಸಮಿತಿ ಸಂಚಾಲಕರಾಗಿ ಸಂತೋಷ್ ಕುಮಾರ್ ರೈ ಕೋರಂಗ, ಆಹಾರ ಸಮಿತಿ ಸಂಚಾಲಕರಾಗಿ ಮುಂಡಾಳಗುತ್ತು ಸುರೇಶ್ ರೈ ಮಾಣಿಪ್ಪಾಡಿ, ವೈದಿಕ ಸಮಿತಿಯ ಸಂಚಾಲಕರಾಗಿ ರಾಘವ ಗೌಡ ಕೆರೆಮೂಲೆ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ವಿಜಯ ಕುಮಾರ್ ರೈ ಕೋರಂಗ, ಅಲಂಕಾರ ಸಮಿತಿ ಸಂಚಾಲಕರಾಗಿ ರಾಕೇಶ್ ರೈ ಬೋಳೋಡಿ, ಹಸಿರುವಾಣಿ ಸಮಿತಿ ಸಂಚಾಲಕರಾಗಿ ರತನ್ ರೈ ಕುಂಬ್ರ, ಕಾರ್ಯಾಲಯ ಸಮಿತಿ ಸಂಚಾಲಕರಾಗಿ ಮುಂಡಾಳಗುತ್ತು ಪ್ರಭಾಕರ ರೈ, ವೇದಿಕೆ ಸಮಿತಿಯ ಸಂಚಾಲಕರಾಗಿ ನಿತೀಶ್ ಕುಮಾರ್ ರೈ ಕೋರಂಗ, ಪ್ರಚಾರ ಸಮಿತಿಯ ಸಂಚಾಲಕರಾಗಿ ಕೃಷ್ಣಕುಮಾರ್ ಇದ್ಯಪೆ, ನೀರಾವರಿ ಮತ್ತು ವಿದ್ಯುತ್ ಸಮಿತಿ ಸಂಚಾಲಕರಾಗಿ ನೇಮಣ್ಣ ಗೌಡ ಇದ್ಯಪೆ, ಆರೋಗ್ಯ ಸಮಿತಿಯ ಸಂಚಾಲಕರಾಗಿ ಪ್ರೇಮ ಜಯಶೀಲ ರೈ ಕೋರಂಗ, ಮಹಿಳಾ ಸಮಿತಿಯ ಸಂಚಾಲಕರಾಗಿ ವೀಣಾ ಆರ್. ರೈ ಬೆದ್ರುಮಾರ್ ಆಯ್ಕೆಯಾದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.