ಮಂಗಳಮುಖಿಯರಿಂದ ಪುಂಡಾಟ..!! ವರ್ತಕ ಸಂಘದಿಂದ ಪೊಲೀಸ್‌ ಠಾಣೆಗೆ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳಮುಖಿಯರ ಸೋಗಿನಲ್ಲಿ ಬಂದು ವ್ಯವಹಾರ ಮಳಿಗೆಗಳಲ್ಲಿ ಪುಂಡಾಟ ನಡೆಸುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ವರ್ತಕರ ಸಂಘದ ವತಿಯಿಂದ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.

ಮಂಗಳಮುಖಿಯರು ಎಂದು ಕರೆಯಲ್ಪಡುವ ತೃತಿಯ ಲಿಂಗಿಗಳು ದೇವರ ಸೃಷ್ಟಿಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ತಮ್ಮ ಹೊಟ್ಟೆಪಾಡಿಗಾಗಿ ಊರೂರು ಅಲೆದು ಬಿಕ್ಷಾಟನೆ ಮಾಡಿ ಜೀವನ ನಡೆಸುವವರು ನಮ್ಮ ಪುತ್ತೂರಿಗೂ ಈ ಮೊದಲು ಬಂದಿರುತ್ತಾರೆ. ಈ ಸಮಯದಲ್ಲಿ ಪುತ್ತೂರಿನ ವರ್ತಕರು ಇವರನ್ನು ಗೌರವ ಪೂರ್ವಕವಾಗಿ ಕಂಡು ಯಥಾನುಶಕ್ತಿ ಧನಸಹಾಯ ಮಾಡಿರುತ್ತಾರೆ ಇದಕ್ಕೆ ಪ್ರತಿಯಾಗಿ ಮಂಗಳಮುಖಿಯರು ವರ್ತಕರಿಗೆ ಹರಸಿ ತೆರಳುತ್ತಿದ್ದರು.

ಆದರೆ ಈ ಬಾರಿ ಮಂಗಳಮುಖಿಯರ ಸೋಗಿನಲ್ಲಿ ಸುಮಾರು 10 ರಿಂದ 15 ಮಂದಿ ಇರುವ ತಂಡವು ಗುಂಪುಗುಂಪಾಗಿ ಬಂದು ವ್ಯವಹಾರ ಮಳಿಗೆಗಳಿಗೆ ನುಗ್ಗಿ ವ್ಯವಹಾರದ ಸಮಯದಲ್ಲಿ ದೊಡ್ಡ ದೊಡ್ಡ ಮೊತ್ತಕ್ಕೆ ಬೇಡಿಕೆಯನ್ನು ಮಾಡುತ್ತಿದ್ದು, ಒತ್ತಾಯಪೂರ್ವಕವಾಗಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಹಣವನ್ನು ಕೊಡಲು ನಿರಾಕರಿಸಿದ್ದಲ್ಲಿ ವರ್ತಕರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿವುದು ಅಲ್ಲದೆ ಇನ್ನೂ ಕೆಲವು ಕಡೆಗಳಲ್ಲಿ ವ್ಯವಹಾರ ಮಳಿಗೆಯ ಗಾಜುಗಳನ್ನು ಪುಡಿ ಮಾಡಿದ ಪ್ರಸಂಗವೂ ನಡೆದಿರುತ್ತದೆ.

ಈ ಘಟನೆಗಳ ಬಗ್ಗೆ ವರ್ತಕ ಸಂಘಕ್ಕೆ ವರ್ತಕರಿಂದ ದೂರು ಬಂದಿರುವ ಹಿನ್ನಲೆಯಲ್ಲಿ, ವರ್ತಕರ ವ್ಯವಹಾರದ ಹಿತದೃಷ್ಟಿಯನ್ನು ಮನಗಂಡು,ಮಂಗಳಮುಖಿಯರ ಸೋಗಿನಲ್ಲಿ ವ್ಯವಹಾರ ಮಳಿಗೆಗಳಿಗೆ ಬಂದು ಪುಂಡಾಟ ನಡೆಯುವ ಈ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. 

ವರ್ತಕ ಸಂಘದ ಅದ್ಯಕ್ಷ ಜಾನ್‌ ಕುಟಿನ್ಹ,  ಪ್ರಧಾನ ಕಾರ್ಯದರ್ಶಿ ಅರವಿಂದ ಭಗವಾನ್‌ ರೈ ಹಾಗೂ ವ್ಯವಸ್ಥಾಪಕ ಉಲ್ಲಾಸ್‌ ಪೈರವರು  ವರ್ತಕ ಸಂಘದ ಪರವಾಗಿ ನಗರ ಠಾಣಾಧಿಕಾರಿಗಳಿಗೆ ದೂರು ನೀಡಲಾಗಿದೆ. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.