ಫೋನ್ ನಲ್ಲಿ ತಿಳಿಸಬಹುದಾದ ನಿವೇಶನ ಅಳತೆ ವರದಿಗೂ 5 ತಿಂಗಳು ವಿಳಂಭ !- ಸರ್ವೆ ಇಲಾಧಿಕಾರಿ ಸಮರ್ಥನೆಗೆ ಆಕ್ರೋಶಗೊಂಡ ಶಾಸಕರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರಕಾರಿ ನಿವೇಶನದ ಅಳತೆಗಾಗಿ‌ ಸರ್ವೆ ಇಲಾಖೆಗೆ ಕಳುಹಿಸಿದಾಗ ಕೇವಲ ನಿವೇಶನ ಪಟ್ಟಾ ಸ್ಥಳದಲ್ಲಿ ಇದೆ ಎಂಬ ಮಾಹಿತಿ ನೀಡಲು 5 ತಿಂಗಳು ಸನಯಾವಕಾಶ ಯಾಕೆ ಪೋನ್ ನಲ್ಲಿ ತಿಳಿಸಬಹುದಿತ್ತಲ್ಲ ಎಂಬ ವಿಚಾರದಲ್ಲಿ ಸರ್ವೆ ಇಲಾಖಾಧಿಕಾರಿ ಸಮರ್ಥನೆ ನೀಡುವ ಸಂದರ್ಭದಲ್ಲಿ ಶಾಸಕರು ಆಕ್ರೋಶಗೊಂಡು ಅಧಿಕಾರಿಯನ್ನು ತರಾಟೆಗೆತ್ತಿಕೊಂಡ ಘಟನೆ ತಾಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು.

ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಭವನಕ್ಕೆ ನಿವೇಶನಕ್ಕಾಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಲಾಗಿದ್ದು. ಆ ಸ್ಥಳದ ಅಳತೆಗಾಗಿ ಸರ್ವೆ ಇಲಾಖೆಗೆ ಕಳುಹಿಸಿ ಕೊಡಲಾಗಿತ್ತು. ಆದರೆ 5 ತಿಂಗಳಾದರೂ ಸರ್ವೆ ಇಲಾಖೆಯಿಂದ ವರದಿ ಬಾರದಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಉತ್ತರಿಸಿದ ಸರ್ವೆ ಇಲಾಖಾಧಿಕಾರಿ ಒಂದು ನಿವೇಶನ ಸರ್ವೆ ನಂಬ್ರ ಪಟ್ಟಾ ಸ್ಥಳದಲ್ಲಿದೆ. ಹಾಗಾಗಿ ಅಲ್ಲಿ ಅಳತೆ ಮಾಡಲು ಆಗುವುದಿಲ್ಲ ಎಂದು ಮಾಹಿತಿ ನೀಡಿದರು. ಇಷ್ಟು ಸಣ್ಣ ವಿಷಯ ತಿಳಿಸಲು 5 ತಿಂಗಳು ಕಾಯುವುದು ಯಾಕೆ. ಈ ವಿಚಾರವನ್ನು ಪೋನ್ ನಲ್ಲೆ ತಿಳಿಸಬಹುದಿತ್ತಲ್ಲ. ಆಗ ಬೇರೆ ಸ್ಥಳವನ್ನಾದರೂ ನೋಡಬಹುದಿತ್ತಲ್ಲ. ಯಾಕೆ ಎಲ್ಲವನ್ನು ನಿಮ್ಮ ಪ್ರಾಪರ್‌ ಚಾನಲ್ ಮಾಡಬೇಕು. ನಿಮಗೆ ಕಾಳಜಿ ಇರುತ್ತಿದ್ದರೆ ಪೋನ್ ನಲ್ಲಿ ತಿಳಿಸವಹುದಿತ್ತಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಸರ್ವೆ ಇಲಾಖಾಧಿಕಾರಿಯನ್ನು ತರಾಟೆಗೆತ್ತಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.